For Quick Alerts
ALLOW NOTIFICATIONS  
For Daily Alerts

ಹೈಡ್ರೋಜನ್ ಮಿಷನ್: ಅಂಬಾನಿ, ಟಾಟಾ, ಮಹೀಂದ್ರಾರನ್ನು ಒಂದಾಗಿಸಬಹುದು!

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22 ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಘೋಷಿಸಿದರು. ಈ ಯೋಜನೆಯು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ, ಮತ್ತು ಮಹೀಂದ್ರಾರಂತಹ ದೊಡ್ಡ ದೊಡ್ಡ ಕಂಪನಿಗಳನ್ನು ಒಂದುಗೂಡಿಸಬಹುದು. ಭೂಮಿಯ ಮೇಲೆ ಹೇರಳವಾಗಿರುವ ಅಂಶಗಳನ್ನು ಲಾಭ ಮಾಡಿಕೊಳ್ಳಲು ಭಾರತದ ದೊಡ್ಡ ದೊಡ್ಡ ಕಂಪನಿಗಳು ಒಂದಾಗಬೇಕಾಗಬಹುದು.

 

ಮುಂಬೈ ಮೂಲದ ಥಿಂಕ್ ಟ್ಯಾಂಕ್ ಗೇಟ್‌ವೇ ಹೌಸ್‌ನ ಬಾಹ್ಯಾಕಾಶ ಮತ್ತು ಸಾಗರ ಅಧ್ಯಯನಗಳ ಸಹವರ್ತಿ ಚೈತನ್ಯ ಗಿರಿ, ಮೀಥೇನ್ ಎಕಾನಮಿ ಕುರಿತ ತನ್ನ ಪ್ರಬಂಧದಲ್ಲಿ "ಇಂಡಿಯನ್ ಆಯಿಲ್, ಟಾಟಾಸ್, ಮಹೀಂದ್ರಾಸ್, ಈಚರ್ ಮುಂತಾದ ಕಂಪನಿಗಳು ಒಕ್ಕೂಟದ ಭಾಗವಾಗಬಹುದು. ರಿಲಯನ್ಸ್‌ನಂತಹ ವಿಶೇಷ ರಾಸಾಯನಿಕ ಕಂಪನಿಗಳು ಸಹ ಅದರ ಭಾಗವಾಗಬಹುದು" ಎಂದು ಬಿಸಿನೆಸ್ ಇನ್‌ಸೈಡರ್‌ಗೆ ತಿಳಿಸಿದರು.

 

ಯಾವುದೇ ಕಂಪನಿ ಅಥವಾ ಉದ್ಯಮವು ಇದರಿಂದ ಹಿಂದುಳಿಯಲು ಸಾಧ್ಯವಿಲ್ಲ ಎಂದು ಗಿರಿ ಹೇಳಿದ್ದಾರೆ. ಏಕೆಂದರೆ ಇದಕ್ಕೆ ಸೇರ್ಪಡೆಗೊಳ್ಳಲು ವಾಹನ ವಲಯ, ಇಂಧನ ಕಂಪನಿಗಳು, ವಿಶೇಷ ರಾಸಾಯನಿಕಗಳು ಮತ್ತು ಸುಧಾರಿತ ವಸ್ತುಗಳ ಕಂಪನಿಗಳು ಬೇಕಾಗುತ್ತವೆ. ಹೈಡ್ರೋಜನ್ ಸ್ಫೋಟಕ ಅಂಶವಾಗಿರುವುದರಿಂದ ಕಾರುಗಳನ್ನು ಸಂಸ್ಕರಿಸಲು, ಇಂಧನ ಕೇಂದ್ರಗಳಿಗೆ ಮತ್ತು ತಂತ್ರಜ್ಞಾನದ ಅಗತ್ಯವಿರುತ್ತದೆ.

 ಹೈಡ್ರೋಜನ್ ಮಿಷನ್: ಅಂಬಾನಿ, ಟಾಟಾ, ಮಹೀಂದ್ರಾರನ್ನು ಒಂದಾಗಿಸಬಹುದು!

ಜರ್ಮನಿ ಈಗಾಗಲೇ ಹೈಡ್ರೋಜನ್ ಒಕ್ಕೂಟದಲ್ಲಿ ಭಾಗಿಯಾಗಿದ್ದು, 2023 ರ ವೇಳೆಗೆ 400 ಹೈಡ್ರೋಜನ್ ಇಂಧನ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಭಾರತವು ನಾರ್ವೆ, ಸ್ವೀಡನ್ ಅಥವಾ ನ್ಯೂಜಿಲೆಂಡ್‌ನ ಸಹಾಯವನ್ನು ಪಡೆಯಬಹುದು. ಆದರೆ ಅದಕ್ಕೂ ಮೊದಲು ಭಾರತ ತನ್ನ ಯೋಜನೆಯ ಪೂರೈಕೆಗೆ ಅಗತ್ಯವಿರುವುದನ್ನು ಅಳೆಯಬೇಕಿದೆ.

English summary

Why Ambanis, Tatas, Mahindras need to work together for India's new Hydrogen Mission

India's New hydrogen mission bring together bigwigs like Ambani, Tata, and Mahindra and some of the biggest companies in India, including Reliance Industries as well as Indian Oil Corporation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X