For Quick Alerts
ALLOW NOTIFICATIONS  
For Daily Alerts

2021ರ ಭಾರತದ ಜಿಡಿಪಿ ಅಂದಾಜು 1.9% : 29 ವರ್ಷಗಳಲ್ಲೇ ಅತ್ಯಂತ ಕಡಿಮೆ

|

ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಭಾರತದ 2021 ನೇ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ (ಇಂಡ್-ರಾ) 1.9 ಪರ್ಸೆಂಟ್ ಎಂದು ಅಂದಾಜಿಸಿದೆ.

ಈ ಜಿಡಿಪಿ ಬೆಳವಣಿಗೆ ದರ 29 ವರ್ಷಗಳಲ್ಲೇ ಅತ್ಯಧಿಕ ಕುಸಿತವಾಗಿದೆ. 1992 ರಲ್ಲಿ ಜಿಡಿಪಿ ದರ 1.1 ಪರ್ಸೆಂಟ್‌ರಷ್ಟಿತ್ತು. ಇದಕ್ಕೂ ಮುನ್ನ ಇಂಡಿಯಾ ರೇಟಿಂಗ್ಸ್ ಹಾಗೂ ರಿಸರ್ಚ್ ಸಂಸ್ಥೆ ಮಾರ್ಚ್‌ 30 ರಂದು ಜಿಡಿಪಿ ಬೆಳವಣಿಗೆ ದರ 3.6 ಪರ್ಸೆಂಟ್‌ರಷ್ಟಿರಲಿದೆ ಎಂದು ಹೇಳಿತ್ತು. ಆದರೆ ಇದೀಗ ಈ ದರವನ್ನು ಮತ್ತಷ್ಟು ಇಳಿಸಿದೆ.

2021ರ ಭಾರತದ ಜಿಡಿಪಿ ಅಂದಾಜು 1.9% : 29 ವರ್ಷಗಳಲ್ಲೇ ಅತ್ಯಂತ ಕಡಿಮೆ

ಒಂದು ವೇಳೆ ಲಾಕ್‌ಡೌನ್ ಮೇ ಮಧ್ಯದವರೆಗೆ ಮುಂದುವರಿಯುತ್ತದೆ ಎಂಬ ಊಹೆಯ ಆಧಾರದ ಮೇಲೆ ಪರಿಷ್ಕೃತ ಸಂಖ್ಯೆ ಇದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ. ಆದಾಗ್ಯೂ, ಮೇ ಮಧ್ಯಭಾಗದಲ್ಲಿ ಲಾಕ್‌ಡೌನ್ ಮುಂದುವರಿದರೆ ಜಿಡಿಪಿ ಬೆಳವಣಿಗೆಯು ಋಣಾತ್ಮಕ 2.1 ಪರ್ಸೆಂಟ್‌ಗೆ ಇಳಿಯುತ್ತದೆ.

"ನಾವು ಮಾರ್ಚ್ 30, 2020 ರಂದು ಪ್ರಕಟವಾದ 3.6 ಪರ್ಸೆಂಟ್ ಮುನ್ಸೂಚನೆಯಿಂದ ನಮ್ಮ ಹಣಕಾಸು ವರ್ಷ 2021ರ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯನ್ನು 1.9 ಪರ್ಸೆಂಟ್ ಮತ್ತಷ್ಟು ಪರಿಷ್ಕರಿಸಿದ್ದೇವೆ" ಎಂದು ಪ್ರಧಾನ ಅರ್ಥಶಾಸ್ತ್ರಜ್ಞ ಮತ್ತು ನಿರ್ದೇಶಕ ಸುನಿಲ್ ಕುಮಾರ್ ಸಿನ್ಹಾ ವರದಿಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಲಾಕ್ ಡೌನ್ ಮೇ ತಿಂಗಳ ಮಧ್ಯದವರೆಗೂ ಮುಂದುವರೆದರೆ ಆರ್ಥಿಕ ಬೆಳವಣಿಗೆ ಜೂನ್ 2020 ರ ನಂತರವೇ ಸಾಧ್ಯ ಎಂದು ಇಂಡಿಯಾ ರೇಟಿಂಗ್ಸ್ ಹಾಗೂ ರಿಸರ್ಚ್ ಸಂಸ್ಥೆ ಹೇಳಿದೆ.

English summary

India Rating Cuts FY21 GDP Growth Further To 1.9 Percent

India Ratings and Research on Monday revised its growth forecast for India further down to 1.9 percent financial year 2021, the lowest in the last 29 years.
Story first published: Tuesday, April 28, 2020, 9:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X