For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಟರ್ನ್‌: ಈ ತೆರಿಗೆದಾರರು ಜುಲೈನಿಂದ ದುಪ್ಪಟ್ಟು TDS ಕಟ್ಟಬೇಕಾಗಬಹುದು!

|

ಮುಂದಿನ ತಿಂಗಳು ಅಂದರೆ ಜುಲೈನಿಂದ ಕೆಲವು ತೆರಿಗೆ ಪಾವತಿದಾರರು ಹೆಚ್ಚುವರಿ ಟಿಡಿಎಸ್‌ ಪಾವತಿಸಬೇಕಾಗುತ್ತದೆ. ಇದಕ್ಕೆ ಕಾರಣ 2021ರ ಹೊಸ ಹಣಕಾಸು ಕಾಯ್ದೆ.

ಹೌದು ಹೊಸ ಹಣಕಾಸು ಕಾಯ್ದೆ ಪ್ರಕಾರ ಕಳೆದ ಎರಡು ವರ್ಷದಲ್ಲಿ ಟಿಡಿಎಸ್​ ಫೈಲ್ ಮಾಡದ ತೆರಿಗೆ ಪಾವತಿದಾರರು ಮತ್ತು ಪ್ರತಿ ವರ್ಷ ಅವರ ಟಿಡಿಎಸ್‌ 50,000 ರೂಪಾಯಿ ದಾಟಿದಲ್ಲಿ ಐಟಿಆರ್‌ ಸಲ್ಲಿಸುವ ವೇಳೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಜುಲೈ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಇಲಾಖೆಯು ಈ ಹೆಚ್ಚುವರಿ ಟಿಡಿಸ್ ದರ ವಿಧಿಸುತ್ತಿದೆ.

ITR: ಈ ತೆರಿಗೆದಾರರು ಜುಲೈನಿಂದ ದುಪ್ಪಟ್ಟು TDS ಕಟ್ಟಬೇಕಾಗಬಹುದು!

"ಕೆಲವು ನಿರ್ದಿಷ್ಟ ಬಗೆಯ ಆದಾಯಗಳಿಗೆ ಹೆಚ್ಚಿನ ಟಿಡಿಎಸ್​ ಕಡಿತ ಮಾಡುವ ಉದ್ದೇಶದಿಂದ ಬಜೆಟ್ 2021ರಲ್ಲಿ 206AB ಪರಿಚಯಿಸಲಾಯಿತು. ಹಿಂದಿನ ಎರಡು ವರ್ಷಗಳಲ್ಲಿ ಯಾರು ಐಟಿಆರ್ ಫೈಲ್ ಮಾಡಿರುವುದಿಲ್ಲವೋ ಮತ್ತು ಪ್ರತಿ ವರ್ಷ ಕಡಿತ ಆಗಿರುವ ಟಿಡಿಎಸ್ 50,000 ದಾಟಿರುತ್ತದೋ ಅಂಥ ಸಂದರ್ಭಕ್ಕೆ ಇದು ಅನ್ವಯಿಸುತ್ತದೆ," ಎಂದು ತೆರಿಗೆ ತಜ್ಞರು ಹೇಳಿದ್ದಾರೆ.

2021ರ ಹಣಕಾಸು ವರ್ಷಕ್ಕೆ ತೆರಿಗೆ ರಿಟರ್ನ್ಸ್ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಣೆ ಮಾಡಿದೆ. 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಟಿಡಿಎಸ್ ಫೈಲಿಂಗ್​ಗೆ ಜೂನ್ 30ನೇ ತಾರೀಕಿನವರೆಗೆ ಗಡುವು ವಿಸ್ತರಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಹೊಸ ಇ-ಪೋರ್ಟಲ್: ತೆರಿಗೆದಾರರೇ ಪೋರ್ಟಲ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳಿ..ಆದಾಯ ತೆರಿಗೆ ಇಲಾಖೆಯ ಹೊಸ ಇ-ಪೋರ್ಟಲ್: ತೆರಿಗೆದಾರರೇ ಪೋರ್ಟಲ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳಿ..

ಈ ಮೊದಲು ಸಿಬಿಡಿಟಿ ಹೊರಡಿಸಿದ ಆದೇಶದ ಪ್ರಕಾರ, 2020-21ರ ಮೌಲ್ಯಮಾಪನ ವರ್ಷಕ್ಕೆ (ಹಣಕಾಸು ವರ್ಷ 2019-20) ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 ರ ಉಪವಿಭಾಗ 4 ಮತ್ತು 5 ರ ಅಡಿಯಲ್ಲಿ ದ್ವಿಪಕ್ಷೀಯ ರಿಟರ್ನ್ಸ್ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ ದಿನಾಂಕವನ್ನು 31 ಮೇ 2021 ಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲ ಗಡುವು 31 ಮಾರ್ಚ್ 2021ರವರೆಗಿತ್ತು.

ಯಾರಿಗೆ ಅನ್ವಯಿಸುವುದಿಲ್ಲ?
ಆದಾಗ್ಯೂ, ಸೆಕ್ಷನ್ 192 ಎ ಅಡಿಯಲ್ಲಿ ಕಡಿತಗೊಳಿಸಲಾದ ಟಿಡಿಎಸ್‌ಗೆ ಈ ಹೊಸದಾಗಿ ಜಾರಿಗೆ ತಂದ ಸೆಕ್ಷನ್ 206 ಎಬಿ ಅನ್ವಯಿಸುವುದಿಲ್ಲ.

English summary

Income Tax Return rules : TDS Rate Of these Tax Payers May Increase From July

from July, some taxpayers may have to pay Tax Deducted At Source (TDS) at higher rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X