For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆ ಈ ವರ್ಷ 10.3% ಕುಸಿಯಲಿದೆ ಎಂದ ಐಎಂಎಫ್

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆಯು ಈ ವರ್ಷ 10.3% ಕುಗ್ಗಲಿದೆ ಎಂದು ಮಂಗಳವಾರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಂಗಳವಾರ ಹೇಳಿದೆ. ಸ್ವಾತಂತ್ರ್ಯಾ ನಂತರ ಅತಿ ದೊಡ್ಡ ಕುಸಿತ ಹಾಗೂ ಯಾವುದೇ ಪ್ರಮುಖ ಆರ್ಥಿಕತೆ ಕಾಣುವ ದೊಡ್ಡ ಮಟ್ಟದ ಇಳಿಕೆ ಇದಾಗಲಿದೆ ಎಂದು ಹೇಳಿದೆ.

ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುಂಚೆಯೇ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತವು ಸಮಸ್ಯೆ ಎದುರಿಸುತ್ತಿತ್ತು. ಕೊರೊನಾದಿಂದ ಜಾಗತಿಕ ಚಟುವಟಿಕೆಯಲ್ಲಿ ಆದ ವ್ಯತ್ಯಯ ಹಾಗೂ ಭಾರತದಲ್ಲಿ ಹೇರಲಾದ ಕಠಿಣ ನಿರ್ಬಂಧದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.

ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ಸಾಲ ಮಾಡಲು ಅನುಮತಿಸಿದ ಕೇಂದ್ರಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ಸಾಲ ಮಾಡಲು ಅನುಮತಿಸಿದ ಕೇಂದ್ರ

ಐಎಂಎಫ್ ನಿಂದ ಬಂದ ಇತ್ತೀಚಿನ ವರದಿ ಪ್ರಕಾರ, ಮಾರ್ಚ್ 31, 2021ಕ್ಕೆ ಭಾರತದ ಜಿಡಿಪಿ 10.3% ಕುಗ್ಗಲಿದೆ ಎಂದು ಹೇಳಲಾಗಿದೆ. ಕಳೆದ ಜೂನ್ ನಲ್ಲಿ ಅಂದಾಜು ಮಾಡಿದ ವೇಳೆ 4.5% ಇಳಿಕೆ ಆಗಬಹುದು ಎಂದಿತ್ತು. ಅದಕ್ಕೂ ಮುನ್ನ ಏಪ್ರಿಲ್ ನಲ್ಲಿ ಅಂದಾಜಿಸಿದ ಪ್ರಕಾರ, 1.9% ಬೆಳವಣಿಗೆ ಆಗಬಹುದು ಎಂದು ಹೇಳಿತ್ತು.

ಭಾರತದ ಆರ್ಥಿಕತೆ ಈ ವರ್ಷ 10.3% ಕುಸಿಯಲಿದೆ ಎಂದ ಐಎಂಎಫ್

ಮುಂದಿನ ವರ್ಷ ಭಾರತದ ಆರ್ಥಿಕತೆ 8.8% ಏರಿಕೆ ಆಗಬಹುದು ಎಂದು ಐಎಂಎಫ್ ನಿರೀಕ್ಷಿಸಿದೆ. ಇನ್ನು BRICS ಗುಂಪಿನಲ್ಲಿ ಬ್ರೆಜಿಲ್ ಆರ್ಥಿಕತೆ 5.8% ಇಳಿಕೆ, ರಷ್ಯಾ 4.1% ಕುಸಿತ, ದಕ್ಷಿಣ ಆಫ್ರಿಕಾ 8% ಇಳಿಕೆ ಮತ್ತು ಚೀನಾ 1.9% ಬೆಳವಣಿಗೆ ದಾಖಲಿಸುತ್ತದೆ ಎಂದು ಐಎಂಎಫ್ ವರದಿ ಹೇಳಿದೆ.

English summary

IMF Forecasts That India's GDP Will Plunge 10.3 Per Cent Current Financial Year

International Monetary Fund (IMF) forecasts that India's GDP will plunge 10.3% current financial year, March 31, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X