For Quick Alerts
ALLOW NOTIFICATIONS  
For Daily Alerts

ಮೂರು ವರ್ಷ ಕೆನಡಾದಲ್ಲಿ ಗೃಹಬಂಧನದಲಿದ್ದ ಚೀನಾದ ಮೆಂಗ್ ವಾನ್ಜ್ !

By ರಂಗಸ್ವಾಮಿ ಮೂಕನಹಳ್ಳಿ
|

ವಾವೈ (ಚೀನಿಯರ ಉಚ್ಚಾರಣೆ ) ಹಾವೈ ಸಂಸ್ಥೆಯ ಎಕ್ಸಿಕ್ಯುಟಿವ್ ಮೆಂಗ್ ವಾನ್ಜ್ ಶನಿವಾರ ತಡರಾತ್ರಿ ಚೀನಾ ದೇಶಕ್ಕೆ ಮರಳಿದ್ದಾರೆ. ಮೆಂಗ್ ಅವರನ್ನ ಡಿಸೆಂಬರ್ 2018 ರಂದು ಕೆನಡಾ ದೇಶದ ವ್ಯಾಂಕೋವರ್ ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಶನಿವಾರ ಅಂದರೆ 25 ಸೆಪ್ಟೆಂಬರ್ 2021ರ ವರೆಗೆ ಇವರನ್ನ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇರಾನ್ ದೇಶದ ವಿರುದ್ಧ ಅಮೇರಿಕಾ ಹೊರಡಿಸಿದ್ದ ನಿಬಂಧನೆಗಳ ವಿಷಯದಲ್ಲಿ ಮೋಸ ಮಾಡಿದ ಆರೋಪವನ್ನ ಮೆಂಗ್ ಮೇಲೆ ಹೊರಿಸಲಾಗಿತ್ತು.

 

ಟ್ರಂಪ್ ಸರಕಾರ ಇದನ್ನ ಚೀನಾದ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಮಾಡಿದ್ದಾರೆ . ಇದು ರಾಜಕೀಯ ಪ್ರೇರಿತ ಎಂದು ಬೀಜಿಂಗ್ ಹಲವು ಬಾರಿ ಜಾಗತಿಕ ಮೀಡಿಯಾಗಳ ಬಳಿ ಅಲವತ್ತುಕೊಂಡಿತ್ತು. ಇದರ ಮಧ್ಯೆ ಕೆನಡಾ ದೇಶದ ಜೊತೆಗೆ ಕೂಡ ಚೀನಾದ ಸಂಬಂಧ ಹಳಸಿ ಹೋಗಿತ್ತು. ಇಬ್ಬರು ಕೆನಡಾ ದೇಶದ ಪ್ರಜೆಗಳನ್ನ ಚೀನಾ ತನ್ನ ನೆಲದಲ್ಲಿ ಬಂಧಿಸಿ ಗೃಹ ಬಂಧನದಲ್ಲಿ ಇರಿಸಿತ್ತು. ಅಮೆರಿಕಾದ ರಾಜಕೀಯ ನಡೆಗೆ ಸಹಾಯ ಮಾಡಿದ್ದಕ್ಕೆ ಕೆನಡಾ ವಿರುದ್ಧ ಚೀನಾ ಈ ರೀತಿಯಲ್ಲಿ ಸೇಡು ತೀರಿಸಿಕೊಂಡಿತ್ತು.

 
ಮೂರು ವರ್ಷ ಕೆನಡಾದಲ್ಲಿ ಗೃಹಬಂಧನದಲಿದ್ದ ಚೀನಾದ ಮೆಂಗ್ ವಾನ್ಜ್ !

ರಾಜ ತಾಂತ್ರಿಕ ಮಾತುಕತೆಗಳು ಕಳೆದ ಮೂರು ವರ್ಷದಿಂದ ಯಾವುದೇ ಪಲಿತಾಂಶವನ್ನ ನೀಡಿರಲಿಲ್ಲ. ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ವಿಚಾರಣೆಯನ್ನ 2022 ರ ಅಂತ್ಯದ ವೇಳೆಗೆ ಪ್ರಾರಂಭಿಸುವುದಾಗಿ ಹೇಳಿರುವ ಕಾರಣ , ಮೆಂಗ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಅವರನ್ನ ಮರಳಿ ಚೀನಾ ದೇಶಕ್ಕೆ ಹೋಗಲು ಅನುಮತಿಯನ್ನ ನೀಡಿದೆ.

ಬೀಜಿಂಗ್ ನಲ್ಲಿ ಮೆಂಗ್ ಆಗಮನವನ್ನ ರಾಜತಾಂತ್ರಿಕ ಗೆಲುವುದು ಎನ್ನುವ ರೀತಿಯಲ್ಲಿ ಆಚರಿಸಲಾಗುತ್ತಿದೆ. ಇದರ ಜೊತೆಗೆ ಬಂಧಿತವಾಗಿದ್ದ ಇಬ್ಬರು ಕೆನಡಿಯನ್ ಪ್ರಜೆಗಳನ್ನ ಕೂಡ ಬಿಡುಗಡೆ ಮಾಡಿದೆ.

ಚೀನಾದ ದಕ್ಷಿಣದಲ್ಲಿರುವ ಶೇನ್ ಜ್ಹೆನ್ ನಗರದಲ್ಲಿರುವ ಹಾವೈ ಕೇಂದ್ರ ಕಛೇರಿಯಲ್ಲಿ ಮೆಂಗ್ ಅವರನ್ನ ಅದ್ದೂರಿಯಾಗಿ ಸ್ವಾಗತವನ್ನ ಮಾಡಲಾಗಿದೆ. ಚೀನಾ ಸರಕಾರ ಇವರನ್ನ ಕರೆಸಿಕೊಳ್ಳಲು ವಿಶೇಷ ಚಾರ್ಟರ್ಡ್ ವಿಮಾನದ ವ್ಯವಸ್ಥೆಯನ್ನ ಮಾಡಿತ್ತು.

ಚೀನಾಗೆ ಮರಳಿದ ನಂತರ ಮಾಡಿದ ಪ್ರಥಮ ಭಾಷಣದಲ್ಲಿ ಮರಳಿ ತಾಯಿ ನಾಡಿಗೆ ಮರಳಿದ್ದು ಸಂತೋಷ ತಂದಿದೆ. ಇದಕ್ಕೆ ಕಾರಣವಾದ ಅಧ್ಯಕ್ಷ ಜಿಂಪಿಂಗ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಪ್ರತಿಯೊಬ್ಬ ಚೀನಿ ಪ್ರಜೆಯ ಜೀವದ ಬಗ್ಗೆ ಅಧ್ಯಕ್ಷರಿಗೆ ಬಹಳ ಕಾಳಜಿಯಿದೆ ಎನ್ನುವುದನ್ನ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಏತನ್ಮಧ್ಯೆ ಕೆನಡಾ ಅಧ್ಯಕ್ಷರು ತನ್ನ ನಾಡಿಗೆ ಮರಳಿದೆ ಇಬ್ಬರು ಪ್ರಜೆಗಳಿಗೆ ಸ್ವಾಗತವನ್ನ ಕೋರಿ ಟ್ವೀಟ್ ಮಾಡಿದ್ದು ಕೂಡ ಒಂದಷ್ಟು ಸದ್ದು ಮಾಡಿದೆ .

ಜಾಗತಿಕ ರಾಜಕೀಯ ಚದುರಂಗದಾಟದಲ್ಲಿ ಕೆಲವೊಮ್ಮೆ ಕಾರ್ಪೊರೇಟ್ ಮತ್ತು ವಿತ್ತ ಜಗತ್ತಿನ ಜನ ಕೂಡ ದಾಳವಾಗುತ್ತಾರೆ.

English summary

Huawei CFO Meng Wanzhou home after Canada prisoner swap

A senior executive of Huawei has returned home after a high-stakes prisoner swap brought to an end a three-year standoff with the US and Canada. Know more:
Story first published: Monday, September 27, 2021, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X