For Quick Alerts
ALLOW NOTIFICATIONS  
For Daily Alerts

ICICI ಬ್ಯಾಂಕ್ ಎಫ್‌ಡಿ ಬಡ್ಡಿದರ ಪರಿಷ್ಕರಣೆ: ಇತ್ತೀಚಿನ ದರ ತಿಳಿದುಕೊಳ್ಳಿ

|

ಐಸಿಐಸಿಐ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ(ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ. ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿಗಳನ್ನು 2.5% ರಿಂದ 6.3% ವರೆಗೆ ನೀಡಲಿದ್ದು, ಹೊಸ ಬಡ್ಡಿದರಗಳನ್ನು ಪ್ರಕಟಿಸಿದೆ.

ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 29 ದಿನಗಳ ಠೇವಣಿಗಳ ಮೇಲೆ 2.5% ಬಡ್ಡಿಯನ್ನು ನೀಡುತ್ತಿದೆ. ಅ ಇದಲ್ಲದೆ, 3 ತಿಂಗಳಿನಿಂದ 6 ತಿಂಗಳವರೆಗೆ ಎಫ್‌ಡಿ ಮೇಲೆ 3.5% ಬಡ್ಡಿ ನೀಡಲಾಗುತ್ತಿದೆ. 185 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ಡಿಗೆ 4.40% ಬಡ್ಡಿ ನೀಡಲಾಗುತ್ತಿದೆ.

ICICI ಬ್ಯಾಂಕ್ ಎಫ್‌ಡಿ ಬಡ್ಡಿದರ ಪರಿಷ್ಕರಣೆ: ಇತ್ತೀಚಿನ ದರ ಇಲ್ಲಿದೆ

1 ವರ್ಷದಿಂದ 18 ತಿಂಗಳವರೆಗಿನ ಎಫ್‌ಡಿಗಳಿಗೆ 4.9% ಬಡ್ಡಿ ನೀಡಲಾಗುತ್ತಿದೆ. 18 ತಿಂಗಳಿಂದ 2 ವರ್ಷಗಳ ಎಫ್‌ಡಿಗಳಿಗೆ 5% ಬಡ್ಡಿ ನೀಡಲಾಗುತ್ತಿದೆ. 2 ವರ್ಷದಿಂದ 3 ವರ್ಷಗಳ ಎಫ್‌ಡಿಗಳಿಗೆ 5.15% ಬಡ್ಡಿ ನೀಡಲಾಗುತ್ತಿದೆ. 3 ವರ್ಷದಿಂದ 5 ವರ್ಷಗಳವರೆಗೆ 5.35% ಬಡ್ಡಿ , 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿಗಳಿಗೆ 5.50 ಬಡ್ಡಿ ನೀಡಲಾಗುತ್ತಿದೆ.

ಹಿರಿಯ ನಾಗರಿಕರಿಗೆ ಬಡ್ಡಿದರಗಳು

ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 1 ತಿಂಗಳ ಎಫ್‌ಡಿಗಳಿಗೆ 3% ಬಡ್ಡಿ ನೀಡುತ್ತದೆ. ಅದೇ ಸಮಯದಲ್ಲಿ, 1 ತಿಂಗಳಿಂದ 3 ತಿಂಗಳ ಎಫ್‌ಡಿಗಳಿಗೆ 3.5% ಬಡ್ಡಿ ಹಾಗೂ ಇದಲ್ಲದೆ 91 ದಿನಗಳಿಂದ 184 ದಿನಗಳವರೆಗೆ ಎಫ್‌ಡಿಗಳಿಗೆ 4% ಬಡ್ಡಿ ನೀಡಲಾಗುತ್ತಿದೆ. ಇನ್ನು 185 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ಡಿಗಳಿಗೆ 4.90% ಬಡ್ಡಿ ನೀಡಲಾಗುತ್ತಿದೆ.

1 ವರ್ಷದಿಂದ ಒಂದೂವರೆ ವರ್ಷಕ್ಕಿಂತ ಕಡಿಮೆ ಎಫ್‌ಡಿಗಳು 5.4% ಬಡ್ಡಿಯನ್ನು ಪಡೆಯುತ್ತಿವೆ. ಎಫ್‌ಡಿಗಳಿಗೆ 2 ವರ್ಷಗಳವರೆಗೆ 5.5% ಬಡ್ಡಿ ನೀಡಲಾಗುತ್ತಿದೆ. 2 ವರ್ಷದಿಂದ 3 ವರ್ಷಗಳ ಎಫ್‌ಡಿಗಳಿಗೆ 5.65% ಬಡ್ಡಿ , 3 ವರ್ಷದಿಂದ 5 ವರ್ಷಗಳ ಎಫ್‌ಡಿ ಮೇಲೆ 5.85% ನಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ.

English summary

ICICI Bank Fixed Deposit New Interest Rates

ICICI Bank offers FDs across different tenures, ranging from 7 days 10 years. Check the latest interest rates On FD
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X