For Quick Alerts
ALLOW NOTIFICATIONS  
For Daily Alerts

ತೈಲ ಉತ್ಪಾದನೆ ಹೆಚ್ಚಿಸದಿರಲು ಒಪೆಕ್ ತೀರ್ಮಾನ: ಭಾರತದ ಆರ್ಥಿಕ ಚೇತರಿಕೆ ಮೇಲೆ ಪರಿಣಾಮ

|

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳಾದ ಒಪೆಕ್ + ಗುಂಪು ಏಪ್ರಿಲ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಸರಬರಾಜು ಹೆಚ್ಚಿಸುವುದನ್ನು ಪರಿಗಣಸದೆ ಇರುವುದು ಭಾರತದ ಆರ್ಥಿಕ ಚೇತರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಭಾರತ, ಬೆಲೆಗಳು ಹೆಚ್ಚಾದಂತೆ ಉತ್ಪಾದನಾ ಕಡಿತವನ್ನು ವಿಸ್ತರಿಸುವ ಪ್ರಮುಖ ಉತ್ಪಾದಕರ ನಿರ್ಧಾರವು ಕೆಲವು ದೇಶಗಳಲ್ಲಿನ ಆರ್ಥಿಕತೆ ಚೇತರಿಕೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಶುಕ್ರವಾರ ಹೇಳಿದೆ.

ತೈಲ ಉತ್ಪಾದನೆ ಹೆಚ್ಚಿಸದಿರಲು ಒಪೆಕ್ ತೀರ್ಮಾನ

ತೈಲ ಉತ್ಪಾದನೆ ಹೆಚ್ಚಿಸದಿರಲು ಒಪೆಕ್ ತೀರ್ಮಾನ

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಿ ಬೇಡಿಕೆಯಲ್ಲಿ ಹೆಚ್ಚು ಗಣನೀಯ ಚೇತರಿಕೆಗಾಗಿ ಕಾಯುತ್ತಿರುವುದರಿಂದ ಒಪೆಕ್ ಮತ್ತು ಒಪೆಕ್‌+ ರಾಷ್ಟ್ರಗಳು ಸರಬರಾಜು ಹೆಚ್ಚಿಸದಿರಲು ಗುರುವಾರ ತೀರ್ಮಾನಿಸಿವೆ. ಅಂದರೆ ತೈಲೋತ್ಪನ್ನಗಳ ಬೇಡಿಕೆಯಲ್ಲಿ ಇನ್ನಷ್ಟು ಗಟ್ಟಿಯಾದ ಸುಧಾರಣೆ ಕಂಡುಬರುವವರೆಗೂ ಉತ್ಪಾದನೆಯನ್ನು ಹೆಚ್ಚಿಸುವುದು ಬೇಡ ಎಂದು ನಿರ್ಧರಿಸಿವೆ.

14 ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿರುವ ತೈಲ ಬೆಲೆ

14 ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿರುವ ತೈಲ ಬೆಲೆ

ತೈಲ ಬೆಲೆಗಳು ಶುಕ್ರವಾರ ಶೇಕಡಾ 2ಕ್ಕಿಂತ ಹೆಚ್ಚಾಗಿದ್ದು, ಸುಮಾರು 14 ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಏರುತ್ತಿರುವ ತೈಲ ಬೆಲೆಗಳಿಂದ ತೀವ್ರವಾಗಿ ತತ್ತರಿಸಿರುವ ಭಾರತ, ಉತ್ಪಾದಕ ಕಡಿತವನ್ನು ಸರಾಗಗೊಳಿಸುವಂತೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಗೆ ಸಹಾಯ ಮಾಡುವಂತೆ ಉತ್ಪಾದಕರನ್ನು ಕೋರಿದೆ.

ತೈಲ ಆಮದುದಾರರಿಗೆ ಕೆಟ್ಟ ಸುದ್ದಿ

ತೈಲ ಆಮದುದಾರರಿಗೆ ಕೆಟ್ಟ ಸುದ್ದಿ

"ಒಪೆಕ್ + ನಿರ್ಧಾರವು ನಮಗೆ ಬೇಸರ ತರಿಸಿದೆ. ಇದು ಭಾರತ, ಚೀನಾ, ಜಪಾನ್, ಕೊರಿಯಾ ಮತ್ತು ಇತರ ಹೆಚ್ಚು ಆಮದುದಾರ ರಾಷ್ಟ್ರಗಳಿಗೆ ಒಳ್ಳೆಯ ಸುದ್ದಿಯಲ್ಲ" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಮಾರ್ಚ್‌ 06ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆಮಾರ್ಚ್‌ 06ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

ಶೇಕಡಾ 84% ತೈಲ ಆಮದು

ಶೇಕಡಾ 84% ತೈಲ ಆಮದು

ಹೆಚ್ಚುತ್ತಿರುವ ತೈಲ ಬೆಲೆಗಳು ಭಾರತಕ್ಕೆ ಹಣಕಾಸಿನ ಸವಾಲುಗಳನ್ನು ಒಡ್ಡುತ್ತಿವೆ, ಈಗಾಗಲೇ ಹೆಚ್ಚು ತೆರಿಗೆ ವಿಧಿಸುವ ಮೂಲಗಳಾದ ಪೆಟ್ರೋಲ್, ಡೀಸೆಲ್ ಬೆಲೆಗಳು ದೇಶದ ಕೆಲವು ಭಾಗಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಬೇಡಿಕೆ ಚಾಲಿತ ಚೇತರಿಕೆಗೆ ಬೆದರಿಕೆ ಹಾಕಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತವು ತನ್ನ ತೈಲದ ಸುಮಾರು 84% ನಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ಅದರ ಬೇಡಿಕೆಯ ಐದನೇ ಒಂದು ಭಾಗವನ್ನು ಪೂರೈಸಲು ಮಧ್ಯಪ್ರಾಚ್ಯ ಸರಬರಾಜುಗಳನ್ನು ಅವಲಂಬಿಸಿದೆ.

English summary

India Says OPEC+ Decision To Hit Economic Recovery

India says on Friday the decision by major producers to extend output cuts as prices move higher could threaten the consumption led-recovery in some countries.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X