For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾದಿಂದ ತೈಲ ಆಮದನ್ನು ಕಡಿತಗೊಳಿಸಲು ಭಾರತ ಚಿಂತನೆ

|

ಕಚ್ಚಾ ತೈಲ ಉತ್ಪಾದನೆ ಮೇಲೆ ನಿಯಂತ್ರಣಗಳನ್ನು ಹೇರಿರುವ ತೈಲ ರಫ್ತು ರಾಷ್ಟ್ರಗಳ ಒಕ್ಕೂಟ (ಒಪೆಕ್) ಇತ್ತೀಚೆಗೆ ಭಾರತದ ಮನವಿಯನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಕೇಂದ್ರ ಸರ್ಕಾರದ ಅಣತಿಯಂತೆ ಮೇ ತಿಂಗಳಲ್ಲಿ ಸೌದಿ ಅರೇಬಿಯಾದ ತೈಲ ಆಮದನ್ನು ಕಡಿತಗೊಳಿಸಲು ಭಾರತೀಯ ರಾಜ್ಯ ಸಂಸ್ಕರಣಾ ಘಟಕಗಳು ಯೋಜಿಸುತ್ತಿವೆ.

ಮಧ್ಯಪ್ರಾಚ್ಯದಿಂದ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಸರ್ಕಾರ ಚಿಂತಿಸಿದೆ ಎಂದು ಈ ಕುರಿತು ತಿಳಿದ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಥಿರ ತೈಲ ಬೆಲೆಗಳ ಭರವಸೆಯನ್ನು ಈಡೇರಿಸಲು ಉತ್ಪಾದನಾ ನಿರ್ಬಂಧವನ್ನು ಸರಾಗಗೊಳಿಸುವಂತೆ ಒಪೆಕ್‌ ಅನ್ನು ಒತ್ತಾಯಿಸಿದರು. ಆದರೆ ಭಾರತದ ಮನವಿಯನ್ನು ಒಪೆಕ್ ಗಂಭೀರವಾಗಿ ಪರಿಗಣಿಸಲಿಲ್ಲ.

ಕಡಿಮೆ ಬೆಲೆಯ ತೈಲ ಬಳಸುವಂತೆ ಭಾರತಕ್ಕೆ ಸಲಹೆ ನೀಡಿದ್ದ ಸೌದಿ ಅರೇಬಿಯಾ

ಕಡಿಮೆ ಬೆಲೆಯ ತೈಲ ಬಳಸುವಂತೆ ಭಾರತಕ್ಕೆ ಸಲಹೆ ನೀಡಿದ್ದ ಸೌದಿ ಅರೇಬಿಯಾ

ಹೌದು, ಕಳೆದ ವರ್ಷ ಕಡಿಮೆ ಬೆಲೆಗೆ ಪಡೆದಿದ್ದ ಕಚ್ಚಾ ತೈಲವನ್ನು ಬಳಸುವಂತೆ ಸೌದಿ ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಸಲಹೆಯನ್ನು ನೀಡಿದ್ದರು. ತೈಲೋತ್ಪನ್ನಗಳ ಬೇಡಿಕೆಯಲ್ಲಿ ಇನ್ನಷ್ಟು ಗಟ್ಟಿಯಾದ ಸುಧಾರಣೆ ಕಂಡುಬರುವವರೆಗೂ ಉತ್ಪಾದನೆಯನ್ನು ಹೆಚ್ಚಿಸುವುದು ಬೇಡ ಎಂದು ಒಪೆಕ್ ನಿರ್ಧರಿಸಿದ ಬಳಿಕ, ಈ ಹೇಳಿಕೆಯನ್ನು ನೀಡಿತ್ತು.

ಶೇಕಡಾ 84ರಷ್ಟು ತೈಲ ಆಮದು

ಶೇಕಡಾ 84ರಷ್ಟು ತೈಲ ಆಮದು

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತವು ತನ್ನ ತೈಲದ ಸುಮಾರು 84% ನಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ಅದರ ಬೇಡಿಕೆಯ ಮೂರರಲ್ಲಿ ಐದನೇ ಒಂದು ಭಾಗವನ್ನು ಪೂರೈಸಲು ಮಧ್ಯಪ್ರಾಚ್ಯ ಸರಬರಾಜುಗಳನ್ನು ಅವಲಂಬಿಸಿದೆ.

10.8 ಮಿಲಿಯನ್ ಬ್ಯಾರೆಲ್ ಕಡಿತಕ್ಕೆ ಚಿಂತನೆ

10.8 ಮಿಲಿಯನ್ ಬ್ಯಾರೆಲ್ ಕಡಿತಕ್ಕೆ ಚಿಂತನೆ

ಇಂಡಿಯನ್ ಆಯಿಲ್ ಕಾರ್ಪ್, ಭಾರತ್ ಪೆಟ್ರೋಲಿಯಂ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮೇ ತಿಂಗಳಲ್ಲಿ ಸುಮಾರು 10.8 ಮಿಲಿಯನ್ ಬ್ಯಾರೆಲ್‌ಗಳನ್ನು ಕಡಿತಗೊಳಿಸಲು ತಯಾರಿ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಸೌದಿಯಿಂದ  ತಿಂಗಳಿಗೆ 14.8 ಮಿಲಿಯನ್ ಬ್ಯಾರೆಲ್ ತೈಲ ಆಮದು

ಸೌದಿಯಿಂದ ತಿಂಗಳಿಗೆ 14.8 ಮಿಲಿಯನ್ ಬ್ಯಾರೆಲ್ ತೈಲ ಆಮದು

ಭಾರತದಲ್ಲಿ ಒಟ್ಟಾರೆ 5 ಮಿಲಿಯನ್ ಬ್ಯಾರೆಲ್‌ಗಳ (ಬಿಪಿಡಿ) ಸಂಸ್ಕರಣಾ ಸಾಮರ್ಥ್ಯದಲ್ಲಿ ಶೇಕಡಾ 60ರಷ್ಟು ಭಾಗವನ್ನು ನಿಯಂತ್ರಿಸುವ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಒಟ್ಟಾಗಿ ಒಂದು ತಿಂಗಳಲ್ಲಿ ಸರಾಸರಿ 14.7 ರಿಂದ 14.8 ಮಿಲಿಯನ್ ಬ್ಯಾರೆಲ್ ಅನ್ನು ಸೌದಿಯಿಂದ ಆಮದು ಮಾಡಿಕೊಳ್ಳುತ್ತವೆ ಎಂದು ಮೂಲಗಳು ತಿಳಿಸಿವೆ.

ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕದಿದ್ದರೆ ಹಣದುಬ್ಬರ ಏರಿಕೆ!

ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕದಿದ್ದರೆ ಹಣದುಬ್ಬರ ಏರಿಕೆ!

ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲ ಉದ್ದೇಶದಿಂದಾಗಿ ಒಪೆಕ್ ರಾಷ್ಟ್ರಗಳಿಗೆ ಸವಾಲು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲವಾದಲ್ಲಿ ತೈಲ ಬೆಲೆ ಹೆಚ್ಚಳದ ಜೊತೆಗೆ ಇತರೆ ಆಹಾರ ಪದಾರ್ಥಗಳ ಬೆಲೆಯು ಹೆಚ್ಚಾಗಿ ಹಣದುಬ್ಬರ ಏರಿಕೆಗೆ ದಾರಿ ಮಾಡಿಕೊಡುತ್ತದೆ.

English summary

India Plans To Cut Saudi Oil Import After OPEC Ignores India's Call

Indian state refiners are planning to cut oil imports from Saudi Arabia by about a quarter in May
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X