For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಹೆಚ್ಚಾಗಲಿದೆ ರೈಲ್ವೆ ಟಿಕೆಟ್ ದರ

|

ರೈಲ್ವೆ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಶಾಕಿಂಗ್ ನ್ಯೂಸ್ ಕಾದಿದ್ದು, ಎಲ್ಲಾ ಶ್ರೇಣಿಯ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ. ರೈಲು ಪ್ರಯಾಣ ಪ್ರತಿ ಕಿ.ಮೀ. 5 ರಿಂದ 40 ಪೈಸೆವರೆಗೆ ದುಬಾರಿಯಾಗಲಿದೆ.

ಭಾರತೀಯ ರೈಲ್ವೆ ಇಲಾಖೆ ಸರಕು ಸಾಗಣೆ ಮತ್ತು ಪ್ರಯಾಣಿಕರ ಟಿಕೆಟ್ ದರವನ್ನು ಶ್ರೀಘ್ರವೇ ಏರಿಕೆ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಗುರುವಾರ ಹೇಳಿದ್ದಾರೆ. ಈ ಮೂಲಕ ರೈಲ್ವೇ ಟಿಕೆಟ್ ದರವನ್ನು 15 ರಿಂದ 20 ಪರ್ಸೆಂಟ್ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಸುದ್ದಿಗಳು ಹರಿದಾಡುತ್ತಿದೆ.

ಹೊಸ ವರ್ಷಕ್ಕೆ ಹೆಚ್ಚಾಗಲಿದೆ ರೈಲ್ವೆ ಟಿಕೆಟ್ ದರ

ಪ್ರಸ್ತುತ ಪ್ರಯಾಣಿಕರ ಟಿಕೆಟ್ ದರವನ್ನು ಏರಿಕೆ ಮಾಡುವ ಚರ್ಚೆ ನಡೆದಿದ್ದು, ಸರಕು ಸಾಗಣೆ ದರವನ್ನು ಹೆಚ್ಚು ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ ಯಾದವ್ ತಿಳಿಸಿದ್ದಾರೆ.

ಈಗಾಗಲೇ ರೈಲ್ವೆಯ ತಿಂಡಿ-ಊಟ ದರವನ್ನು ಹೆಚ್ಚಳ ಮಾಡಲಾಗಿದೆ. ಊಟದ ದರವನ್ನು 70 ರುಪಾಯಿ ನಿಗದಿ ಮಾಡಿದ್ದು, ಚಿಕನ್ ಬಿರಿಯಾನಿ 100 ರುಪಾಯಿ, ಸಸ್ಯಹಾರಿ ಬಿರಿಯಾನಿ 70 ರುಪಾಯಿಗೆ ಲಭ್ಯವಿದೆ. ಇದರ ಜೊತೆಗೆ ಮುಂಬೈ, ಚೆನ್ನೈ, ಸೇರಿದಂತೆ ಹಲವು ನಗರಗಳ ಸಬ್‌ ಅರ್ಬನ್ ರೈಲುಗಳ ಟಿಕೆಟ್ ದರವೂ ಹೆಚ್ಚಳವಾಗುವ ಸಾಧ್ಯತೆ ಇದೆ.

English summary

Indian Railways To Increase Train Fares For New year

Indian railways all set to hike train fares this week by 5 to 40 paise per kilometer
Story first published: Friday, December 27, 2019, 10:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X