For Quick Alerts
ALLOW NOTIFICATIONS  
For Daily Alerts

ಜೂನ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇಕಡಾ 6.26ಕ್ಕೆ ಇಳಿಕೆ

|

ಮೇ ತಿಂಗಳಿನಲ್ಲಿ ಆರು ತಿಂಗಳ ಗರಿಷ್ಠ ಮಟ್ಟಕ್ಕೇರಿದ್ದ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 6.26ಕ್ಕೆ ಇಳಿಕೆಯಾಗಿದೆ. ಆದರೆ ಭಾರತೀಯ ರಿಸರ್ವ್‌ ಬ್ಯಾಂಕ್(ಆರ್‌ಬಿಐ) ಅಂದಾಜಿಗಿಂತ ಹೆಚ್ಚಾಗಿದೆ. ಈ ಮೊದಲು ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 6.3ರಷ್ಟಿತ್ತು.

 

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(ಎಂಒಎಸ್‌ಪಿಐ) ಸೋಮವಾರ ಬಿಡುಗಡೆ ಮಾಹಿತಿ ಪ್ರಕಾರ ಚಿಲ್ಲರೆ ಹಣದುಬ್ಬರವು ಕೊಂಚ ಇಳಿಕೆಯಾಗಿದ್ದರೂ ಸತತ ಎರಡನೇ ಬಾರಿಗೆ ಶೇಕಡಾ 6ಕ್ಕಿಂತ ಹೆಚ್ಚಾಗಿದೆ. ಈ ಮೊದಲು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಸತತ ಐದು ತಿಂಗಳಿನಿಂದ ಶೇಕಡಾ 6 ಕ್ಕಿಂತ ಕಡಿಮೆಯಿತ್ತು.

 
ಜೂನ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇಕಡಾ 6.26ಕ್ಕೆ ಇಳಿಕೆ

ಸಿಪಿಐ ದತ್ತಾಂಶವನ್ನು ಪ್ರಾಥಮಿಕವಾಗಿ ಆರ್‌ಬಿಐ ತನ್ನ ದ್ವಿ-ಮಾಸಿಕ ವಿತ್ತೀಯ ನೀತಿಯಲ್ಲಿ ರೂಪಿಸುತ್ತದೆ. ಕಳೆದ ತಿಂಗಳು, ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಸತತ ಆರನೇ ಬಾರಿಗೆ ಶೇಕಡಾ 4 ರಂತೆ ಬದಲಾಯಿಸದೆ ಉಳಿಸಿದೆ.

ಆರ್‌ಬಿಐ ತನ್ನ ಕೊನೆಯ ಎಂಪಿಸಿ ಸಭೆಯಲ್ಲಿ, 2021-22ರ ಆರ್ಥಿಕ ವರ್ಷದಲ್ಲಿ ಸಿಪಿಐ ಹಣದುಬ್ಬರವನ್ನು ಶೇಕಡಾ 5.1 ಎಂದು ಅಂದಾಜಿಸಿದೆ. ಸಿಪಿಐ ಹಣದುಬ್ಬರವು ಕ್ಯೂ 1 ರಲ್ಲಿ ಶೇ 5.2, ಕ್ಯೂ 2 ರಲ್ಲಿ ಶೇ 5.4, ಕ್ಯೂ 3 ರಲ್ಲಿ ಶೇ 4.7, ಕ್ಯೂ 4 ರಲ್ಲಿ ಶೇ 5.3 ರಷ್ಟನ್ನು ಕಂಡಿದೆ.

ತೈಲ ಬೆಲೆ ಏರಿಕೆ ಮತ್ತು ತರಕಾರಿ, ಆಹಾರ ಪದಾರ್ಥಗಳು ದುಬಾರಯಾದ ಕಾರಣದಿಂದಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಹೆಚ್ಚಾಗಿದೆ.

ಇನ್ನು ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಆಹಾರ ಹಣದುಬ್ಬರವು ಸ್ವಲ್ಪಮಟ್ಟಿಗೆ ಶೇ. 5.15ಕ್ಕೆ ಏರಿದೆ ಎಂದು ತೋರಿಸಿದೆ. ತಿಂಗಳಲ್ಲಿ, ಮೊಟ್ಟೆಗಳು, ಖಾದ್ಯ ತೈಲಗಳು, ಹಣ್ಣುಗಳು, ದ್ವಿದಳ ಧಾನ್ಯಗಳ ಬೆಲೆಗಳು ಎರಡು ಅಂಕೆಗಳಲ್ಲಿ ಏರಿಕೆ ಕಂಡಿವೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರದೊಂದಿಗೆ ಇಂಧನ ಹಣದುಬ್ಬರವು ಶೇ. 12.7 ರಷ್ಟು ಏರಿಕೆಯಾಗಿದೆ.

English summary

India's Retail inflation marginally eases to 6.26% in June 2021

India retail inflation eased slightly to 6.26% In June
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X