For Quick Alerts
ALLOW NOTIFICATIONS  
For Daily Alerts

ಭಾರತ: 92,961 ಕೋಟಿ ರೂ. ತೆರಿಗೆ ಮರುಪಾವತಿ ನೀಡಿದ ಸಿಬಿಡಿಟಿ

|

ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆದಾರರಿಗೆ 92,961 ಕೋಟಿ ರೂಪಾಯಿಗಳಿಗಿಂತ ಅಧಿಕ ಮೌಲ್ಯದ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಗುರುವಾರ ಹೇಳಿದೆ.

ಆದಾಯ ತೆರಿಗೆ ಪಾವತಿದಾರರು ಮತ್ತು ತೆರಿಗೆ ಪಾವತಿಸುವ ಕಾರ್ಪೋರೇಟ್ ಸಂಸ್ಥೆಗಳಿಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಸಿಹಿಸುದ್ದಿ ನೀಡಿದೆ. ಆದಾಯ ತೆರಿಗೆ ಇಲಾಖೆಗೆ ಹೊಸ ನೀತಿಯನ್ನು ರೂಪಿಸುತ್ತದೆ.

ಸಿಬಿಡಿಟಿ ಒದಗಿಸಿರುವ ಈ ಅಂಕಿ ಅಂಶಗಳ ಪ್ರಕಾರ, 61,53,231 ಪ್ರಕರಣಗಳಲ್ಲಿ 23,026 ಕೋಟಿ ರೂಪಾಯಿಗಳ ಆದಾಯ ತೆರಿಗೆ ಮರುಪಾವತಿ ಮತ್ತು 1,69,355 ಪ್ರಕರಣಗಳಲ್ಲಿ 69,934 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳನ್ನು ಮಾಡಲಾಗಿದೆ ಎಂದು ಅಧಿಕೃತ ಟ್ವಿಟರ್ ಪೋಸ್ಟ್ ತಿಳಿಸಿದೆ.

ಭಾರತ: 92,961 ಕೋಟಿ ರೂ. ತೆರಿಗೆ ಮರುಪಾವತಿ ನೀಡಿದ ಸಿಬಿಡಿಟಿ

63.23 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ಮರುಪಾವತಿ:

ಕಳೆದ 2021ರ ಏಪ್ರಿಲ್ 1ರಿಂದ 2021ರ ಅಕ್ಟೋಬರ್ 18ರ ಅವಧಿಯಲ್ಲಿ 63.23 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 92,961 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಮರುಪಾವತಿಯಾಗಿ ನೀಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸ್ಪಷ್ಟಪಡಿಸಿದೆ. "ಇದು AY 2021-22 ರ ರೂ. 2498.18 ಕೋಟಿಗಳ 32.49 ಲಕ್ಷ ಮರುಪಾವತಿಯನ್ನು ಒಳಗೊಂಡಿದೆ" ಎಂದು ಅದು ಹೇಳಿದೆ.

English summary

Income tax refunds worth Rs 92,961 crore issued during April 1st to Oct 18th: CBDT

Income tax refunds worth Rs 92,961 crore issued during April 1st to Oct 18th: CBDT.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X