For Quick Alerts
ALLOW NOTIFICATIONS  
For Daily Alerts

ಕೊರೊನಾ ಆರ್ಥಿಕ ಬಿಕ್ಕಟ್ಟಿಗೆ ಬೇಕಂತೆ ಕನಿಷ್ಠ 16 ಲಕ್ಷ ಕೋಟಿ ಉತ್ತೇಜನ

|

ಕೊರೊನಾದ ಕಾರಣಕ್ಕೆ ತಲೆದೋರಿರುವ ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರಲು ಆರ್ಥಿಕ ಉತ್ತೇಜನಕ್ಕೆ ಪ್ಯಾಕೇಜ್ ಬೇಕಿದೆ ಎಂದು ಅಸೋಸಿಯೇಷನ್ ಚೇಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾ (ASSOCHAM) ಹೇಳಿದೆ. ಅದಕ್ಕಾಗಿ ಕನಿಷ್ಠ 20 ಸಾವಿರ ಕೋಟಿ ಅಮೆರಿಕನ್ ಡಾಲರ್ ಮೊತ್ತವು ಭಾರತದ ಆರ್ಥಿಕತೆಗೆ ಈ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯ ಇದೆ ಎಂದಿದೆ.

ಈ ಮೊತ್ತವನ್ನು ಭಾರತದ ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 16.20 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಕೆಲಸ ಕಳೆದುಕೊಂಡಿರುವವರು, ಆದಾಯ ಕಳೆದುಕೊಂಡಿರುವವರ ಸ್ಥಿತಿ ಸುಧಾರಿಸುವ ಸಲುವಾಗಿಯೇ ಮುಂದಿನ ಮೂರು ತಿಂಗಳಲ್ಲಿ 50- 100 ಬಿಲಿಯನ್ ಅಮೆರಿಕನ್ ಡಾಲರ್ ಅಗತ್ಯ ಇದೆ ಎನ್ನಲಾಗಿದೆ.

2020ರಲ್ಲಿ ಜಾಗತಿಕ ರಿಸೆಷನ್; ವಾರ್ನಿಂಗ್ ಕೊಟ್ಟಿದೆ ರಿಸರ್ವ್ ಬ್ಯಾಂಕ್2020ರಲ್ಲಿ ಜಾಗತಿಕ ರಿಸೆಷನ್; ವಾರ್ನಿಂಗ್ ಕೊಟ್ಟಿದೆ ರಿಸರ್ವ್ ಬ್ಯಾಂಕ್

ಕೇಂದ್ರ ಹಣಕಾಸಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ASSOCHAM ಅಧ್ಯಕ್ಷ ನಿರಂಜನ್ ಹಿರನಂದನಿ ಶಿಫಾರಸುಗಳನ್ನು ಸಲ್ಲಿಸಿದ್ದಾರೆ. ಮುಂದಿನ 12ರಿಂದ 18 ತಿಂಗಳಲ್ಲಿ 200 ಬಿಲಿಯನ್ ಡಾಲರ್ ನಿಂದ 300 ಬಿಲಿಯನ್ ಡಾಲರ್ ತನಕ ಆರ್ಥಿಕ ಉತ್ತೇಜನ ನೀಡಬೇಕು. ಮುಂದಿನ ಮೂರು ತಿಂಗಳಲ್ಲಿ 50- 100 ಬಿಲಿಯನ್ ಅಮೆರಿಕನ್ ಡಾಲರ್ ನಗದು ಮೊತ್ತವನ್ನು ತರಬೇಕು ಎಂಬುದು ಕೂಡ ಶಿಫಾರಸಿನಲ್ಲಿ ಇದೆ.

ಕೊರೊನಾ ಆರ್ಥಿಕ ಬಿಕ್ಕಟ್ಟಿಗೆ ಬೇಕಂತೆ ಕನಿಷ್ಠ 16 ಲಕ್ಷ ಕೋಟಿ ಉತ್ತೇಜನ

ಇಂಥ ಸವಾಲಿನ ಸನ್ನಿವೇಶದಲ್ಲಿ ಇದರಿಂದ ವ್ಯಾಪಾರ, ವ್ಯವಹಾರಗಳಿಗೆ ಹಾಗೂ ಉದ್ಯೋಗಸ್ಥರಿಗೆ ನೆರವಾಗುತ್ತದೆ. ಈ ನಗದು ಮೊತ್ತವನ್ನು ಮೂರು ಉದ್ದೇಶಕ್ಕೆ ಬಳಸಬೇಕು. ಉದ್ಯೋಗಿಗಳು- ಕಾರ್ಮಿಕರಿಗೆ ನೇರವಾಗಿ ವರ್ಗಾವಣೆ ಮಾಡಬೇಕು, ಕಂಪೆನಿಗಳಿಗೆ ಸದ್ಯಕ್ಕೆ ಕಾಡುತ್ತಿರುವ ನಗದು ಕೊರತೆ ನಿವಾರಿಸಲು ಬಳಕೆ ಆಗಬೇಕು ಮತ್ತು ಅಂತಿಮವಾಗಿ ಆರ್ಥಿಕ ನಿಯಮ ಹಾಗೂ ತೆರಿಗೆ ಕ್ರಮಗಳ ಮೂಲಕ ಹೂಡಿಕೆ ಮತ್ತು ಬೇಡಿಕೆ ಹೆಚ್ಚಾಗಲು ಉತ್ತೇಜಿಸಬೇಕು ಎಂದಿದ್ದಾರೆ.

ಇನ್ನು ಜಿಎಸ್ ಟಿ ದರವನ್ನು ಮುಂದಿನ ಮೂರು ತಿಂಗಳಿಗೆ ಶೇಕಡಾ ಐವತ್ತು ಪರ್ಸೆಂಟ್ ಹಾಗೂ ಆರ್ಥಿಕ ವರ್ಷದ ಉಳಿದ ಅವಧಿಗೆ ಶೇಕಡಾ ಇಪ್ಪತ್ತೈದು ಪರ್ಸೆಂಟ್ ಇಳಿಕೆ ಮಾಡಬೇಕು. ಇನ್ನು ಜಿಎಸ್ ಟಿ ಹಾಗೂ ತೆರಿಗೆ ಮೊತ್ತವನ್ನು ಕಂತುಗಳಲ್ಲಿ, ಯಾವುದೇ ಬಡ್ಡಿ ಹಾಕದಂತೆ ಪಾವತಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಲಾಗಿದೆ.

English summary

'Indian Economy Needs 200- 300 Billion USD Economic Stimulus'

According to ASSOCHAM, Indian economy needs 200-300 billion USD economic stimulus.
Story first published: Thursday, April 9, 2020, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X