For Quick Alerts
ALLOW NOTIFICATIONS  
For Daily Alerts

309 ಕೋಟಿ ರುಪಾಯಿಯ ಲೆಕ್ಕಕ್ಕೆ ನೀಡದ ಆಸ್ತಿ ಪತ್ತೆ ಮಾಡಿದ ಐ.ಟಿ. ಇಲಾಖೆ

|

ಕೋಲ್ಕತ್ತಾ ಮೂಲದ ಸಮೂಹದ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಿ, ರು. 300 ಕೋಟಿಗೂ ಹೆಚ್ಚು ಮೊತ್ತದ ಲೆಕ್ಕಕ್ಕೆ ನೀಡದ ಆಸ್ತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಸಮೂಹವು ಉಕ್ಕು, ಕಬ್ಬಿಣ ಮತ್ತು ಚಹಾ ಉತ್ಪಾದನೆಯಲ್ಲಿ ತೊಡಗಿದೆ ಎಂದು ಸಿಬಿಡಿಟಿ ಹೇಳಿದೆ. "ಈ ತನಕ ಮುಚ್ಚಿಟ್ಟಿರುವ ಆದಾಯ ರು. 309 ಕೋಟಿ ಪತ್ತೆಯಾಗಿದೆ." ಎಂದು ತಿಳಿಸಲಾಗಿದೆ.

ಅಪನಗದೀಕರಣ ಪ್ರಕರಣ: ರು. 130.57 ಕೋಟಿ ಚರಾಸ್ತಿ, ಸ್ಥಿರಾಸ್ತಿ ED ವಶಅಪನಗದೀಕರಣ ಪ್ರಕರಣ: ರು. 130.57 ಕೋಟಿ ಚರಾಸ್ತಿ, ಸ್ಥಿರಾಸ್ತಿ ED ವಶ

ಆ ಕಂಪೆನಿಯು ರು. 175 ಕೋಟಿಯ ಲೆಕ್ಕಕ್ಕೆ ನೀಡದ ಮೊತ್ತ ಇರುವುದಾಗಿ ಒಪ್ಪಿಕೊಂಡಿದೆ ಎಂದು ಸಿಬಿಡಿಟಿ ಹೇಳಿಕೆ ನೀಡಿದೆ. ಕೋಲ್ಕತ್ತಾ, ಜೆಮ್ಷಡ್ ಪುರ್, ಭುವನೇಶ್ವರ್, ಹೈದರಾಬಾದ್, ಮುಂಬೈ ಮತ್ತು ಇತರೆಡೆ ಸೇರಿ 25 ಸ್ಥಳಗಳಲ್ಲಿ ಜನವರಿ 29ರಂದು ಶೋಧ ಕಾರ್ಯಾಚರಣೆ ನಡೆದಿದೆ ಎಂದು ಹೇಳಲಾಗಿದೆ.

309 ಕೋಟಿ ರುಪಾಯಿಯ ಲೆಕ್ಕಕ್ಕೆ ನೀಡದ ಆಸ್ತಿ ಪತ್ತೆ ಮಾಡಿದ IT ಇಲಾಖೆ

ಈ ಕಾರ್ಯಾಚರಣೆ ಮೂಲಕ ವಿವಿಧ ಶೆಲ್ ಅಥವಾ ಕಾಗದ ಸಂಸ್ಥೆಗಳಲ್ಲಿ ನಕಲಿ ಷೇರು ಬಂಡವಾಳ ಮತ್ತು ಅನ್ ಸೆಕ್ಯೂರ್ಡ್ ಸಾಲ ಪತ್ತೆಯಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಸಮೂಹದ ಸದಸ್ಯರು ಕಾಗದ ಅಥವಾ ಶೆಲ್ ಕಂಪೆನಿಗಳನ್ನು ಬಳಸಿಕೊಂಡು, ಲೆಕ್ಕಕ್ಕೆ ನೀಡದ ಹಣವನ್ನು ರವಾನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary

Income Tax Unearth Rs 309 Crore Worth Of Undisclosed Black Money

Income tax department unearth Rs 309 crore worth of undisclosed assets of Kolkata based firm.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X