For Quick Alerts
ALLOW NOTIFICATIONS  
For Daily Alerts

IPO ನಲ್ಲಿ ಹೂಡಿಕೆ ಮಾಡುವಿರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲೇಬೇಕು

|

ಅಲ್ಪಾವಧಿಯಲ್ಲಿ ಅಧಿಕ ದುಡ್ಡು ಗಳಿಸುವ ಮಾರ್ಗಗಳನ್ನು ಬಹುತೇಕರು ಹುಡುಕುವುದು ಸಹಜ. ಹೀಗೆ ಅಲ್ಪಾವಧಿಯಲ್ಲಿ ಹೆಚ್ಚು ದುಡ್ಡು ಗಳಿಸಲು IPO ಉತ್ತಮ ಮಾರ್ಗಗಳಲ್ಲೊಂದಾಗಿದೆ. ಮಾರುಕಟ್ಟೆಯ ಚಲನಶೀಲತೆಯ ಹೊರತಾಗಿ, ಮಾರುಕಟ್ಟೆಯಲ್ಲಿನ ಊಹಾಪೋಹಗಳನ್ನು ಮೀರಿ ಸರಿಯಾದ IPO ಆಯ್ಕೆ ಮಾಡಿಕೊಳ್ಳುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿದೆ. ಹಾಗಾದರೆ, IPO ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಮುಖ್ಯವಾಗಿ ನೋಡಬೇಕಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.

IPO ಆಯ್ಕೆ ಮಾಡುವಾಗ ಗಮನದಲ್ಲಿಡಬೇಕಾದ ಅತಿ ಮುಖ್ಯ ಅಂಶಗಳು

1. DRHP (draft red herring prospectus) ಯನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುವುದು ಮತ್ತು ಸಂಗ್ರಹಿಸಿದ ಫಂಡ್ ಅನ್ನು ಕಂಪನಿ ಯಾವ ರೀತಿಯಲ್ಲಿ ವಿನಿಯೋಗಿಸಲಿದೆ ಎಂಬುದನ್ನು ತಿಳಿಯುವುದು:
ಉದಾಹರಣೆಗೆ ನೋಡುವುದಾದರೆ- IPO ದಿಂದ ಸಂಗ್ರಹಿಸಲಾದ ಮೊತ್ತವನ್ನು ಸಂಪೂರ್ಣವಾಗಿ ಕಂಪನಿಯ ಹಳೆಯ ಸಾಲಗಳನ್ನು ತೀರಿಸಲು ಬಳಸಲು ಉದ್ದೇಶಿಸಲಾಗಿದ್ದರೆ ಅಂಥ IPO ಬಗ್ಗೆ ಉತ್ತಮ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗದು. ಸಾಲ ತೀರಿಸುವ ಇಂಥ ಕ್ರಮದಿಂದ ದೀರ್ಘಾವಧಿಯಲ್ಲಿ ಏನಾದರೂ ಸಕಾರಾತ್ಮಕ ಪರಿಣಾಮಗಳಿದ್ದರೆ ಮಾತ್ರ ಈ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಕಂಪನಿಯ ಟ್ರ್ಯಾಕ್ ರೆಕಾರ್ಡ್, ಹಣಕಾಸು ಪರಿಸ್ಥಿತಿ, ಕಂಪನಿಗೆ ಉತ್ತಮ ಆಡಳಿತ ನೀಡಬಲ್ಲ ಮ್ಯಾನೇಜಮೆಂಟ್ ಇವೇ ಮುಂತಾದ ಅಂಶಗಳನ್ನು ನೋಡಬೇಕಾಗುತ್ತದೆ. ಬಹುತೇಕ ಈ ಎಲ್ಲ ಮಾಹಿತಿಯು DRHP ಯಲ್ಲಿಯೇ ಸಿಗುತ್ತದೆ.

IPO ನಲ್ಲಿ ಹೂಡಿಕೆ ಮಾಡುವಿರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲೇಬೇಕು

2. ಉದ್ಯಮದ ಬೆಳವಣಿಗೆಗೆ ಪೂರಕವಾದ ಅಂಶಗಳು ಹಾಗೂ ಕಂಪನಿಯು IPO ಹೊರಡಿಸಿದ ಸಂದರ್ಭ ಕಂಪನಿಯ ಕಾರ್ಯಕ್ಷೇತ್ರದ ಉದ್ಯಮ ವಲಯಕ್ಕಿರುವ ಬೆಳವಣಿಗೆಯ ಅವಕಾಶಗಳು ಹಾಗೂ ಅಂಥ ಅವಕಾಶಗಳು ಬಂದಾಗ ಅವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಕಂಪನಿಯ ಸಾಮರ್ಥ್ಯದ ಅಂಶಗಳು ಹೂಡಿಕೆದಾರರ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಒಂದು ವೇಳೆ ಕಂಪನಿಯ ವ್ಯವಹಾರದ ಮಾದರಿಯನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ ಅಂಥ ಕಂಪನಿಯಲ್ಲಿ ಹೂಡಿಕೆ ಮಾಡದಿರುವುದೇ ಲೇಸು. ಆರಂಭಿಕ IPO ಲಾಭದ ಆಸೆಗಾಗಿಯೂ ಇಂಥ ಕಂಪನಿಯಲ್ಲಿ ಹೂಡಿಕೆ ಮಾಡಬಾರದು.

3. ಪ್ರಮೋಟರ್ಸ್ ಮತ್ತು ಮ್ಯಾನೇಜಮೆಂಟ್ ಪಾತ್ರ ಪ್ರೈಮರಿ ಮಾರ್ಕೆಟ್‌ನಲ್ಲಿ IPO ಹೊರಡಿಸಿದ ನಂತರ ಬಹುತೇಕ ಸಂದರ್ಭಗಳಲ್ಲಿ ಪ್ರಮೋಟರ್ಸ್ ತಮ್ಮ ಹೂಡಿಕೆಯನ್ನು ಹಿಂಪಡೆದು ಬಿಡುತ್ತಾರೆ. ಆದರೆ, ಕಾಯ್ದೆಯ ಪ್ರಕಾರ ಪ್ರಮೋಟರ್ಸ್ ಹೂಡಿಕೆ ಹಿಂತೆಗೆದುಕೊಂಡರೂ ಕನಿಷ್ಠ ಶೇ 20 ರಷ್ಟು ಹೂಡಿಕೆಯನ್ನು ಪ್ರಮೋಟರ್ಸ್ ಹೊಂದಿರುವುದು ಕಡ್ಡಾಯವಾಗಿದೆ.

4. ಮೌಲ್ಯ IPO ದರ ಎಷ್ಟಿದೆ ಎಂಬುದು ಬಹಳ ಮುಖ್ಯ ಅಂಶವಾಗಿದೆ. ಖರೀದಿಯ ನಂತರ ಮಾರಾಟ ದರ ಎಷ್ಟಿರಬಹುದು ಹಾಗೂ ಲಾಭ ಗಳಿಸಲು ದರ ಎಷ್ಟಿದ್ದರೆ ಸೂಕ್ತ ಎಂಬ ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ. ದೊಡ್ಡ ಪ್ರತಿಷ್ಠಿತ ಕಂಪನಿಯಾಗಿದೆ ಎಂಬ ಒಂದೇ ಕಾರಣಕ್ಕೆ ವಾಸ್ತವಕ್ಕಿಂತ ಅಧಿಕ ಬೆಲೆ ತೆತ್ತು IPO ಖರೀದಿಸುವುದು ಅಗತ್ಯವಿಲ್ಲ. IPO ಬೆಲೆಯ ಕುರಿತಾಗಿ ಇದೇ ವಲಯದಲ್ಲಿನ ಇತರ ಮುಂಚೂಣಿ ಕಂಪನಿಗಳಿಗೆ ಹೋಲಿಕೆ ಮಾಡಿ ನೋಡಬೇಕಾಗುತ್ತದೆ.

5. ನಿಮ್ಮ ರಿಸ್ಕ್ ತಡೆಯುವ ಸಾಮರ್ಥ್ಯ ಹಾಗೂ ಹೂಡಿಕೆ ತಂತ್ರಗಳ ಬಗ್ಗೆ ನಿರ್ಧರಿಸಿ ಕಷ್ಟಪಟ್ಟು ದುಡಿದ ಹಣವನ್ನು ಯಾವುದೇ IPO ನಲ್ಲಿ ಹೂಡಿಕೆ ಮಾಡುವ ಮುಂಚೆ ಆ ಕಂಪನಿಯ ಮೂಲ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ನೋಡಬೇಕು. ದೀರ್ಘಾವಧಿಗೆ ಹೂಡಿಕೆ ಇಟ್ಟುಕೊಳ್ಳಬಯಸುವಿರಾ ಅಥವಾ ಕೇವಲ ಲಿಸ್ಟಿಂಗ್ ಲಾಭ ಪಡೆಯಲು ಬಯಸುವಿರಾ ಎಂಬ ಬಗ್ಗೆ ನಿಖರವಾಗಿ ನಿರ್ಧರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಮಾರುಕಟ್ಟೆಯ ಚಲನಶೀಲತೆಗಳು ಸಹ ನಿಮ್ಮ ನಿರ್ಧಾರವನ್ನು ಬದಲಿಸಬಲ್ಲವು. ಒಟ್ಟಾರೆಯಾಗಿ ಲಾಭ ತರಬಲ್ಲ IPO ಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಜಾಣತನದ ಕ್ರಮವಾಗಿದೆ.

English summary

How To Make The Right IPO Choice?

How To Make The Right IPO Choice? Here is a detailed description in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X