For Quick Alerts
ALLOW NOTIFICATIONS  
For Daily Alerts

ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಆದ ನಷ್ಟವೆಷ್ಟು ಗೊತ್ತಾ?

|

ಭಾರತದಲ್ಲಿ ಆರ್ಥಿಕ ಹಿಂಜರಿತದ ಬಿಸಿ ಇನ್ನೂ ತಗ್ಗಿಲ್ಲ. ಹಲವಾರು ತಿಂಗಳಿನಿಂದ ಬಹುತೇಕ ಎಲ್ಲಾ ವಲಯಗಳು ಹಿಂಜರಿತದ ಬಿಸಿಗೆ ನಲುಗಿ ಹೋಗಿವೆ. ಹಾಗಿದ್ದರೆ ಇದರಿಂದ ಭಾರತಕ್ಕೆ ಉಂಟಾಗಿರುವ ನಷ್ಟವೆಷ್ಟು ಎಂಬುದನ್ನು ಹೇಳುವುದು ಅಷ್ಟು ಸುಲಭವಾಗಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 2.8 ಲಕ್ಷ ಕೋಟಿ ರುಪಾಯಿ ದೇಶಕ್ಕೆ ನಷ್ಟವಾಗಿದೆ.

 
ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಆದ ನಷ್ಟವೆಷ್ಟು ಗೊತ್ತಾ?

ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆ ಹಾಗೂ ಕುಸಿತವನ್ನು ಪರ್ಸೆಂಟ್‌ನಲ್ಲಿ ಅಳೆಯಲಾಗುತ್ತದೆ. ಆದರೆ ವಾಸ್ತವಿಕ ಜಿಡಿಪಿ ಮತ್ತು ಸಂಭಾವ್ಯ ಜಿಡಿಪಿ (ಪೊಟೆನ್ಷಿಯಲ್ ಜಿಡಿಪಿ) ನಡುವಿನ ಸಂಪೂರ್ಣ ವ್ಯತ್ಯಾಸವನ್ನು ತೆಗೆದುಕೊಂಡರೆ, 2020ನೇ ಆರ್ಥಿಕ ವರ್ಷಕ್ಕೆ ಅಂದಾಜು 2.8 ಲಕ್ಷ ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಭಾರತದ ಸಂಭಾವ್ಯ ಜಿಡಿಪಿ 7 ಪರ್ಸೆಂಟ್ ಎಂದು ಆರ್ಥಿಕ ಅಭಿವೃದ್ಧಿ ಮತ್ತು ಅಭಿವೃದ್ಧಿ ಸಂಘಟನೆಯು ಅಂದಾಜಿಸಿದೆ. ಹಲವಾರು ಏಜೆನ್ಸಿಗಳು ಇದನ್ನು 5 ಪರ್ಸೆಂಟ್‌ಗೆ ಇಳಿಸಿವೆ. ಇದರ ಅರ್ಥ ಆರ್ಥಿಕತೆ ಗರಿಷ್ಠ ಮಟ್ಟದಲ್ಲಿದ್ದರೂ 2020ರ ಜಿಡಿಪಿ 150.63 ಲಕ್ಷ ಕೋಟಿಯಲ್ಲಿರಬೇಕು. ಆದರೆ 5 ಪರ್ಸೆಂಟ್‌ರಷ್ಟು ಜಿಡಿಪಿಯಲ್ಲಿ 147.81 ಲಕ್ಷ ಕೋಟಿಯ ಆಸುಪಾಸಿನಲ್ಲಿದ್ದು, 2.8 ಲಕ್ಷ ಕೋಟಿ ರುಪಾಯಿ ನಷ್ಟವನ್ನು ಸೂಚಿಸುತ್ತದೆ. 2019ರಲ್ಲಿ ಆರ್ಥಿಕ ವರ್ಷದಲ್ಲಿ ಜಿಡಿಪಿ 140.78 ಲಕ್ಷ ಕೋಟಿಯಷ್ಟಿತ್ತು.

English summary

India May Lost 2.8 lakh Crore Because Of Economic Slowdown

India may lost 2.8 lakh crore due to economic slowdown According to OECD
Story first published: Wednesday, December 25, 2019, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X