For Quick Alerts
ALLOW NOTIFICATIONS  
For Daily Alerts

Come Back Home: ಟ್ವಿಟ್ಟರ್‌, ಮೆಟಾದಿಂದ ಉದ್ಯೋಗ ಕಳೆದುಕೊಂಡ ಭಾರತೀಯರಿಗೆ ಈ ಸಂಸ್ಥೆಯ ಆಫರ್!

|

ಮೆಟಾ, ಟ್ವಿಟ್ಟರ್ ಸೇರಿದಂತೆ ಹಲವಾರು ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ, ಭಾರತೀಯರನ್ನು ಕೂಡಾ ವಜಾ ಮಾಡಲಾಗಿದೆ. ಈ ಭಾರತೀಯ ಉದ್ಯೋಗಿಗಳಿಗೆ ಡ್ರೀಮ್ 11ನ ಸಿಇಒ, ಸಹಸಂಸ್ಥಾಪಕರಾದ ಹರ್ಷ ಜೈನ್ ಆಫರ್ ಅನ್ನು ನೀಡಿದ್ದಾರೆ. Come Back Home ಎಂದು ಹೇಳುವ ಮೂಲಕ ಉದ್ಯೋಗ ಕಳೆದುಕೊಂಡ ಭಾರತೀಯರನ್ನು ತಮ್ಮ ಸಂಸ್ಥೆಗೆ ಆಹ್ವಾನಿಸಿದ್ದಾರೆ.

"ಮೆಟಾ, ಟ್ವಿಟ್ಟರ್ ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗವನ್ನು ಕಳೆದುಕೊಂಡು, ವೀಸಾ ಸಮಸ್ಯೆಯಾಗಿ ಸಂಕಷ್ಟದಲ್ಲಿರುವವರು ನಮ್ಮ ಡ್ರೀಮ್ 11 ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬಹುದು," ಎಂದು ಕೂಡಾ ತಿಳಿಸಿದ್ದಾರೆ. ಹಾಗೆಯೇ ಡ್ರೀಮ್ ಸ್ಪೋರ್ಟ್ಸ್ ಸಂಸ್ಥೆಯು 'ಉತ್ತಮ ಪ್ರತಿಭೆ, ಡಿಸೈನ್, ಟೆಕ್‌ ಕ್ಷೇತ್ರದಲ್ಲಿ ವಿಶೇಷ ಅನುಭವ ಹೊಂದಿರುವವರನ್ನು' ನಾವು ಎದುರು ನೋಡುತ್ತೇವೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳು ವಜಾಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳು ವಜಾ

"2022ರಲ್ಲಿ ಹಲವಾರು ಟೆಕ್ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಯುಎಸ್‌ನಲ್ಲಿ ವಜಾ ಮಾಡಲಾಗಿದೆ. (ಸುಮಾರು 52000ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ). ಭಾರತೀಯರು ಮತ್ತೆ ತಮ್ಮ ತವರಿಗೆ ಬನ್ನಿ. ಮುಖ್ಯವಾಗಿ ಯಾರು ವೀಸಾ ಸಮಸ್ಯೆಯನ್ನು ಹೊಂದಿದ್ದಾರೆ ಅವರು ಭಾರತಕ್ಕೆ ಹಿಂದಿರುಗಿ ಬನ್ನಿ. ಸಂಸ್ಥೆ ಮುಂದಿನ ದಶಕದಲ್ಲಿ ಅಭಿವೃದ್ದಿ ಹೊಂದಲು ಸಹಾಯ ಮಾಡಲು ಇಲ್ಲಿಗೆ ಬನ್ನಿ," ಎಂದು ಹರ್ಷ ಜೈನ್ ಟ್ವೀಟ್ ಮಾಡಿದ್ದಾರೆ.

 ಉದ್ಯೋಗಿಗಳನ್ನು ವಜಾ ಮಾಡಿರುವ ಮೆಟಾ!

ಉದ್ಯೋಗಿಗಳನ್ನು ವಜಾ ಮಾಡಿರುವ ಮೆಟಾ!

ಮೆಟಾ ಹಾಗೂ ಟ್ವಿಟ್ಟರ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಸುಮಾರು 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸುಮಾರು ಶೇಕಡ 13ರಷ್ಟು ಉದ್ಯೋಗಿಗಳನ್ನು ದಿಢೀರ್ ವಜಾಗೊಳಿಸಿದೆ. ಫೇಸ್‌ಬುಕ್ ಅನ್ನು ನಿರ್ವಹಣೆ ಮಾಡುವ ಮೆಟಾದ ಷೇರುಗಳು ಈ ವರ್ಷ ಭಾರೀ ನಷ್ಟವನ್ನು ಅನುಭವಿಸಿದೆ. ಮೆಟಾ ಷೇರುಗಳು ಶೇಕಡ 70ರಷ್ಟು ಕುಸಿದಿದೆ. ಸುಮಾರು 255.79 ಬಿಲಿಯನ್ ಡಾಲರ್ ಕುಸಿತ ಕಂಡಿದೆ.

 ಟ್ವಿಟ್ಟರ್‌ಗೆ ನಷ್ಟ, ಉದ್ಯೋಗಿಗಳಿಗೆ ಕಷ್ಟ!

ಟ್ವಿಟ್ಟರ್‌ಗೆ ನಷ್ಟ, ಉದ್ಯೋಗಿಗಳಿಗೆ ಕಷ್ಟ!

ಇನ್ನು ಟ್ವಿಟ್ಟರ್ ಅನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಟ್ವಿಟ್ಟರ್ ಭಾರೀ ನಷ್ಟವನ್ನು ಕಂಡಿದೆ. ಇದಾದ ಬೆನ್ನಲ್ಲೇ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾ ಮಾಡಿದೆ. ಹಲವಾರು ಭಾರತೀಯರು ಕೂಡಾ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಉದ್ಯೋಗ ಕಡಿತ ಮಾಡುವುದು ಅನಿವಾರ್ಯವಾಗಿದೆ. ಬೇರೆ ಆಯ್ಕೆಯಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಟ್ವಿಟ್ಟರ್ ಅನ್ನು ತನ್ನ ಮಾಲೀಕತ್ವಕ್ಕೆ ಮಸ್ಕ್ ಪಡೆಯುವ ಪ್ರಕ್ರಿಯೆ ಆರಂಭವಾದಗಲೇ ಟ್ವಿಟ್ಟರ್‌ನಲ್ಲಿ ಉದ್ಯೋಗ ಕಡಿತದ ಬಗ್ಗೆ ಸುದ್ದಿಯಾಗಿತ್ತು. ಮೊದಲು ಶೇಕಡ 75ರಷ್ಟು ಉದ್ಯೋಗ ಕಡಿತ ಮಾಡಲಾಗುತ್ತದೆ ಎಂಬ ವದಂತಿ ಹಬ್ಬಿದ್ದರೆ, ಬಳಿಕ ಅರ್ಧ ಭಾಗದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂಬ ಸುದ್ದಿಯಿತ್ತು.

 ಲಾಭದಲ್ಲಿರುವ ಇಂಡಿಯನ್ ಟೆಕ್

ಲಾಭದಲ್ಲಿರುವ ಇಂಡಿಯನ್ ಟೆಕ್

ಮೆಟಾ, ಟ್ವಿಟ್ಟರ್ ಸೇರಿದಂತೆ ಹಲವಾರು ಸಂಸ್ಥೆಗಳು ಭಾರೀ ನಷ್ಟವನ್ನು ಕಂಡಿದೆ. ಟೆಸ್ಲಾ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ ಟ್ವಿಟ್ಟರ್ ನಷ್ಟವನ್ನು ಸರಿದೂಗಿಸಲು ತನ್ನ ಟೆಸ್ಲಾ ಷೇರುಗಳ ಮಾರಾಟಕ್ಕೆ ಇಳಿದಿದ್ದಾರೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟದಿಂದ ಮಸ್ಕ್ ಕೆಳಕ್ಕೆ ಇಳಿಯುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗಿದೆ. ಈ ನಡುವೆ ಇಂಡಿಯನ್ ಟೆಕ್ ಸಂಸ್ಥೆ ಲಾಭದಲ್ಲಿದೆ. "ಡ್ರೀಮ್11 ಲಾಭವನ್ನು ಕಂಡಿದೆ. ಡ್ರೀಮ್ ಸ್ಪೋರ್ಟ್ಸ್ 150 ಬಿಲಿಯನ್ ಬಳಕೆದಾರರನ್ನು ಹೊಂದಿದೆ," ಎಂದಿದ್ದಾರೆ.

 ಡ್ರೀಮ್11 ಬಗ್ಗೆ ಮಾಹಿತಿ

ಡ್ರೀಮ್11 ಬಗ್ಗೆ ಮಾಹಿತಿ

ಡ್ರೀಮ್11 ಎಂಬುವುದು ಫಾಂಟಸಿ ಸ್ಪೋರ್ಟ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಬಳಕೆದಾರರಿಗೆ ಕ್ರಿಕೆಟ್, ಫುಟ್ ಬಾಲ್, ಹಾಕಿ ಮೊದಲಾದ ಕ್ರೀಡೆಗಳ ಫಾಂಟಸಿ ಟೀಮ್ ಅನ್ನು ಕ್ರಿಯೆಟ್ ಮಾಡಲು ಅವಕಾಶ ನೀಡುತ್ತದೆ. ಡ್ರೀಮ್11 ಭಾರತದ ಮೊದಲ ಗೇಮಿಂಗ್ ಸಂಸ್ಥೆಯಾಗಿದೆ.

ಭಾರತದಲ್ಲಿ 200ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಿದ ಟ್ವಿಟ್ಟರ್!ಭಾರತದಲ್ಲಿ 200ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಿದ ಟ್ವಿಟ್ಟರ್!

English summary

Indian Tech CEO Offers Jobs to Employees Fired by Twitter, Meta

Indian Tech CEO harsh jain Offers Jobs to thousands of Employees Fired by Twitter, Meta, spotify and more. says come back home.
Story first published: Thursday, November 10, 2022, 20:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X