For Quick Alerts
ALLOW NOTIFICATIONS  
For Daily Alerts

ಭಾರತದ ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಹಾಡಿಹೊಗಳಿದ ಐಎಂಎಫ್

|

ನವದೆಹಲಿ, ಅ. 13: ವೃದ್ಧಾಪ್ಯ ಪಿಂಚಣಿ, ಪಿಎಂ ಕಿಸಾನ್ ಇತ್ಯಾದಿ ಹಲವು ಯೋಜನೆಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇದು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್, ಅಥವಾ ನೇರ ಹಣ ವರ್ಗಾವಣೆ ವ್ಯವಸ್ಥೆ. ಇದರಿಂದ ಮಧ್ಯವರ್ತಿಗಳ ಆಟಕ್ಕೆ ಕಡಿವಾಣ ಬಿದ್ದಂತಾಗಿದೆ. ಹಣ ಪೋಲಾಗುವ ಸಾಧ್ಯತೆಯನ್ನು ತಪ್ಪಿಸಿದೆ. ಈ ಡಿಬಿಟಿ ವ್ಯವಸ್ಥೆಯ ಅನುಕೂಲತೆಗೆ ಹಲವು ಮೆಚ್ಚಿಕೊಂಡಿರುವುದುಂಟು. ಈ ಪಟ್ಟಿಗೆ ಈಗ ಐಎಂಎಫ್ ಕೂಡ ಸೇರಿದೆ.

 

ಭಾರತದಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳ ಲಾಭವನ್ನು ಜನರಿಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಒಂದು ರೀತಿಯಲ್ಲಿ ಲಾಜಿಸ್ಟಿಕ್ ಮಾರ್ವೆಲ್ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಣ್ಣಿಸಿದೆ. ಭಾರತದಿಂದ ಬಹಳಷ್ಟು ಕಲಿಯುವುದು ಇದೆ. ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕಲು ತಂತ್ರಜ್ಞಾನವನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಭಾರತ ಉದಾಹರಣೆ ಆಗಿದೆ ಎಂದು ಅದು ಹೇಳಿದೆ. ಸಾಮಾಜಿ ಯೋಜನೆಗಳನ್ನು ಜನರಿಗೆ ತಲುಪಿಸಲು ಆಧಾರ್ ನಂತಹ ತಂತ್ರಜ್ಞಾನದ ನೆರವನ್ನು ಪಡೆದಿರುವುದೂ ಐಎಂಎಫ್‌ನ ಮೆಚ್ಚುಗೆಗೆ ಪಾತ್ರವಾಗಿದೆ.

 

ಭದ್ರಾವತಿ ಉಕ್ಕು ಕಾರ್ಖಾನೆ ಮಾರುವ ಪ್ರಯತ್ನ ಸದ್ಯ ವಿಫಲಭದ್ರಾವತಿ ಉಕ್ಕು ಕಾರ್ಖಾನೆ ಮಾರುವ ಪ್ರಯತ್ನ ಸದ್ಯ ವಿಫಲ

ಸರಕಾರಿ ದತ್ತಾಂಶದ ಪ್ರಕಾರ 2013ರಿಂದೀಚೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಪರ್ ಮೂಲಕ 24.8 ಲಕ್ಷ ಕೋಟಿ ರೂ ಹಣವನ್ನು ಜನರ ಖಾತೆಗೆ ನೇರವಾಗಿ ಹಾಕಲಾಗಿದೆ. 2021-22ರ ಹಣಕಾಸು ವರ್ಷವೊಂದರಲ್ಲೇ 6.3 ಲಕ್ಷ ಕೋಟಿ ಹಣ ಡಿಬಿಟಿ ಮೂಲಕ ವರ್ಗಾವಣೆ ಆಗಿದೆ. ಇದು ಸಾಮಾನ್ಯ ಸಂಗತಿಯಲ್ಲ.

"ಭಾರತದಿಂದ ಬಹಳಷ್ಟು ಕಲಿಯುವುದಿದೆ. ವಿಶ್ವಾದ್ಯಂತ ಇನ್ನೂ ಕೆಲ ನಿದರ್ಶನಗಳಿಂದಲೂ ನಾವು ಕಲಿಯುವುದಿದೆ. ಪ್ರತಿಯೊಂದು ಖಂಡ ಹಾಗು ಪ್ರತೀ ಆದಾಯ ಹಂತದಲ್ಲೂ ನಮಗೆ ಇಂಥ ಉದಾಹರಣಗಳಿವೆ... ಆದರೆ, ಭಾರತ ಬಹಳ ಗಮನ ಸೆಳೆಯುತ್ತದೆ" ಎಂದು ಐಎಂಎಫ್‌ನಲ್ಲಿ ಹಣಕಾಸು ವ್ಯವಹಾರ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಪಾವೋಲೊ ಮೌರೋ ಅವರು ಹೇಳಿದ್ದಾರೆ.

ವಯಸ್ಸು ಮೀರುವ ಮುನ್ನ ಈ ನಾಲ್ಕು ಹೂಡಿಕೆ ತಪ್ಪದೇ ಮಾಡಿವಯಸ್ಸು ಮೀರುವ ಮುನ್ನ ಈ ನಾಲ್ಕು ಹೂಡಿಕೆ ತಪ್ಪದೇ ಮಾಡಿ

"ಭಾರತದಂಥ ಬೃಹತ್ ದೇಶದಲ್ಲಿ ಈ ಯೋಜನೆಯನ್ನು ಎಲ್ಲರಿಗೂ ತಲುಪಿಸುವುದು, ಅದರಲ್ಲೂ ಕಡಿಮೆ ಆದಾಯ ಮಟ್ಟದ ಕೋಟ್ಯಂತರ ಜನರಿಗೆ ಕರಾರುವಾಕ್ಕಾಗಿ ತಲುಪಿಸುವುದು ಅದ್ಭುತ ವ್ಯವಸ್ಥೆಯೇ" ಎಂದು ಡಿಬಿಟಿ ವ್ಯವಸ್ಥೆಯನ್ನು ಪಾವೋಲೊ ಮೌರೊ ಮೆಚ್ಚಿಕೊಂಡಿದ್ದಾರೆ.

ಭಾರತದ ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಹಾಡಿಹೊಗಳಿದ ಐಎಂಎಫ್

ಮಹಿಳೆಯರು, ಹಿರಿಯರು, ರೈತರು ಇತ್ಯಾದಿ ಬೇರೆ ಬೇರೆ ಗುಂಪು ಮತ್ತು ಸಮುದಾಯಗಳಿಗೆ ನಿರ್ದಿಷ್ಟವಾದ ಯೋಜನೆಗಳಿವೆ. ಇದನ್ನು ಆಯಾ ಫಲಾನುಭವಿಗಳಿಗೆ ತಲುಪಿಸುವುದಕ್ಕೆ ತಂತ್ರಜ್ಞಾನದ ವಿಶೇಷತೆ ಬೇಕಾಗುತ್ತದೆ. ಭಾರತದಲ್ಲಿ ಆಧಾರ್ ವ್ಯವಸ್ಥೆಯನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ" ಎಂದು ಐಎಂಎಫ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಬೇರೆ ದೇಶಗಳಿಗೆ ಭಾರತ ಸ್ಫೂರ್ತಿ?

ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ಭಾರತದ ಮಾದರಿ ಈಗ ಎಲ್ಲರಿಗೂ ಆದರ್ಶವಾಗುವಂತೆ ತೋರುತ್ತಿದೆ. ಭಾರತದಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನವನ್ನು ಬೇರೆಡೆಯಲ್ಲೂ ಅಳವಡಿಸುವತ್ತ ಐಎಂಎಫ್ ಚಿಂತನೆ ನಡೆಸಿದೆ. ವಿವಿಧ ದೇಶಗಳಲ್ಲಿರುವ ವ್ಯವಸ್ಥೆಗಳನ್ನು ಪರಸ್ಪರ ತುಲನೆ ಮಾಡಿ ವಿಶ್ವಾದ್ಯಂತ ಅಳವಡಿಸಬಹುದಾ ಎಂದು ಯೋಚಿಸಲಾಗುತ್ತಿದೆ. ಆಫ್ರಿಕನ್ ದೇಶಗಳಲ್ಲಿ ಸರಕಾರಗಳಿಗೆ ತಂತ್ರಜ್ಞಾನದ ಶಕ್ತಿ ನೀಡುವತ್ತ ಐಎಂಎಫ್ ಯೋಜಿಸುತ್ತಿದೆ. ಈ ವಿಚಾರದಲ್ಲಿ ಭಾರತವೇ ಪ್ರಮುಖ ಮಾದರಿ ಎನಿಸಿದೆ.

ಭಾರತದಂತೆ ಆಫ್ರಿಕಾದಲ್ಲೂ ಹಲವು ರೀತಿಯ ವಿನೂತನ ತಂತ್ರಜ್ಞಾನದ ಪ್ರಯೋಗಗಳಾಗುತ್ತಿವೆ. ಈ ಅನುಭವವನ್ನು ಬೇರೆಡೆಗೆ ಉಪಯೋಗಿಸುವ ಇರಾದೆ ಐಎಂಎಫ್‌ನದ್ದು.

English summary

IMF Appreciates India's Technological Innovation Like DBT and Aadhaar In Social Programme Implementation

International Monetary Fund has praised India for effectively using technology like Direct Benefit Transfer system, Aadhaar innovation in implementing social programmes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X