For Quick Alerts
ALLOW NOTIFICATIONS  
For Daily Alerts

ಮಲೇಷಿಯಾ ಪ್ರವಾಸಕ್ಕೆ ಇನ್ಮುಂದೆ ವೀಸಾ ಬೇಕಿಲ್ಲ

|

ಮಲೇಷಿಯಾ ಪ್ರವಾಸ ಕೈಗೊಳ್ಳಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ನೀವು ಮಲೇಷಿಯಾ ಪ್ರವಾಸ ಕೈಗೊಳ್ಳುವ ಕನಸು ಸುಲಭವಾಗಿ ಈಡೇರಲಿದೆ. ಇದಕ್ಕೆ ಕಾರಣ ಮಲೇಷಿಯಾಗೆ ತೆರಳಲು ಪಾಸ್‌ಪೋರ್ಟ್ ಇದ್ದರಷ್ಟೇ ಸಾಕು ವೀಸಾ ಬೇಕಾಗಿಲ್ಲ.

 

ಮಲೇಷಿಯಾ ಸರ್ಕಾರವು ಭಾರತೀಯ ಪ್ರಜೆಗಳಿಗೆ ಸುವರ್ಣಾವಕಾಶ ನೀಡಿದೆ. ವೀಸಾ ರಹಿತವಾಗಿ 15 ದಿನಗಳ ಕಾಲ ಮಲೇಷಿಯಾವನ್ನು ಸುತ್ತಾಡಬಹುದು. ಭಾರತೀಯ ಮತ್ತು ಚೀನಾ ಪ್ರಜೆಗಳಿಗೆ ಈ ವೀಸಾ ರಿಯಾಯಿತಿ ನೀಡಲಾಗಿದೆ. ಮಲೇಷಿಯಾ ಪ್ರವಾಸ ಕೈಗೊಳ್ಳುವವರು ವಿದ್ಯುನ್ಮಾನ ಪ್ರವಾಸ ನೋಂದಣಿ ಹಾಗೂ ಮಾಹಿತಿ ವ್ಯವಸ್ಥೆಯಲ್ಲಿ (eNTRI) ನಿಮ್ಮ ಹೆಸರನ್ನು ನೋಂದಾಯಿಸಬೇಕು. ಒಂದು ಬಾರಿ ನೋಂದಣಿಯಾದರೆ ಮೂರು ತಿಂಗಳೊಳಗೆ ಯಾವಾಗ ಬೇಕಾದರೂ ಮಲೇಷಿಯಾ ಪ್ರವಾಸ ಕೈಗೊಳ್ಳಬಹುದು.

 
ಮಲೇಷಿಯಾ ಪ್ರವಾಸಕ್ಕೆ ಇನ್ಮುಂದೆ ವೀಸಾ ಬೇಕಿಲ್ಲ

ಕಳೆದ ಹಲವು ತಿಂಗಳಿನಲ್ಲಿ ಭಾರತ ಹಾಗೂ ಚೀನಾದ ಪ್ರಜೆಗಳು ಮಲೇಷಿಯಾಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬೂಸ್ಟ್ ನೀಡಲು ಮಲೇಷಿಯಾ ಸರ್ಕಾರ ಭಾರತ ಮತ್ತು ಚೀನಾಕ್ಕೆ ವೀಸಾ ರಿಯಾಯಿತಿಯನ್ನು ನೀಡಿದೆ. ಇದು ಜನವರಿ 1ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಟ್ರಾವೆಲ್ ಏಜೆನ್ಸಿ ಮೂಲಕ ಹೆಸರನ್ನು ನೋಂದಾಯಿಸಬಹುದಾಗಿದೆ.

ಇನ್ನು ಮಲೇಷಿಯಾ ಪ್ರವಾಸ ಕೈಗೊಂಡವರು ಮತ್ತೆ ತೆರಳಲು ಇಚ್ಚಿಸಿದರೆ ಮಲೇಷಿಯಾ ತೊರೆದು 45 ದಿನಗಳ ನಂತರ ಪ್ರವಾಸಿಗರು ಮತ್ತೆ ಮಲೇಷಿಯಾ ಪ್ರವೇಶಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರು ಹಿಂದಿರುವಾಗ ಭಾರತಕ್ಕೆ ಅಥವಾ ಬೇರೆ ಯಾವುದೇ ದೇಶಕ್ಕೆ ನೇರ ಪ್ರಯಾಣ ವಿಮಾನ ಟಿಕೆಟ್ ಹೊಂದಿರಬೇಕು.

English summary

Indian's Now Travel Malaysia Visa Free For 15 Days

Indian passport holders can now travel malaysia visa free for 15 days According to new order.
Story first published: Saturday, January 4, 2020, 10:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X