For Quick Alerts
ALLOW NOTIFICATIONS  
For Daily Alerts

ಷೇರುಪೇಟೆಗೆ 2 ಹೊಸ ಕಂಪನಿಗಳ ಪ್ರವೇಶ; ಆರ್ಚಿಯನ್‌ಗೆ ಸುಗ್ಗಿ, ಫೈವ್ ಸ್ಟಾರ್‌ಗೆ ನಿರಾಸೆ

|

ಮುಂಬೈ, ನ. 21: ಭಾರತದಲ್ಲಿ ಈಗೀಗ ಐಪಿಒಗೆ ತೆರೆದುಕೊಳ್ಳುತ್ತಿರುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತೀ ವಾರ ಸರಾಸರಿ ಎರಡ್ಮೂರು ಕಂಪನಿಗಳು ಐಪಿಒ ಮೂಲಕ ಬಂಡವಾಳ ಕಲೆಹಾಕುತ್ತಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗುತ್ತಿವೆ. ಇಂದು ಸೋಮವಾರ ಫೈವ್ ಸ್ಟಾರ್ ಬ್ಯುಸಿನೆಸ್ ಫೈನಾನ್ಸ್ ಮತ್ತು ಆರ್ಚಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಸಂಸ್ಥೆಗಳು ಷೇರುಪೇಟೆಗೆ ಪದಾರ್ಪಣೆ ಮಾಡಿವೆ. ಆದರೆ, ಎರಡೂ ವಿಭಿನ್ನ ಆರಂಭ ಪಡೆದಿವೆ. ಫೈವ್ ಸ್ಟಾರ್ ಕಂಪನಿ ಹಿನ್ನಡೆ ಕಂಡರೆ, ಆರ್ಚಿಯನ್ ಕೆಮಿಕಲ್ಸ್ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.

 

ಟಾಪ್ 10 ಷೇರುಗಳ ಪೈಕಿ 8ಕ್ಕೆ ಲಾಭ, ಐಸಿಐಸಿಐ ಬ್ಯಾಂಕ್ ಲೀಡ್‌ಟಾಪ್ 10 ಷೇರುಗಳ ಪೈಕಿ 8ಕ್ಕೆ ಲಾಭ, ಐಸಿಐಸಿಐ ಬ್ಯಾಂಕ್ ಲೀಡ್‌

ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್ ಷೇರು ಬೆಲೆ

ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್ ಷೇರು ಬೆಲೆ

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ವೇಳೆ ನಿರೀಕ್ಷಿತ ಫಲ ಪಡೆಯದ ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್ ಕಂಪನಿಯ ಷೇರುಗಳು ಇಂದು ಸೋಮವಾರ ಷೇರುಪೇಟೆಯಲ್ಲಿ ಶೇ. 5ರಷ್ಟು ಕಡಿಮೆ ದರಕ್ಕೆ ಲಿಸ್ಟ್ ಆಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಫೈವ್ ಸ್ಟಾರ್ ಬ್ಯುಸಿನೆಸ್ ಫೈನಾನ್ಸ್ ಕಂಪನಿಯ ಷೇರು 474 ರೂಪಾಯಿ ಬೆಲೆಗೆ ಪಟ್ಟಿಯಾಗಿದೆ.

ನವೆಂಬರ್ 9-11ರ ಅವಧಿಯಲ್ಲಿ ಫೈವ್ ಸ್ಟಾರ್ ಬ್ಯುಸಿನೆಸ್ ಕಂಪನಿ 474 ರೂ ಷೇರು ಬೆಲೆಗೆ ಐಪಿಒಗೆ ತೆರೆದುಕೊಂಡಿತ್ತು. ಸಾಂಸ್ಥಿಕ ಹೂಡಿಕೆದಾರರು ಮಾತ್ರ ಹೆಚ್ಚಿನ ಆಸಕ್ತಿ ತೋರಿದ್ದರು. ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿರಿಸಲಾಗಿದ್ದ ಷೇರುಗಳಿಗೆ ಶೇ. 177ರಷ್ಟು ಖರೀದಿ ಅರ್ಜಿ ಬಂದಿದ್ದವು. ಉನ್ನತ ಆದಾಯ ವಿಬಾಗದ ಜನರಿಗೆ ಮೀಸಲಿರಿಸಲಾಗಿದ್ದ ಷೇರುಗಳ ಪೈಕಿ ಶೇ. 61 ಮಾತ್ರ ಮಾರಾಟ ಕಂಡಿತ್ತು. ಇನ್ನು, ರೀಟೇಲ್ ಇನ್ವೆಸ್ಟರ್‌ಗಳಂತೂ ತೀರಾ ಅನಾಸಕ್ತಿ ತೋರಿಸಿದ್ದಾರೆ. ಅವರ ಪಾಲಿಗೆ ಇರಲಾಗಿದ್ದ ಷೇರುಗಳಲ್ಲಿ ಶೇ. 11 ಮಾತ್ರ ಖರೀದಿಯಾಗಿದೆ.

ಈ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್ ಕಂಪನಿ ಶೇ. 5ರ ರಿಯಾಯಿತಿಯಲ್ಲಿ ಲಿಸ್ಟ್ ಆಗಿರುವುದು ತಿಳಿದುಬಂದಿದೆ. ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್ ಸಂಸ್ಥೆ ಸಣ್ಣ ಉದ್ದಿಮೆದಾರರು ಮತ್ತು ಸ್ವಂತ ಉದ್ಯೋಗಸ್ಥರಿಗೆ ಸಾಲಗಳನ್ನು ಒದಗಿಸುವ ಹಣಕಾಸು ಸಂಸ್ಥೆಯಾಗಿದೆ.

ಆರ್ಕಿಯನ್ ಇಂಡಸ್ಟ್ರೀಸ್ ಷೇರು ಬೆಲೆ
 

ಆರ್ಕಿಯನ್ ಇಂಡಸ್ಟ್ರೀಸ್ ಷೇರು ಬೆಲೆ

ಫೈವ್ ಸ್ಟಾರ್ ಬಿಸಿನೆಸ್ ಫೈನಾನ್ಸ್‌ಗೆ ತದ್ವಿರುದ್ಧದ ಹಣೆಬರಹ ಆರ್ಚಿಯನ್ ಕೆಮಿಕಲ್ ಇಂಡಸ್ಟ್ರಿಯದ್ದಾಗಿದೆ. ಐಪಿಒದಲ್ಲಿ ಇಷ್ಯೂ ಮಾಡಲಾಗಿದ್ದ ಷೇರು ಬೆಲೆಗಿಂತ ಶೇ. 10ರಷ್ಟು ಹೆಚ್ಚಿನ ಬೆಲೆಗೆ ಅದರ ಷೇರುಗಳು ಇಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಿವೆ.

ಐಪಿಒದಲ್ಲಿ ಆರ್ಕಿಯನ್ ಕೆಮಿಕಲ್ ಇಂಡಸ್ಟ್ರೀಸ್ ಸಂಸ್ಥೆ ಪ್ರತೀ ಷೇರಿಗೆ 407 ರೂ ಬೆಲೆ ಇಟ್ಟಿತ್ತು. ಐಪಿಒದಲ್ಲಿ 32ಕ್ಕಿಂತ ಹೆಚ್ಚು ಪಟ್ಟಿನಷ್ಟು ಖರೀದಿಗೆ ಅರ್ಜಿಗಳು ಬಂದಿದ್ದವು. ಅರ್ಹ ಸಾಂಸ್ಥಿಕ ಹೂಡಿಕೆದಾರರು 48.91 ಪಟ್ಟು ಬಿಡ್ ಸಲ್ಲಿಸಿದ್ದರು. ಉನ್ನತ ಆದಾಯ ವಿಭಾಗದ ವ್ಯಕ್ತಿಗಳಿಂದ 14.90 ಪಟ್ಟು ಬೇಡಿಕೆ ಬಂದಿದ್ದರೆ ರೀಟೇಲ್ ಹೂಡಿಕೆದಾರರಿಂದಲೂ ಹೆಚ್ಚೂಕಡಿಮೆ 10 ಪಟ್ಟು ಹೆಚ್ಚು ಆಸಕ್ತಿ ವ್ಯಕ್ತವಾಗಿತ್ತು.

ಆರ್ಕಿಯನ್ ಕೆಮಿಕಲ್ ಇಂಡಸ್ಟ್ರೀಸ್ ಸಂಸ್ಥೆ ಸಾಗರ ಕ್ಷೇತ್ರದ ರಾಸಾಯನಿಕ ಉತ್ಪಾದಕ ಕಂಪನಿಯಾಗಿದೆ. ಐಪಿಒದಲ್ಲಿ ಭರ್ಜರಿ ಪ್ರತಿಕ್ರಿಯೆ ಕಂಡು ನಿರೀಕ್ಷಿತ ರೀತಿಯಲ್ಲಿ ಬಂಡವಾಳ ಕಲೆಹಾಕಲು ಸಫಲವಾದ ಆರ್ಚಿಯನ್ ಕೆಮಿಕಲ್ ಇಂಡಸ್ಟ್ರೀಸ್ ಇಂದು ಸೋಮವಾರ ಷೇರುಪೇಟೆಯಲ್ಲಿ ಶೇ. 10ರಷ್ಟು ಹೆಚ್ಚು ಬೆಲೆಗೆ ಪದಾರ್ಪಣೆ ಮಾಡಿದೆ. ಎನ್‌ಎಸ್‌ಇ ನಿಫ್ಟಿಯಲ್ಲಿ ಅದರ ಷೇರು 450 ರೂಗೆ ಲಿಸ್ಟ್ ಆದರೆ, ಬಿಎಸ್‌ಇಯಲ್ಲಿ 449 ರೂ ಬೆಲೆ ಪಡೆದುಕೊಂಡಿದೆ.

ಜೊಮಾಟೋಗೆ ಮೋಹಿತ್ ಗುಪ್ತಾ ರಾಜೀನಾಮೆ ಎಫೆಕ್ಟ್

ಜೊಮಾಟೋಗೆ ಮೋಹಿತ್ ಗುಪ್ತಾ ರಾಜೀನಾಮೆ ಎಫೆಕ್ಟ್

ಭಾರತದ ಫುಡ್ ಡೆಲಿವರಿಯ ಆನ್‌ಲೈನ್ ಕಂಪನಿ ಜೊಮಾಟೋ ಷೇರು ಬೆಲೆ ಸೋಮವಾರ ಬೆಳಗಿನ ವಹಿವಾಟಿನಲ್ಲಿ ಶೇ. 2.16ರಷ್ಟು ಕುಸಿತ ಕಂಡಿದೆ. ಮೊನ್ನೆಯಷ್ಟೇ ಜೊಮಾಟೋದ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿರುವುದು ಜೊಮ್ಯಾಟೋ ಮೇಲೆ ಹೂಡಿಕೆದಾರರ ವಿಶ್ವಾಸವನ್ನು ತುಸು ಕುಂದುವಂತೆ ಮಾಡಿರುವ ಸಾಧ್ಯತೆ ಇದೆ. ಸದ್ಯ ಜೊಮಾಟೊ ಷೇರು ಬೆಲೆ 65.35 ರೂ ಹೊಂದಿದೆ.

ಆದರೆ, ಷೇರುಪೇಟೆ ವಿಶ್ಲೇಷಕರು ಜೊಮಾಟೋಗೆ ಸಕಾರಾತ್ಮಕ ಪ್ರತಿಕ್ರಿಯೆ ಮುಂದುವರಿಸಿದ್ದಾರೆ. ಅಮೆರಿಕ ಮೂಲಕ ಜೆಫೆರೀಸ್ ಸಂಸ್ಥೆ ಈ ಮುಂಚೆ ಜೊಮಾಟೊ ಷೇರುಗಳ ಟಾರ್ಗೆಟ್ ಬೆಲೆ 100 ಇರಬಹುದು ಎಂದು ಹೇಳಿತ್ತು. ಅಂದರೆ ನಿಗದಿತ ಅವಧಿಯಲ್ಲಿ ಜೊಮಾಟೋ ಷೇರು ಬೆಲೆ 100 ಆಗಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಇವತ್ತು ಜೊಮಾಟೋ ಷೇರು ಬೆಲೆ ಕಡಿಮೆ ಆಗಿದೆಯಾದರೂ ಜೆಫೆರೀಸ್ ಸಂಸ್ಥೆ ಜೊಮಾಟೋ ಮೇಲಿನ ತನ್ನ ನಿರೀಕ್ಷೆಯನ್ನು ಪುನರುಚ್ಚರಿಸಿದೆ.

ಮೋಹಿತ್ ಗುಪ್ತಾ ಹೊರಹೋದರೂ ದೀಪಿಂದರ್ ಗೋಯಲ್ ಉಪಸ್ಥಿತಿ ಇರುವುದರಿಂದ ಜೊಮ್ಯಾಟೋಗೆ ನಾಯಕತ್ವದ ಗೊಂದಲ ಇರುವುದಿಲ್ಲ. ಕೆಲ ದಿನಗಳ ಹೊಯ್ದಾಟದ ಬಳಿಕ ಷೇರುಪೇಟೆಯಲ್ಲಿ ಜೊಮ್ಯಾಟೋ ಸ್ಥಿರವಾಗಿ ಏರುಗತಿಗೆ ಹೋಗಬಹುದು ಎಂಬುದು ಜೆಫೆರೀಸ್ ವಾದ.

ಸೆನ್ಸೆಕ್ಸ್, ನಿಫ್ಟಿ ಕುಸಿತ

ಸೆನ್ಸೆಕ್ಸ್, ನಿಫ್ಟಿ ಕುಸಿತ

ಭಾರತೀಯ ಷೇರುಪೇಟೆಯ ವಿವಿಧ ಮಾರುಕಟ್ಟೆಗಳು ಇಂದು ಕುಸಿತ ಕಂಡಿವೆ. ಬೆಳಗ್ಗೆ 11 ಗಂಟೆಯವರೆಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 449.69 ಅಂಕ ಕುಸಿದು 61,213.79 ಮಟ್ಟ ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 134.10 ಅಂಕಗಳನ್ನು ಕಳೆದುಕೊಂಡು 18,173.60 ಮಟ್ಟಕ್ಕೆ ಇಳಿದಿದೆ.

ಸೆನ್ಸೆಕ್ಸ್‌ನ ಬಹುತೇಕ ಸೂಚ್ಯಂಕಗಳು ಕಡಿಮೆಗೊಂಡಿವೆ. ಆಟೊಮೊಬೈಲ್ ಮತ್ತು ಸ್ಮಾಲ್‌ಕ್ಯಾಪ್ ಬಿಟ್ಟು ಉಳಿದ ಸೂಚ್ಯಂಗಳು ನೆಗಟಿವ್ ಗ್ರೋತ್ ಕಂಡಿವೆ. ನಿಫ್ಟಿಯಲ್ಲಿ ಸರ್ಕಾರಿ ಬ್ಯಾಂಕ್ ವಿಭಾಗದ ಸೂಚ್ಯಂಕ ಮಾತ್ರ ಹೆಚ್ಚಳ ಕಂಡಿರುವುದು. ಉಳಿದವು ಕುಸಿತ ಕಂಡಿವೆ. ಅದರಲ್ಲೂ ಐಟಿ ಕಂಪನಿಗಳ ಸೂಚ್ಯಂಕ ಶೇ. 1.37ರಷ್ಟು ಹಿನ್ನಡೆ ಕಂಡಿದೆ.

ಇದೇ ವೇಳೆ, ಬಿಎಸ್‌ಇಯ ಎಸ್ ಅಂಡ್ ಪಿ ಸೆನ್ಸೆಕ್ಸ್ ಇಂಡೆಕ್ಸ್‌ನ ಪಟ್ಟಿಯಲ್ಲಿ ಒಂದು ಬದಲಾವಣೆ ಆಗಿದೆ. ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆಯ ಬದಲಿಗೆ ಈ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಅನ್ನು ಸೇರಿಸಲಾಗಿದೆ.

English summary

Indian Stock Market Updates: Archean Chemical Industries Great Debut, Five Star Business Finance Gets Lower Price

Archean Chemical Industries and Five Star Business Finance has made different debuts to Indian stock markets. While Archean has begun on positive note, Five Star Business shares listed on 10% discount price in the market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X