For Quick Alerts
ALLOW NOTIFICATIONS  
For Daily Alerts

ಭಾರತೀಯರಿಗೆ ಈ 16 ದೇಶಕ್ಕೆ ಹೋಗಲು ಪಾಸ್ ಪೋರ್ಟ್ ಸಾಕು, ವೀಸಾ ಬೇಕಿಲ್ಲ

|

ಭಾರತದ ಪಾಸ್ ಪೋರ್ಟ್ ಇರುವಂಥವರಿಗೆ ನೇಪಾಳ, ಭೂತಾನ್ ಹಾಗೂ ಮಾರಿಷಿಯಸ್ ಸೇರಿದಂತೆ ಹದಿನಾರು ರಾಷ್ಟ್ರಗಳಿಗೆ ವೀಸಾದ ಅಗತ್ಯ ಇಲ್ಲದೆ ಪ್ರವೇಶ ದೊರೆಯುತ್ತದೆ ಎಂದು ಈಚೆಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರವನ್ನು ನೀಡಿದರು.

ದುಬೈನಲ್ಲಿ ನೆಲೆಸಲು ಬಯಸುವವರಿಗೆ ಕೈ ಬೀಸಿ ಕರೆಯುತ್ತಿದೆ, ಇಲ್ಲಿವೆ ನಿಯಮಗಳು

43 ದೇಶಗಳಲ್ಲಿ ವೀಸಾ ಆನ್ ಅರೈವಲ್ ವ್ಯವಸ್ಥೆ ದೊರೆಯುತ್ತದೆ ಹಾಗೂ ಸಾಮಾನ್ಯ ಪಾಸ್ ಪೋರ್ಟ್ ಹೊಂದಿರುವವರಿಗೆ 36 ದೇಶಗಳಲ್ಲಿ ಇ- ವೀಸಾ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದ್ದಾರೆ. "ಹದಿನಾರು ದೇಶಗಳಲ್ಲಿ ಭಾರತದ ಪಾಸ್ ಪೋರ್ಟ್ ದಾರರಿಗೆ ವೀಸಾದ ಅಗತ್ಯ ಇಲ್ಲದೆ ಪ್ರವೇಶ ನೀಡಲಾಗುತ್ತದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ವೀಸಾ ಅಗತ್ಯ ಇಲ್ಲದ ಹದಿನಾರು ದೇಶಗಳಿವು
 

ವೀಸಾ ಅಗತ್ಯ ಇಲ್ಲದ ಹದಿನಾರು ದೇಶಗಳಿವು

ಬಾರ್ಬಡೋಸ್, ಭೂತಾನ್, ಡೊಮಿನಿಕಾ, ಗ್ರೆನೆಡಾ, ಹೈಟಿ, ಹಾಂಕಾಂಗ್ SAR, ಮಾಲ್ಡೀವ್ಸ್, ಮಾರಿಷಿಯಸ್, ಮಾಂಟ್ಸೆರಟ್, ನೇಪಾಳ, ನೀಯು ದ್ವೀಪ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸಮೋವಾ, ಸೆನೆಗಲ್, ಸರ್ಬಿಯಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋಗೆ ಭಾರತದ ಸಾಮಾನ್ಯ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ಅಗತ್ಯ ಇಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

43 ದೇಶಗಳಿಗೆ ವೀಸಾ ಆನ್ ಅರೈವಲ್

43 ದೇಶಗಳಿಗೆ ವೀಸಾ ಆನ್ ಅರೈವಲ್

ಇರಾನ್, ಇಂಡೋನೇಷ್ಯಾ, ಮ್ಯಾನ್ಮಾರ್ ಸೇರಿದಂತೆ 43 ದೇಶಗಳಿಗೆ ತೆರಳುವವರಿಗೆ ಭಾರತದ ಪಾಸ್ ಪೋರ್ಟ್ ಇದ್ದಲ್ಲಿ ವೀಸಾ ಆನ್ ಅರೈವಲ್ ಸಿಗುತ್ತದೆ. ಶ್ರೀಲಂಕಾ, ನ್ಯೂಜಿಲ್ಯಾಂಡ್, ಮಲೇಷ್ಯಾ ಸೇರಿ 36 ದೇಶಗಳಲ್ಲಿ ಅದೇ ಸಾಮಾನ್ಯ ಪಾಸ್ ಪೋರ್ಟ್ ಗೆ ಇ ವೀಸಾ ದೊರೆಯುತ್ತದೆ.

ದ್ವಿಪಕ್ಷೀಯ ಒಪ್ಪಂದದ ಮೂಲಕ ತೀರ್ಮಾನ

ದ್ವಿಪಕ್ಷೀಯ ಒಪ್ಪಂದದ ಮೂಲಕ ತೀರ್ಮಾನ

ವೀಸಾ ಇಲ್ಲದಂತೆ, ವೀಸಾ ಆನ್ ಅರೈವಲ್ ಹಾಗೂ ಇ ವೀಸಾ ಮೂಲಕ ಇನ್ನೂ ಹೆಚ್ಚೆಚ್ಚು ದೇಶಗಳಿಗೆ ತೆರಳುವುದಕ್ಕೆ ಅನುಕೂಲವಾಗುವಂತೆ ಸರ್ಕಾರವು ಶ್ರಮಿಸುತ್ತಿದೆ ಎಂದು ಮುರಳೀಧರನ್ ತಿಳಿಸಿದ್ದಾರೆ. ಎರಡು ದೇಶಗಳ ದ್ವಿಪಕ್ಷೀಯ ಮಾತುಕತೆ, ಒಪ್ಪಂದ ಮೇಲೆ ಈ ವೀಸಾ ನಿಯಮಗಳು ಅವಲಂಬನೆ ಆಗಿರುತ್ತವೆ ಎಂದು ಅವರು ಹೇಳಿದ್ದಾರೆ.

English summary

Indian Passport Holders Don't Require Visa For These 16 Countries

These 16 countries allow Indian passport holders without visa. Here is the visa on arrival and e visa facility for Indian passport holders.
Company Search
COVID-19