For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಮೇಲೆ ಐಟಿ ದಾಳಿ: 70 ಕೋಟಿ ರೂ.ಸುಳ್ಳು ಲೆಕ್ಕ ಬಯಲಿಗೆ

|

ಬೆಂಗಳೂರು, ಅಕ್ಟೋಬರ್ 18: ಆದಾಯ ತೆರಿಗೆ ಇಲಾಖೆಯು ರಾಜ್ಯ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜಕೀಯ‌ ಪಕ್ಷಗಳ ಪ್ರಚಾರ ಹೊಣೆ ಹೊತ್ತಿದ್ದ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಕ್ಯಾಂಪೇನ್ ಮ್ಯಾನೇಜ್​ಮೆಂಟ್ ಕಂಪನಿಗಳ ಮೇಲೆ ಬೆಂಗಳೂರು ಸೇರಿ ದೇಶದ ಏಳು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿಯಲ್ಲಿ ಸುಮಾರು 70 ಕೋಟಿ‌ ರೂಪಾಯಿ ಸುಳ್ಳು ಲೆಕ್ಕ ತೋರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.‌

ದಾಳಿ ವೇಳೆ ಹವಾಲಾ ಅಪರೇಟರ್​​ಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವೈಯಕ್ತಿಕ ಖರ್ಚುಗಳನ್ನ ಬ್ಯುಸಿನೆಸ್ ಖರ್ಚಿನಡಿ ಕಂಪನಿ ಲೆಕ್ಕ ತೋರಿಸಿರುವುದು ಬೆಳಕಿಗೆ ಬಂದಿದೆ. ಕುಟುಂಬಸ್ಥರ ಹಾಗೂ ನೌಕರರ ಹೆಸರಿನಲ್ಲಿ ಐಷಾರಾಮಿ ಕಾರು ಖರೀದಿಸಿ ತೆರಿಗೆ ವಂಚಿಸಿದೆ.

ಇದೇ ವೇಳೆ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಕಂಪನಿ ಮೇಲೂ ಐಟಿ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ದಾಖಲಾತಿ‌ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ. ಭೋಗಸ್ ಬಿಲ್, ಖರ್ಚುಗಳು, ಸಬ್ ಕಾಂಟ್ರಾಕ್ಟ್ ಹೆಸರಲ್ಲಿ ಹಣದ ವ್ಯವಹಾರ ನಡೆಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಸುಮಾರು 70 ಕೋಟಿಯಷ್ಟು ಭೋಗಸ್ ಖರ್ಚು ವೆಚ್ಚ ಪತ್ತೆಯಾಗಿರುವುದು ಕಂಡು ಬಂದಿದೆ.

ಡಿಜಿಟಲ್ ಕಂಪನಿ ಮೇಲೆ ಐಟಿ ದಾಳಿ ಪ್ರಕರಣ:70 ಕೋಟಿ ರೂ. ಸುಳ್ಳು ಲೆಕ್ಕ

ತೆರಿಗೆ ವಂಚನೆ‌ ಆರೋಪದಡಿ ಕೆಲ ದಿನಗಳ ಹಿಂದೆ ನಗರದ ಡಿಜಿಟಲ್‌ ಮಾರ್ಕೆಟಿಂಗ್ ಕಂಪನಿಯಾದ 'ಡಿವೈಸ್ ಬಾಕ್ಸ್' ಮೇಲೆ ಐಟಿ ದಾಳಿ ನಡೆಸಿದ್ದರು. ಬೆಂಗಳೂರು, ಸೂರತ್, ಚಂಡೀಗಢ ಹಾಗೂ ಮೊಹಾಲಿ ಸೇರಿ ಏಳು‌ ಕಡೆಗಳಲ್ಲಿ ದಾಳಿ ನಡೆಸಿ‌ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದರು.

ಆಸ್ತಿಗಳ ಮೇಲೆ ಸುಮಾರು 7 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಈ ವೇಳೆ ದಾಖಲೆಯಿಲ್ಲದ 1.95 ಕೋಟಿ ನಗದು ಹಣ 65 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ ತನಿಖೆ‌ ಮುಂದುವರೆಸಿರುವುದಾಗಿ ಐಟಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕುಟುಂಬಸ್ಥರ ಹಾಗೂ ನೌಕರರ ಹೆಸರಿನಲ್ಲಿ ಐಷಾರಾಮಿ ಕಾರು ಖರೀದಿಸಿ ತೆರಿಗೆ ವಂಚಿಸಿದೆ. ಇದೇ ವೇಳೆ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಕಂಪನಿ ಮೇಲೂ ಐಟಿ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ದಾಖಲಾತಿ‌ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ.

ಭೋಗಸ್ ಬಿಲ್, ಖರ್ಚುಗಳು, ಸಬ್ ಕಾಂಟ್ರಾಕ್ಟ್ ಹೆಸರಲ್ಲಿ ಹಣದ ವ್ಯವಹಾರ ನಡೆಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಸುಮಾರು 70 ಕೋಟಿಯಷ್ಟು ಭೋಗಸ್ ಖರ್ಚು ವೆಚ್ಚ ಪತ್ತೆಯಾಗಿರುವುದು ಕಂಡು ಬಂದಿದೆ.

ಆಸ್ತಿಗಳ ಮೇಲೆ ಸುಮಾರು 7 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಈ ವೇಳೆ ದಾಖಲೆಯಿಲ್ಲದ 1.95 ಕೋಟಿ ನಗದು ಹಣ 65 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ ತನಿಖೆ‌ ಮುಂದುವರೆಸಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಿಗಳ ನಿರ್ದೇಶಕರು ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕಂಪನಿಯ ಹೆಸರು ಪ್ರಸ್ತಾಪಿಸದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ" ಕಂಪನಿಯೊಂದರ ಮೇಲೆ ದಾಳಿ ನಡೆಸಿದಾಗ ಸುಮಾರು ಏಳು ಕೋಟಿ ರೂಪಾಯಿ ಹಣ ಹವಾಲ ಮೂಲಕ ವರ್ಗಾವಣೆ ಮಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಲೆಕ್ಕಕ್ಕೆ ಸಿಗದ ಹಣವನ್ನು ಹವಾಲಾ ಆಪರೇಟರ್‌ಗಳ ಮೂಲಕ ವರ್ಗಾವಣೆ ಆಗಿದೆ.

ಘನ ತಾಜ್ಯ ನಿರ್ವಹಣೆ ಮಾಡುವ ಸಂಬಂಧ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದ್ದು, ಘನ ತಾಜ್ಯ ವರ್ಗಾವಣೆ, ಘನ ತಾಜ್ಯ ಸಂಗ್ರಹ ಕುರಿತು ದೇಶದ ಮುನಿಸಿಪಾಲಿಟಿಗಳಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಕಂಪನಿಗಳು ಅಕ್ರಮ ಎಸಗಿವೆ. ನಕಲಿ ಬಿಲ್ ಸೃಷ್ಟಿ ಜತೆಗೆ ಉಪ ಗುತ್ತಿಗೆ ನಿಡಿ ಸುಮಾರು 70 ಕೋಟಿ ರೂ. ವಂಚನೆ ಮಾಡಿರುವ ಸಂಬಂಧ ಮಹತ್ವದ ದಾಖಲೆಗಳು ಜಪ್ತಿಯಾಗಿವೆ.

ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಐಟಿ ದಾಳಿಗೆ ಒಳಗಾದ ಕಂಪನಿಗೆ ಸೇರಿದ ಏಳು ಕೋಟಿ ರೂಪಾಯಿ ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದೆ. ಅಲ್ಲದೇ , 1.95 ಕೋಟಿ ರೂ. ಮೌಲ್ಯದ ಅಕ್ರಮ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ

English summary

I-T Raids On Firms Working On Congress’s Political Campaign Finds Unaccounted Investments Worth Rs 7 Crore

The Income Tax department’s recent raids on digital marketing and campaign management firms in several states, including Karnataka, has unearthed unaccounted investments worth Rs 7 crore and bogus expenses of around Rs 70 crore.
Story first published: Monday, October 18, 2021, 9:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X