For Quick Alerts
ALLOW NOTIFICATIONS  
For Daily Alerts

ವಿವಾದಕ್ಕೆ ಕಾರಣವಾದ ವಿಶ್ವದ ಅತಿದೊಡ್ಡ ಮೃಗಾಲಯ: ಅಂಬಾನಿ ಕುಟುಂಬದ ಯೋಜನೆ

|

ಇತ್ತೀಚೆಗಷ್ಟೇ ಭಾರೀ ಸುದ್ದಿಗೆ ಕಾರಣವಾಗಿದ್ದ ಭಾರತದ ಶ್ರೀಮಂತ ಕುಟುಂಬ ಮುಕೇಶ್ ಅಂಬಾನಿಯ ಭವಿಷ್ಯದ ಯೋಜನೆ ವಿಶ್ವದ ಅತಿದೊಡ್ಡ ಮೃಗಾಲಯ ಸ್ಥಾಪನೆಯು ಈಗ ವಿವಾದಕ್ಕೆ ಕಾರಣವಾಗಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೃಗಾಲಯವನ್ನು ಅಂಬಾನಿ ತನ್ನ ತವರು ರಾಜ್ಯವಾದ ಗುಜರಾತ್‌ನಲ್ಲಿ ನಿರ್ಮಿಸುತ್ತಿದ್ದು, ಇದು 2023 ರಲ್ಲಿ ತೆರೆಯುವ ನಿರೀಕ್ಷೆಯಿದೆ.

168 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ವಿಶ್ವದ ಅತಿದೊಡ್ಡ ಮೃಗಾಲಯ ಸ್ಥಾಪಿಸುವ ಯೋಜನೆಯು ವಿವಾದವನ್ನು ಹುಟ್ಟುಹಾಕಿದೆ. ಗುಜರಾತ್‌ನ ಜಾಮ್‌ನಗರದಲ್ಲಿ 280 ಎಕರೆ ಪ್ರದೇಶದಲ್ಲಿ ಈ ಪ್ರಾಣಿಧಾಮ ನಿರ್ಮಿಸಲು ಅಂಬಾನಿ ಕುಟುಂಬ ಯೋಜಿಸಿದೆ ಎಂದು ವೀಕ್ ಮ್ಯಾಗ್‌ಜೀನ್ ವರದಿ ಮಾಡಿದೆ.

ವಿವಾದಕ್ಕೆ ಕಾರಣವಾದ ವಿಶ್ವದ ಅತಿದೊಡ್ಡ Zoo: ಅಂಬಾನಿ ಕುಟುಂಬದ ಯೋಜನೆ

 

ಬಿಜಿನೆಸ್ ಇನ್‌ಸೈಡರ್ ಪ್ರಕಾರ ಈ ಬೃಹತ್ ಯೋಜನೆಯ ಮುಂದಾಳತ್ವವನ್ನು ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ವಹಿಸಲಿದ್ದು, ಇವರು ರಿಲಯನ್ಸ್ ಜಿಯೋ ಮಂಡಳಿಯ ಸದಸ್ಯರು ಆಗಿದ್ದಾರೆ.

ರಿಲಯನ್ಸ್ O2C ವ್ಯವಹಾರ ವಿಲೀನ ಘೋಷಣೆ: ಅರಾಮ್ಕೊ ಜೊತೆ ಮಾತುಕತೆ

ಈಗಾಗಲೇ ಜನವರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಗುವಾಹಟಿಯ ಅಸ್ಸಾಂ ಸ್ಟೇಟ್ ಮೃಗಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಸ್ರೇಲ್‌ನಿಂದ ಎರಡು ಜೋಡಿ ಜೀಬ್ರಾಗಳಿಗೆ ಬದಲಾಗಿ ಎರಡು ಅಪರೂಪದ ಕಪ್ಪು ಬಣ್ಣದ ಪ್ಯಾಂಥರ್‌ಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಇದನ್ನು ಸ್ಥಳೀಯ ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ವಿರೋಧಿಸಿದ್ದಾರೆ ಎಂದು ಈಶಾನ್ಯ ನೌ ನ್ಯೂಸ್ ವರದಿ ಮಾಡಿದೆ.

ಕಳೆದ ಭಾನುವಾರ ಕಪ್ಪು ಬಣ್ಣದ ಪ್ಯಾಂಥರ್ ವರ್ಗಾವಣೆಯ ವಿರುದ್ಧವಾಗಿ ಸುಮಾರು 100 ಕಾರ್ಯಕರ್ತರು ಗುವಾಹಟಿ ಮೃಗಾಲಯದ ಮುಂದೆ ಜಮಾಯಿಸಿದ್ದರು ಎಂದು ಇಂಗ್ಲಿಷ್ ಭಾಷಾ ದಿನಪತ್ರಿಕೆ ಟೆಲಿಗ್ರಾಫ್ ಇಂಡಿಯಾ ತಿಳಿಸಿದೆ.

English summary

India's Richest Family To Build A Zoo Sparks Controversy

Plans to build the world’s largest zoo and animal sanctuary by India’s richest family has stirred controversy in the country.
Story first published: Thursday, February 25, 2021, 10:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X