For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಸ್ಲ್ಯಾಬ್ ಇಳಿಕೆ ಮಾಡಲು ಬಯಸುತ್ತೇವೆ, ಆದರೆ..

|

ಭಾರತ ಸರ್ಕಾರವು ಮೂರು ಸ್ಲ್ಯಾಬ್‌ಗಳ ಜಿಎಸ್‌ಟಿಯನ್ನು (5, 12, 18)ಎರಡಕ್ಕೆ ಇಳಿಕೆ ಮಾಡುಬಹುದು. ಆದರೆ ಐಷಾರಾಮಿ ವಸ್ತುಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಶೇಕಡ 28 ಆಗಿಯೇ ಉಳಿಯುತ್ತದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಶೇಕಡ 5, 12, 18 ಮತ್ತು 28ರಷ್ಟು ಜಿಎಸ್‌ಟಿ ಸ್ಲ್ಯಾಬ್ ಪೈಕಿ ನಾವು ಶೇಕಡ 28 ಅನ್ನು ಮುಂದುವರಿಸಲು ಬಯಸುತ್ತೇವೆ. ಇದು ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯಾದ ಕಾರಣದಿಂದಾಗಿ ನಾವು ಶೇಕಡ 28ರಷ್ಟು ಜಿಎಸ್‌ಟಿ ಸ್ಲ್ಯಾಬ್ ಅನ್ನು ಮುಂದುವರಿಸಲು ಬಯಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಜಿಎಸ್‌ಟಿ ಪರಿಷ್ಕರಣೆ: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಪಟ್ಟಿಜಿಎಸ್‌ಟಿ ಪರಿಷ್ಕರಣೆ: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಪಟ್ಟಿ

ಕೆಲವೊಂದು ಐಷಾರಾಮಿ, ಸಮಾಜಕ್ಕೆ ಕಂಟಕವಾದ ವಸ್ತುಗಳು ಇದೆ. ಅದಕ್ಕೆ ಅಧಿಕ ಜಿಎಸ್‌ಟಿ ಹಾಕುವುದು ಅಗತ್ಯವಾಗಿದೆ. ಆದ್ದರಿಂದಾಗಿ ಶೇಕಡ 28 ಜಿಎಸ್‌ಟಿ ಮುಂದುವರಿಯುವುದು ಅಗತ್ಯವಾಗಿದೆ. ಆದರೆ 5, 12, 18 ಜಿಎಸ್‌ಟಿ ಸ್ಲ್ಯಾಬ್‌ಗಳ ಪೈಕಿ ಎರಡನ್ನು ಮಾತ್ರ ಉಳಿಸಿಕೊಂಡು ದೇಶದ ಆರ್ಥಿಕತೆ ಹೇಗೆ ಬೆಳವಣಿಗೆ ಹೊಂದುತ್ತದೆ ಎಂದು ನಾವು ನೋಡಿಕೊಳ್ಳಬಹುದು ಎಂದು ಸ್ಪಷ್ಟಣೆ ನೀಡಿದ್ದಾರೆ.

 ಜಿಎಸ್‌ಟಿ ಸ್ಲ್ಯಾಬ್ ಇಳಿಕೆ ಮಾಡಲು ಬಯಸುತ್ತೇವೆ, ಆದರೆ..

"ಈ ಮೂರು ಸ್ಲ್ಯಾಬ್‌ಗಳನ್ನು ಎರಡಕ್ಕೆ ಇಳಿಕೆ ಮಾಡಿದ ಬಳಿಕ ಒಂದಕ್ಕೆ ಇಳಿಕೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ನಾವು ನೋಡಬೇಕಾಗುತ್ತದೆ. ಇಲ್ಲವಾದರೆ ಎರಡಕ್ಕೆ ಇಳಿಕೆ ಮಾಡಿದ ಬಳಿಕ ಆರ್ಥಿಕ ಬೆಳವಣಿಗೆಯನ್ನು ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಇದು ಅತೀ ದೊಡ್ಡ ಸವಾಲಾಗಿದೆ," ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ವಿವರಣೆ ನೀಡಿದ್ದಾರೆ.

ನಾಲ್ಕು ಸ್ಲ್ಯಾಬ್‌ಗಳು ಯಾವುದು, ಹೇಗೆ ಅನ್ವಯ?

ದೇಶದಲ್ಲಿ ಜಿಎಸ್‌ಟಿಯಲ್ಲಿ ನಾಲ್ಕು ಸ್ಲ್ಯಾಬ್‌ಗಳು ಇದೆ. ಈ ಪೈಕಿ ಅಗತ್ಯ ವಸ್ತುಗಳ ಮೇಲೆ ಅತೀ ಕಡಿಮೆ ಜಿಎಸ್‌ಟಿ ಅಂದರೇ ಶೇಕಡ 5ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಕಾರು ಮೊದಲಾದ ಐಷಾರಾಮಿ ವಸ್ತುಗಳ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇನ್ನು ಉಳಿದ ವಸ್ತುಗಳ ಮೇಲೆ ಶೇಕಡ 12, ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.

English summary

India Needs Fewer GST Slabs, but 28 Percent Rate will Remain Says Revenue Secretary

Revenue Secretary Tarun Bajaj said the government aims to simplify the GST by consolidating the lower tax slabs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X