For Quick Alerts
ALLOW NOTIFICATIONS  
For Daily Alerts

SBI money transfer : SBI ಮೊಬೈಲ್ ಬ್ಯಾಂಕಿಂಗ್‌ನಲ್ಲಿ IMPS ಮೂಲಕ ಹಣ ವರ್ಗಾವಣೆ ಹೇಗೆ?

|

ತಕ್ಷಣ ಪಾವತಿ ವ್ಯವಸ್ಥೆ ಅಥವಾ Immediate Payment Service (IMPS) ಮೂಲಕ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಜಮಾ ಮಾಡಬಹುದಾದ ನಗದು ಮೊತ್ತದ ಗರಿಷ್ಠ ಮಿತಿಯನ್ನು 2 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ರಿಸರ್ವ್ ಬ್ಯಾಂಕ್ ಇದೇ ತಿಂಗಳು ಹೆಚ್ಚಿಸಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುವ IMPS ವ್ಯವಸ್ಥೆಯಲ್ಲಿ ವಾರದ ಏಳು ದಿನ, ದಿನದ 24 ತಾಸು ಯಾವಾಗ ಬೇಕಾದರೂ ತಕ್ಷಣ ಹಣ ವರ್ಗಾವಣೆ ಮಾಡಬಹುದು.

ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು, ಬ್ಯಾಂಕ್ ಆಫೀಸ್‌ಗಳು, ಎಟಿಎಂ, ಎಸ್‌ಎಂಎಸ್‌ ಮತ್ತು IVRS ಹೀಗೆ ಯಾವುದೇ ವಿಧಾನದಲ್ಲಿ IMPS ವ್ಯವಸ್ಥೆಯಲ್ಲಿ ಬ್ಯಾಂಕ್ ಮತ್ತು ಆರ್‌ಬಿಐನಿಂದ ಅನುಮತಿ ಪಡೆದ PPI ಗಳ ಮೂಲಕ ತಕ್ಷಣ ಹಣ ವರ್ಗಾಯಿಸಬಹುದು. IMPS ವ್ಯವಹಾರ ಮಾಡುವಾಗ ಒಂದು ವಿಷಯ ಗಮನದಲ್ಲಿರಲಿ. ಅದೇನೆಂದರೆ- ಮೊಬೈಲ್ ಮನಿ ಐಡೆಂಟಿಫಿಕೇಶನ್ ನಂಬರ್ (Mobile Money Identification Number -MMID) ಎಂಬುದು 7 ಅಂಕಿಗಳ ಸಂಖ್ಯೆಯಾಗಿದ್ದು, ಇದರಲ್ಲಿನ ಮೊದಲ 4 ಅಂಕಿಗಳು IMPS ಗೆ ಸೇವೆ ನೀಡುತ್ತಿರುವ ಬ್ಯಾಂಕಿನ ವಿಶಿಷ್ಟ ಗುರುತಿನ ಅಂಕಿಗಳಾಗಿರುತ್ತವೆ. ಈಗ ಎಸ್‌ಬಿಐ ಗ್ರಾಹಕರು ತಮ್ಮ ಮನೆಯಲ್ಲಿ ಕುಳಿತೇ ಬ್ಯಾಂಕಿನ ಎಸ್‌ಬಿಐ ಎನಿವೇರ್ ಪರ್ಸನಲ್ (SBI Anywhere Personal) ಆ್ಯಪ್ ಬಳಸಿ ತಕ್ಷಣ IMPS ಹಣ ವರ್ಗಾವಣೆ ಮಾಡಬಹುದಾಗಿದೆ. ಎಸ್‌ಬಿಐ ಮೊಬೈಲ್ ಬ್ಯಾಂಕಿಂಗ್ ಮೂಲಕ IMPS ಹಣ ವರ್ಗಾವಣೆ ಮಾಡುವ ಸ್ಟೆಪ್-ಬೈ-ಸ್ಟೆಪ್ ಗೈಡ್ ಇಲ್ಲಿದೆ.

SBI ಮೊಬೈಲ್ ಬ್ಯಾಂಕಿಂಗ್‌ನಲ್ IMPS ಟ್ರಾನ್ಸ್‌ಫರ್ ಹೇಗೆ?

SBI Anywhere Personal ಬಳಸಿ ಬೆನೆಫಿಶಿಯರಿ ಸೇರಿಸುವುದು ಹೇಗೆ?

ಎಸ್‌ಬಿಐ ಎನಿವೇರ್ ಪರ್ಸನಲ್ ಆ್ಯಪ್ ಬಳಸಿ ಬೆನೆಫಿಶಿಯರಿ ಸೇರಿಸುವ ಮುನ್ನ ಬೆನೆಫಿಶಿಯರಿಯ ಕೆಲ ಪ್ರಮುಖ ಮಾಹಿತಿಗಳನ್ನು ಪಡೆಯಬೇಕಾಗುತ್ತದೆ. IMPS ವರ್ಗಾವಣೆಯು ವ್ಯಕ್ತಿಯಿಂದ ವ್ಯಕ್ತಿಗೆ ಅಂದರೆ Person to Person ಆಗಿದ್ದರೆ ಬೆನೆಫಿಶಿಯರಿಯ MMID, ಮೊಬೈಲ್ ಸಂಖ್ಯೆ, ಹೆಸರು, ಖಾತೆ ಸಂಖ್ಯೆ ಹಾಗೂ ಖಾತೆ ಇರುವ ಬ್ಯಾಂಕಿನ IFSC ಕೋಡ್ ಬೇಕಾಗುತ್ತವೆ. ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ಎಸ್‌ಬಿಐ ಎನಿವೇರ್ ಪರ್ಸನಲ್ ಆ್ಯಪ್ ಬಳಸಿ ಬೆನೆಫಿಶಿಯರಿ ಸೇರಿಸುವುದು ಹೇಗೆಂದು ತಿಳಿಯೋಣ.

ಮೊದಲಿಗೆ www.onlinesbi.com ಗೆ ಹೋಗಿ ನಿಮ್ಮ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ.

'Profile' ಸೆಕ್ಷನ್‌ಗೆ ಹೋಗಿ 'Manage Beneficiary' ಕ್ಲಿಕ್ ಮಾಡಿ.

ಈಗ 'IMPS Beneficiary' ಆಯ್ಕೆ ಮಾಡಿ ಹಾಗೂ ಇದರಲ್ಲಿ ಅಗತ್ಯವಾದ ಎಲ್ಲ ವಿವರಗಳನ್ನು ತುಂಬಿ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈಗ ಓಟಿಪಿ ಬರುತ್ತದೆ.

ಓಟಿಪಿ ತುಂಬಿ ಬೆನೆಫಿಶಿಯರಿಯನ್ನು ಖಾತರಿಪಡಿಸಿ.

SBI Anywhere Personal ಆ್ಯಪ್ ಮೂಲಕ IMPS ಹಣ ವರ್ಗಾವಣೆ ಹೇಗೆ?

IMPS ಒಳಬರುವ ಮತ್ತು ಹೊರಹೋಗುವ ಹಣ ವರ್ಗಾವಣೆಗಳು ವಾರದ ಏಳು ದಿನವೂ ದಿನದ 24 ಗಂಟೆಯೂ ಚಾಲನೆಯಲ್ಲಿರುತ್ತವೆ. IMPS ಬೆನೆಫಿಶಿಯರುಗಳಿಗೆ ಒಟ್ಟಾರೆಯಾಗಿ 5,00,000 ರೂಪಾಯಿ ಮೊತ್ತದವರೆಗೆ ಹೊರಹೋಗುವ ನಗದು ವರ್ಗಾವಣೆಗೆ ಎಸ್‌ಬಿಐ ಅವಕಾಶ ನೀಡುತ್ತದೆ. ಒಂದು ಕ್ಯಾಲೆಂಡರ್ ದಿನದಲ್ಲಿ ಕೇವಲ ಒಬ್ಬ ಬೆನೆಫಿಶಿಯರಿಯನ್ನು ನೀವು ಸೇರಿಸಬಹುದು ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ಅವಧಿಯಲ್ಲಿ ನೀವು ಓಟಿಪಿ ಮೂಲಕ ಬೆನೆಫಿಶಿಯರಿ ಸೇರಿಸಿದ್ದರೆ 4 ಗಂಟೆಯೊಳಗೆ ಇದು ದೃಢೀಕೃತವಾಗುತ್ತದೆ. ನಿರ್ದಿಷ್ಟ ದಿನದಂದು ರಾತ್ರಿ 8 ಗಂಟೆಯ ನಂತರ ಬೆನೆಫಿಶಿಯರಿ ಸೇರಿಸಿದ್ದಲ್ಲಿ, ಅದು ಮರುದಿನ ಬೆಳಗ್ಗೆ 8 ಗಂಟೆಯ (ಭಾರತೀಯ ಕಾಲಮಾನ) ನಂತರ ದೃಢೀಕೃತವಾಗುತ್ತದೆ. ಬೆನೆಫಿಶಿಯರಿಯನ್ನು ಯಶಸ್ವಿಯಾಗಿ ಸೇರಿಸಿದ ನಂತರವಷ್ಟೇ ನೀವು ಅವರ ಖಾತೆಗೆ ಈ ಕೆಳಗಿನ ಹಂತಗಳ ಮೂಲಕ ಹಣ ವರ್ಗಾವಣೆ ಮಾಡಬಹುದು.

P2A ವರ್ಗಾವಣೆಗೆ ಅನುಸರಿಸಬೇಕಾದ ವಿಧಾನ (Phone to Account)

ನಿಮ್ಮ ಎಸ್‌ಬಿಐ ಎನಿವೇರ್ ಪರ್ಸನಲ್ ಅಕೌಂಟಿಗೆ ಮೊದಲು ಲಾಗಿನ್ ಮಾಡಿ. ಈಗ 'Fund Transfer' ಕ್ಲಿಕ್ ಮಾಡಿ ಅದರಲ್ಲಿ 'Other Bank Account' ಆಯ್ಕೆ ಮಾಡಿ.

ಈಗ ಡೆಬಿಟ್ ಅಕೌಂಟ್, IMPS ವರ್ಗಾವಣೆ ವಿಧಾನ ಹಾಗೂ ಬೆನೆಫಿಶಿಯರಿ ಖಾತೆ ಆಯ್ಕೆ ಮಾಡಿಕೊಂಡ ನಂತರ ವರ್ಗಾಯಿಸಬೇಕಿರುವ ಮೊತ್ತವನ್ನು ನಮೂದಿಸಿ.

'Submit' ಎಂಬುದನ್ನು ಕ್ಲಿಕ್ ಮಾಡಿದ ನಂತರ 'Confirm' ಒತ್ತಿ ವ್ಯವಹಾರವನ್ನು ಮತ್ತೊಮ್ಮೆ ಖಾತರಿಪಡಿಸಿ.

ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಈಗ ಓಟಿಪಿ ನಮೂದಿಸಿ ಹಾಗೂ 'Submit' ಒತ್ತುವ ಮೂಲಕ ವ್ಯವಹಾರ ಪೂರ್ಣಗೊಳಿಸಿ.

P2P ವರ್ಗಾವಣೆಗೆ ಅನುಸರಿಸಬೇಕಾದ ವಿಧಾನ (Phone to Phone)

ನಿಮ್ಮ ಎಸ್‌ಬಿಐ ಎನಿವೇರ್ ಪರ್ಸನಲ್ ಅಕೌಂಟಿಗೆ ಮೊದಲು ಲಾಗಿನ್ ಮಾಡಿ. ಈಗ 'Fund Transfer' ಕ್ಲಿಕ್ ಮಾಡಿ ಅದರಲ್ಲಿ 'IMPS-Mobile No & MMID' ಆಯ್ಕೆ ಮಾಡಿ.

ಈಗ ಡೆಬಿಟ್ ಹಾಗೂ ಕ್ರೆಡಿಟ್ ಅಕೌಂಟುಗಳನ್ನು ಆಯ್ಕೆ ಮಾಡಿ, ಮೊತ್ತ ನಮೂದಿಸಿ.

'Submit' ಕ್ಲಿಕ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.

ಓಟಿಪಿ ನಮೂದಿಸಿದ ನಂತರ 'Confirm' ಕ್ಲಿಕ್ ಮಾಡಿದರೆ ನಿಮ್ಮ ವ್ಯವಹಾರ ಪೂರ್ಣಗೊಳ್ಳುತ್ತದೆ.

English summary

How To Make IMPS Fund Transfer Through SBI Mobile Banking?

How To Make IMPS Fund Transfer Through SBI Mobile Banking? Here is a step by step guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X