For Quick Alerts
ALLOW NOTIFICATIONS  
For Daily Alerts

"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"

By ಅನಿಲ್ ಆಚಾರ್
|

ಭಾರತ ಸರ್ಕಾರವು ಟಿಕ್ ಟಾಕ್ ಮತ್ತು ಇತರ ಚೀನೀ ಅಪ್ಲಿಕೇಷನ್ ಗಳಿಗೆ ನೋಟಿಸ್ ಕಳುಹಿಸಿದೆ. ಮಧ್ಯಂತರವಾಗಿ ಈ ಅಪ್ಲಿಕೇಷನ್ ಗಳ ಮೇಲೆ ಹಾಕಿದ್ದ ನಿಷೇಧವು ಈ ಶಾಶ್ವತ ಮಾಡಲಾಗುತ್ತಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ನಾವು ನೋಟಿಸ್ ಮೌಲ್ಯಮಾಪನ ಮಾಡುತ್ತಿದ್ದೇವೆ. ಸೂಕ್ತವಾದ ಪ್ರತಿಕ್ರಿಯೆ ನೀಡಲಿದ್ದೇವೆ. ಜೂನ್ 29, 2020ರಂದು ಭಾರತ ಸರ್ಕಾರ ನೀಡಿದ ನಿರ್ದೇಶನಕ್ಕೆ ಮೊದಲು ಬದ್ಧವಾಗಿದ್ದು ನಮ್ಮ ಕಂಪೆನಿ. ಸ್ಥಳೀಯ ಕಾನೂನು ಹಾಗೂ ನಿಬಂಧನೆಗಳಿಗೆ ನಿರಂತರವಾಗಿ ಬದ್ಧವಾಗಿರುವುದಕ್ಕೆ ಶ್ರಮಿಸುತ್ತೇವೆ.

ನಿಷೇಧಿತ ಚೀನಾ App, ಸಂಸ್ಥೆಗಳಿಗೆ ಸರ್ಕಾರದಿಂದ 80 ಸವಾಲುನಿಷೇಧಿತ ಚೀನಾ App, ಸಂಸ್ಥೆಗಳಿಗೆ ಸರ್ಕಾರದಿಂದ 80 ಸವಾಲು

ಸರ್ಕಾರದಿಂದ ಯಾವುದಾದರೂ ಆಕ್ಷೇಪಗಳಿದ್ದಲ್ಲಿ ಅದನ್ನು ಸರಿಪಡಿಸಲು ನಮ್ಮೆಲ್ಲ ಶ್ರಮ ಹಾಕುತ್ತೇವೆ. ನಮ್ಮ ಬಳಕೆದಾರರ ಖಾಸಗಿತನ ಮತ್ತು ಭದ್ರತೆ ಕಾಪಾಡುವುದು ಪ್ರಮುಖ ಆದ್ಯತೆ ಆಗಿದೆ ಎಂದು ಟಿಕ್ ಟಾಕ್ ವಕ್ತಾರ ಹೇಳಿದ್ದಾರೆ ಎಂಬುದಾಗಿ ವರದಿ ಆಗಿದೆ.

ನಿಷೇಧಿತ ಆಪ್ ಗಳ ಪಟ್ಟಿಯನ್ನು ಭಾರತೀಯ ಸರ್ಕಾರ ಮೊದಲು ಬಿಡುಅಗಡೆ ಮಾಡಿದ್ದು ಜೂನ್ 29, 2020ರಲ್ಲಿ. ಅದರಲ್ಲಿ ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಶೀನ್, ಲೈಕಿ ಮತ್ತು ಕ್ಯಾಮ್ ಸ್ಕ್ಯಾನರ್ ಸೇರಿ 59 ಅಪ್ಲಿಕೇಷನ್ ಹೆಸರುಗಳಿದ್ದವು.

ಲಡಾಕ್ ಕಣಿವೆಯಲ್ಲಿನ ಗಾಲ್ವಾನ್ ನಲ್ಲಿ ಉದ್ಭವಿಸಿದ ಸಂಘರ್ಷ ಸ್ಥಿತಿಗೆ ಭಾರತವು ಚೀನಾಗೆ ನೀಡಿದ ಪ್ರತಿಕ್ರಿಯೆ ಈ ನಿಷೇಧ ಎಂದು ಬಿಂಬಿಸಲಾಗಿತ್ತು. ಸಂಬಂಧಪಟ್ಟ ಸಚಿವಾಲಯವು ಬಿಡುಗಡೆ ಮಾಡಿದ ಹೆಳಿಕೆ ಪ್ರಕಾರ, ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆ, ರಕ್ಷಣಾ ವ್ಯವಸ್ಥೆ, ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಆತಂಕವೊಡ್ಡುವುದರಿಂದ ಅವುಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69A ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿತ್ತು.

ನಿಷೇಧಿತ ಆಪ್ ಗಳ ಎರಡನೇ ಪಟ್ಟಿ ಸೆಪ್ಟೆಂಬರ್ 5ನೇ ತಾರೀಕು ಬಂದಿತ್ತು. ಆಗ 188 ಅಪ್ಲಿಕೇಷನ್, ಮೂರನೇ ಪಟ್ಟಿ ನವೆಂಬರ್ 24ನೇ ತಾರೀಕಿನಂದು ಬಿಡುಗಡೆ ಮಾಡಿ, 43 ಆಪ್ ಗಳನ್ನು ನಿಷೇಧಿಸಲಾಯಿತು.

English summary

Indian Government To Ban Some Chinese Application Permanently: Report

India government to ban some Chinese application permanently, according to report.
Story first published: Sunday, January 24, 2021, 13:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X