For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ತೀವ್ರ ಆರ್ಥಿಕ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ Icra

|

ದೇಶೀಯ ರೇಟಿಂಗ್ ಏಜೆನ್ಸಿ Icra ಭಾರತದ FY21 ಬೆಳವಣಿಗೆ ದರವನ್ನು (ಜಿಡಿಪಿ) ಮೈನಸ್ 5 ಪರ್ಸೆಂಟ್ ಗೆ ಇಳಿಸಿದೆ. ಜತೆಗೆ ತೀವ್ರ ಆರ್ಥಿಕ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದೆ. ತೀರಾ ಸಾಮಾನ್ಯ ಆರ್ಥಿಕ ಬೆಂಬಲ, ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮತ್ತು ಕಾರ್ಮಿಕರ ಕೊರತೆಯ ಕಾರಣವನ್ನು ಗಮನದಲ್ಲಿ ಇಟ್ಟುಕೊಂಡು ಈ ಎಚ್ಚರಿಕೆ ನೀಡಿದೆ.

 

ಕೇಂದ್ರ ಸರ್ಕಾರವು ಈಗ ಘೋಷಣೆ ಮಾಡಿರುವ ಆರ್ಥಿಕ ಉತ್ತೇಜನ ಕ್ರಮಗಳ ಮೊತ್ತ ಜಿಡಿಪಿಯ 10 ಪರ್ಸೆಂಟ್ ನಷ್ಟು ಅಥವಾ 20.9 ಲಕ್ಷ ಕೋಟಿ ಎಂದು ಹೇಳಿಕೊಳ್ಳುತ್ತಿದೆ. ಆದರೆ ತಜ್ಞರ ಪ್ರಕಾರ, ಒಟ್ಟಾರೆ ಪ್ಯಾಕೇಜ್ ಪ್ರಮಾಣ ಜಿಡಿಪಿಯ 0.8ರಿಂದ 1.2 ಪರ್ಸೆಂಟ್ ಮಾತ್ರ. ಎರಡು ಹಂತಗಳಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದಾಗಲೇ ಬೆಳವಣಿಗೆಯಲ್ಲಿ ಅಲ್ಪ ಇಳಿಕೆ ಬಗ್ಗೆ ತಜ್ಞರು ಎಚ್ಚರಿಸಿದ್ದರು.

ಲಾಕ್ ಡೌನ್ ವಿಸ್ತರಣೆ ಪರಿಣಾಮ

ಲಾಕ್ ಡೌನ್ ವಿಸ್ತರಣೆ ಪರಿಣಾಮ

ಮೇ ತಿಂಗಳ ಕೊನೆ ತನಕ ಲಾಕ್ ಡೌನ್ ವಿಸ್ತರಣೆ, ಪೂರೈಕೆ ಜಾಲದಲ್ಲಿ ವ್ಯತ್ಯಯ, ಹತ್ತಾರು ಲಕ್ಷ ಕಾರ್ಮಿಕರು ತವರು ರಾಜ್ಯಗಳಿಗೆ ವಾಪಸ್ ಆಗಿದ್ದು... ಈ ಎಲ್ಲ ಅಂಶಗಳು ಸೇರಿ 2020-21ರ ಮೊದಲನೇ ತ್ರೈಮಾಸಿಕ ಬೆಳವಣಿಗೆಗೆ ಹೊಡೆತ ನೀಡಿತು. ಜೊತೆಗೆ ನಿರೀಕ್ಷೆ ಮಾಡಿದ್ದಕ್ಕಿಂತ ಚೇತರಿಕೆ ನಿಧಾನ ಆಗಬಹುದು ಎಂದು Icra ತಿಳಿಸಿದೆ.

ಬೆಳವಣಿಗೆ 25 ಪರ್ಸೆಂಟ್ ಕಡಿಮೆ

ಬೆಳವಣಿಗೆ 25 ಪರ್ಸೆಂಟ್ ಕಡಿಮೆ

ಅದರಂತೆ, ಆರ್ಥಿಕ ವರ್ಷ 2020- 21ಕ್ಕೆ ಬೆಳವಣಿಗೆಯು 5 ಪರ್ಸೆಂಟ್ ಕಡಿಮೆ ಆಗಬಹುದು. ಈ ಹಿಂದೆ 1- 2 ಪರ್ಸೆಂಟ್ ನಿರೀಕ್ಷೆ ಮಾಡಿದ್ದೆವು ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ ಮೊದಲ ತ್ರೈಮಾಸಿಕದಲ್ಲಿ 16-20 ಬೆಳವಣಿಗೆ ಕಾಣಬಹುದು ಎಂಬ ಅಂದಾಜಿತ್ತು. ಆದರೆ ಈಗ 25 ಪರ್ಸೆಂಟ್ ಕಡಿಮೆ ಆಗುವಂತಿದೆ. ಇನ್ನು ಎರಡನೇ ತ್ರೈ ಮಾಸಿಕಕ್ಕೆ 2.1 ಪರ್ಸೆಂಟ್ ಬೆಳವಣಿಗೆ ನಿರೀಕ್ಶ್ಗೆ ಮಾಡಲಾಗಿತ್ತು. ಆದರೆ 2.1 ಪರ್ಸೆಂಟ್ ಬೆಳವಣಿಗೆ ಕುಗ್ಗಬಹುದು ಎನ್ನಲಾಗಿದೆ.

ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ
 

ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ

ಆದರೆ, ಮೂರನೇ ತ್ರೈಮಾಸಿಕಕ್ಕೆ 2.1 ಪರ್ಸೆಂಟ್ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ (ಈ ಹಿಂದಿನ ಅಂದಾಜು 3.6 ಪರ್ಸೆಂಟ್ ಇತ್ತು). ಇನ್ನು ನಾಲ್ಕನೇ ತ್ರೈಮಾಸಿಕಕ್ಕೆ 5 ಪರ್ಸೆಂಟ್ ಬೆಳವಣಿಗೆ ಅಂದಾಜಿದೆ. ಕೊರೊನಾ ಕಾರಣಕ್ಕೆ ಹಲವು ಬಾರಿ ಲಾಕ್ ಡೌನ್ ವಿಸ್ತರಣೆ ಮಾಡಿದ್ದರಿಂದ ಸಮಸ್ಯೆಗಳು ಹೆಚ್ಚಾಗಿ, ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ಮರಳುವಂತಾಯಿತು ಎಂದು ಕಾರ್ಮಿಕ ಸಮಸ್ಯೆ ಬಗ್ಗೆ ತಿಳಿಸಲಾಗಿದೆ.

English summary

ICRA Warns Deep Recession In India

Due to Corona pandemic effect ICRA warns deep recession in India. Here is the complete details.
Story first published: Thursday, May 21, 2020, 11:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X