For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಐಡಿಯಾ ಸಂಪರ್ಕ ಬಂದ್ ಆದ್ರೆ ದೇಶದ ಮೇಲೆ ಭಾರೀ ಪರಿಣಾಮ!

|

ದೇಶದ ಬಹುದೊಡ್ಡ ಟೆಲಿಕಾಂ ಸಂಪರ್ಕವನ್ನು ಹೊಂದಿರುವ ವೊಡಾಫೋನ್ ಐಡಿಯಾ ಸಂಪರ್ಕವನ್ನು ಕಡಿತಗೊಳಿಸಿಬಿಟ್ಟರೆ ಏನ್ ಗತಿ ಎಂಬುದು ಭಾರತದ ಮಾರುಕಟ್ಟೆಯಲ್ಲಿ ಸದ್ಯ ಓಡಾಡುತ್ತಿರುವ ಮಾತಾಗಿದೆ. ಇದಕ್ಕೆ ಕಾರಣ ಹೊಂದಾಣಿಕೆಯ ಒಟ್ಟು ಆದಾಯ ( AGR ) ಬಾಕಿ ಹಣವನ್ನು ಕೂಡಲೇ ಪಾವತಿಸಬೇಕಾಗಿ ಬಂದಿರುವ ಪರಿಸ್ಥಿತಿ.

ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿ ಹಣ ಪಾವತಿಸುವ ವಿಚಾರವಾಗಿ ಮೊದಲ ಹಂತದಲ್ಲಿ 2,500 ಕೋಟಿಯನ್ನಷ್ಟೇ ಹಣ ಪಾವತಿ ಮಾಡುತ್ತೇವೆ ಎಂದು ವೊಡಾಫೋನ್ ಐಡಿಯಾ ಮನವಿಯನ್ನು ಸೋಮವಾರ (ಫೆಬ್ರವರಿ 18)ದಂದು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಇದರಿಂದ ವೊಡಾಫೋನ್-ಐಡಿಯಾ ಮುಂದಿನ ನಡೆ ಏನು ಎಂಬುದು ಪ್ರಶ್ನೆ ಮೂಡಿಸಿದೆ.

ವೊಡಾಫೋನ್ ಐಡಿಯಾ ಉಳಿಸಿಕೊಳ್ಳದೆ ಹೊರತು ಭಾರತವು ತನ್ನ ಆರ್ಥಿಕತೆಯಲ್ಲಿ ಹಲವಾರು ಶತಕೋಟಿ ಡಾಲರ್ ನಷ್ಟ ಅನುಭವಿಸಬೇಕಾಗುತ್ತದೆ. ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಹೂಡಿಕೆ ಮಾಡುವ ಸ್ಥಳವಾಗಿ ಕಳಂಕಿತ ಖ್ಯಾತಿಯನ್ನು ಹೊರಬೇಕಾಗುತ್ತದೆ.

4,729 ಕೋಟಿ ರುಪಾಯಿ ಸ್ಪೆಕ್ಟ್ರಂ ಶುಲ್ಕ ಬಾಕಿ ಮತ್ತು 28,309 ಕೋಟಿ ರುಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53,038 ಕೋಟಿ ರುಪಾಯಿಗಳನ್ನು ವೊಡಾಫೋನ್ ಐಡಿಯ ಸರ್ಕಾರಕ್ಕೆ ಪಾವತಿಸಬೇಕಿದೆ. ಇದನ್ನು ಪಾವತಿಸದಿದ್ದರೆ ಕಂಪನಿ ಮುಚ್ಚಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

ಒಂದೇ ಸಾರಿ ಬಾಕಿ ಪಾವತಿಸಲು ಸಾಧ್ಯವಿಲ್ಲ ಎಂದಿರುವ ವೊಡಾಫೋನ್ ಐಡಿಯಾ

ಒಂದೇ ಸಾರಿ ಬಾಕಿ ಪಾವತಿಸಲು ಸಾಧ್ಯವಿಲ್ಲ ಎಂದಿರುವ ವೊಡಾಫೋನ್ ಐಡಿಯಾ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬ್ರಿಟನ್‌ನ ವೊಡಾಫೋನ್ ಗ್ರೂಪ್ ಪಿಎಲ್‌ಸಿ ಮತ್ತು ಭಾರತದ ಐಡಿಯಾ ಸೆಲ್ಯುಲಾರ್‌ನ ಜಂಟಿ ಉದ್ಯಮವಾದ ವೊಡಾಫೋನ್ ಐಡಿಯಾ ಸದ್ಯ ಏನು ಮಾಡುವುದು ಎಂದು ತೋಚದೆ ಕಂಗಾಲಾಗಿ ಬಿಟ್ಟಿದೆ.

ಅದು ನೀಡಬೇಕಿದ್ದ 3.9 ಶತಕೋಟಿ ಹಣವನ್ನು (ಸುಮಾರು 53,038 ಕೋಟಿ ರುಪಾಯಿ) ತಕ್ಷಣವೇ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಮತ್ತು ಅದು ಭಾರತದಲ್ಲಿ ಉಳಿದುಕೊಳ್ಳುವ ಸಾಮರ್ಥ್ಯವು ಸರ್ಕಾರವು ಹೊಂದಿಕೊಳ್ಳುವ ಪಾವತಿ ವೇಳಾಪಟ್ಟಿಯ ಮೇಲೆ ಅನಿಶ್ಚಿತವಾಗಿದೆ. ಅಂದರೆ ಹಣ ಪಾವತಿಗಾಗಿ ಸರ್ಕಾರವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂಬಂತಾಗಿದೆ.

 

ವೊಡಾಫೋನ್ ಐಡಿಯಾ ಬಂದ್ ಆದರೆ ಆರ್ಥಿಕತೆ ಮೇಲೆ ಪರಿಣಾಮ

ವೊಡಾಫೋನ್ ಐಡಿಯಾ ಬಂದ್ ಆದರೆ ಆರ್ಥಿಕತೆ ಮೇಲೆ ಪರಿಣಾಮ

ವೊಡಾಫೋನ್ ಐಡಿಯಾ ಏನಾದರೂ ಸಂಪರ್ಕವನ್ನು ಕಡಿತಗೊಳಿಸಿದರೆ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಕಳೆದ 11 ವರ್ಷಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯು ಈ ಟೆಲಿಕಾಂ ಕಂಪನಿಗಳು ಹಿಂದೆ ಸರಿದರೆ ಪರಿಣಾಮವನ್ನು ಎದುರಿಸಲಿದೆ. ಏಕೆಂದರೆ ಸುಮಾರು 3.8 ಬಿಲಿಯನ್ ಡಾಲರ್ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಹೊಂದಿದೆ.

''ಇಷ್ಟು ದೊಡ್ಡ ಪ್ರಮಾಣದ ವಸೂಲಾಗದ ಸಾಲವು ಭಾರತದ ಹಣಕಾಸಿನ ಕೊರತೆಯನ್ನು ಸುಮಾರು 40 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಬಹುದು "ಎಂದು ಮೋತಿಲಾಲ್ ಓಸ್ವಾಲ್‌ನ ಸಂಶೋಧನಾ ವಿಶ್ಲೇಷಕ ಅಲಿಯಾಸ್ಗರ್ ಶಕೀರ್ ಹೇಳಿದ್ದಾರೆ.

 

ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿಯಷ್ಟು ನಷ್ಟ ಸಾಧ್ಯತೆ

ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿಯಷ್ಟು ನಷ್ಟ ಸಾಧ್ಯತೆ

ಹಣಕಾಸಿನ ಕೊರತೆಯ 40 ಬೇಸಿಸ್ ಪಾಯಿಂಟ್ ಹೆಚ್ಚಳವಾದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರುಪಾಯಿಗಳ (14.01 ಬಿಲಿಯನ್ ಡಾಲರ್) ಆದಾಯ ನಷ್ಟವನ್ನು ಎದುರಿಸಬೇಕಾಗುತ್ತದೆ. ಇದು ದಶಕಗಳಲ್ಲಿ ದೇಶದ ಮೊದಲ ನೇರ ತೆರಿಗೆ ಕುಸಿತವನ್ನು ಎದುರಿಸುತ್ತಿದೆ.

ಏರ್‌ಟೆಲ್-ಜಿಯೋ ನಡುವಿನ ಪೈಪೋಟಿ ತಗ್ಗಬಹುದು

ಏರ್‌ಟೆಲ್-ಜಿಯೋ ನಡುವಿನ ಪೈಪೋಟಿ ತಗ್ಗಬಹುದು

ಮತ್ತೊಂದು ವಿಷಯವೆಂದರೆ ವೊಡಾಫೋನ್ ಐಡಿಯಾ ಒಂದು ವೇಳೆ ಭಾರತದಿಂದ ನಿರ್ಗಮನವಾದರೆ, ಮೂಲಭೂತವಾಗಿ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ನಡುವೆ ದ್ವಂದ್ವವನ್ನು ಬಿಡುತ್ತದೆ. ಅಂದರೆ ಹೆಚ್ಚಿನ ತಿಕ್ಕಾಟ ಇಲ್ಲದೆ ಪೈಪೋಟಿ ತಗ್ಗಬಹುದು. ಇದು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಗೆ ಮತ್ತಷ್ಟು ಲಾಭ ತಂದುಕೊಡಬಹುದು.

5G ತರಂಗಗಳ ಹರಾಜಿನ ಮೇಲಿನ ಆಸಕ್ತಿಯೂ ತಗ್ಗಬಹುದು

5G ತರಂಗಗಳ ಹರಾಜಿನ ಮೇಲಿನ ಆಸಕ್ತಿಯೂ ತಗ್ಗಬಹುದು

ಈ ವರ್ಷದ ಮಾರ್ಚ್‌ ಅಂತ್ಯದ ಮೊದಲು ನಿರೀಕ್ಷಿಸಲಾಗಿರುವ 5G ತರಂಗಗಳ ಹರಾಜಿನ ಪ್ರಕ್ರಿಯೆ ಮೇಲೆ ದೇಶದ ಟೆಲಿಕಾಂ ಉದ್ಯಮಗಳ ಕಣ್ಣಿದೆ. ಆದರೆ ವೊಡಾಫೋನ್ ಐಡಿಯಾ ಸಂಪರ್ಕ ಕಡಿತಗೊಳಿಸಿ ನಿರ್ಗಮನಗೊಂಡರೆ 5G ತರಂಗಗಳ ಹರಾಜಿನ ಆಸಕ್ತಿಯನ್ನು ಕುಗ್ಗಿಸಬಹುದು. ಇದರಿಂದ ದೇಶವು ಭಾರೀ ಪ್ರಮಾಣದ ಆದಾಯ ನಷ್ಟ ಎದುರಿಸಬೇಕಾಗುತ್ತದೆ.

ಹೆಸರನ್ನು ಹೇಳಲು ಇಚ್ಚಿಸದ ವೊಡಾಫೋನ್ ಐಡಿಯಾದ ಮಾಜಿ ಕಾರ್ಯನಿರ್ವಾಹಕರ ಪ್ರಕಾರ ಹೂಡಿಕೆಗಳನ್ನು ತಡೆಯುವ ಅಪಾಯ ಹೆಚ್ಚು ಎಂದಿದ್ದಾರೆ.

"ಇಲ್ಲಿನ ಪರಿಸರದಿಂದ ಅವರನ್ನು ಹೊಡೆದುರುಳಿಸಲಾಗಿದೆ" ಎಂದು ಕಾರ್ಯನಿರ್ವಾಹಕ ಹೇಳಿದರು. " ಅಂದರೆ ಹೂಡಿಕೆದಾರರಿಗೆ ಈ ಮೂಲಕ ಬಹಳ ನಕಾರಾತ್ಮ ಸಂದೇಶವನ್ನು ರವಾನಿಸಿದಂತಾಗುತ್ತದೆ. ಸರ್ಕಾರ ಮತ್ತು ಉದ್ಯಮ ನಡುವಿನ ವಿಶ್ವಾಸ ಅಂಶವು ಅಸ್ತಿತ್ವದಲ್ಲಿಲ್ಲ ಎಂದು ಅದು ಹೇಳುತ್ತದೆ.

 

English summary

If Vodafone Idea Disconnects What Will Happen To Indian Economy

India faces a multi-billion-dollar hit to its economy and reputation if vodafone idea disconnects
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X