For Quick Alerts
ALLOW NOTIFICATIONS  
For Daily Alerts

ಇಂಡಿಗೋ 15ನೇ ವಾರ್ಷಿಕೋತ್ಸವ: ವಿಮಾನ ಪ್ರಯಾಣ ದರ 915 ರೂ. ಆರಂಭ

|

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯು ತನ್ನ 15 ನೇ ವಾರ್ಷಿಕೋತ್ಸವ ಆಚರಣೆಯ ಪ್ರಯುಕ್ತ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಮೂರು ದಿನಗಳ ಆಫರ್ ಇದಾಗಿದ್ದು, ಆಗಸ್ಟ್ 4ರಿಂದ ಬಂಪರ್ ರಿಯಾಯಿತಿ ಪಡೆಯುವ ಅವಕಾಶ ಲಭಿಸಿದೆ.

 

ಇಂಡಿಗೋ ಗ್ರಾಹಕರಿಗೆ ಆರಂಭಿಕ ವಿಮಾನ ಟಿಕೆಟ್ ದರವು ಕೇವಲ 915 ರೂಪಾಯಿಗಳಿಂದ ಆರಂಭವಾಗಲಿದ್ದು, ದೇಶಿಯ ವಿಮಾನ ಪ್ರಯಾಣಕ್ಕೆ ಈ ರಿಯಾಯಿತಿ ಸಿಗಲಿದೆ ಎಂದು ಇಂಡಿಗೋ ಏರ್‌ಲೈನ್ಸ್‌ ಘೋಷಿಸಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನಗಳ ಅಂತರ್ ಸಂಪರ್ಕದ ಮೇಲೂ ಗ್ರಾಹಕರು ಆಫರ್ ಪಡೆಯುತ್ತಾರೆ.

''ಇಂಡಿಗೋಗೆ ಇದು ಒಂದು ಮಹತ್ವದ ಸಂದರ್ಭವಾಗಿದ್ದು, ವಿಮಾನಯಾನ ಸಂಸ್ಥೆಯು 15 ವರ್ಷಗಳನ್ನು ಪೂರೈಸಿದ ಆಚರಣೆ ನಡೆಸುತ್ತಿದೆ'' ಎಂದು ಇಂಡಿಗೋ ಸಿಇಒ ರೊನೊಜೊಯ್ ದತ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

''ನಮ್ಮ ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಸಾಂಕ್ರಾಮಿಕದ ಕೆಟ್ಟ ಸಮಯದಲ್ಲಿಯೂ ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಇಂಡಿಗೊ ತಂಡದ ಪರವಾಗಿ, ಈ ಪ್ರಯಾಣವನ್ನು ಯಶಸ್ವಿಯಾಗಿ ಮಾಡಿದ ನಮ್ಮ ಎಲ್ಲಾ ಗ್ರಾಹಕರು, ಪಾಲುದಾರರು ಮತ್ತು ವಾಯುಯಾನ ಸಹೋದರತ್ವದ ಸದಸ್ಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದು ರೊನೊಜೊಯ್ ದತ್ತಾ ಹೇಳಿದ್ದಾರೆ.

ಮೂರು ದಿನಗಳ ಅವಕಾಶ

ಮೂರು ದಿನಗಳ ಅವಕಾಶ

ಇಂಡಿಗೊ 15 ನೇ ವಾರ್ಷಿಕೋತ್ಸವದ ಮಾರಾಟದಲ್ಲಿ ನೀವು ವಿಮಾನ ಟಿಕೆಟ್‌ಗಳನ್ನು ರಿಯಾಯಿತಿಯಲ್ಲಿ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಆಗಸ್ಟ್ 4 ರಿಂದ ಆರಂಭವಾಗುವ ಮತ್ತು ಆಗಸ್ಟ್ 6 ರಂದು ಕೊನೆಗೊಳ್ಳುವ ಮೂರು ದಿನಗಳ ಅವಧಿಯಲ್ಲಿ ಟಿಕೆಟ್ ಖರೀದಿಸಬೇಕು.

ಪ್ರಯಾಣದ ದಿನಾಂಕಗಳು

ಪ್ರಯಾಣದ ದಿನಾಂಕಗಳು

ಇಂಡಿಗೊ 15 ನೇ ವಾರ್ಷಿಕೋತ್ಸವ ರಿಯಾಯಿತಿಯಲ್ಲಿ ವಿಮಾನ ಟಿಕೆಟ್ ಖರೀದಿಸಲು ಯೋಜಿಸುತ್ತಿರುವ ಪ್ರಯಾಣಿಕರು ಸೆಪ್ಟೆಂಬರ್ 1, 2021 ಮತ್ತು ಮಾರ್ಚ್ 26, 2022 ರ ನಡುವೆ ಪ್ರಯಾಣದ ದಿನಾಂಕಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಗದಿಪಡಿಸಿರುವ ದಿನಾಂಕದ ಮೊದಲು ಮತ್ತು ನಂತರ ದಿನಾಂಕಗಳಿಗೆ ಇಂಡಿಗೋ ವಿಶೇಷ ಆಫರ್ ಸಿಗುವುದಿಲ್ಲ

ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ
 

ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ

ಇಂಡಿಗೊ 15 ನೇ ವಾರ್ಷಿಕೋತ್ಸವದ ಸಮಯದಲ್ಲಿ, HSBC ಕ್ರೆಡಿಟ್ ಕಾರ್ಡ್ ಹೊಂದಿರುವವರು 750 ರೂ.ಗಳವರೆಗೆ ಅಂದರೆ, ಹೆಚ್ಚುವರಿ ಶೇಕಡಾ 5ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಆದಾಗ್ಯೂ, ಕ್ಯಾಶ್‌ಬ್ಯಾಕ್ ಅನ್ನು ಕನಿಷ್ಠ 3000 ರೂಪಾಯಿ ವಹಿವಾಟಿನಲ್ಲಿ ನೀಡಲಾಗುತ್ತದೆ.

ಇಂಡಿಗೊ 6E ಆಡ್-ಆನ್‌ಗಳಾದ ಫಾಸ್ಟ್ ಫಾರ್ವರ್ಡ್, 6 ಇ ಫ್ಲೆಕ್ಸ್ ಮತ್ತು 6 ಇ ಬ್ಯಾಗ್‌ಪೋರ್ಟ್‌ಗಳ ಮೇಲೆ ಈ ರಿಯಾಯಿತಿಗಳನ್ನು ನೀಡುತ್ತಿದೆ.

ಸತತ ಐದು ತ್ರೈಮಾಸಿಕ ನಷ್ಟ ಅನುಭವಿಸಿರುವ ಇಂಡಿಗೋ

ಸತತ ಐದು ತ್ರೈಮಾಸಿಕ ನಷ್ಟ ಅನುಭವಿಸಿರುವ ಇಂಡಿಗೋ

ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆಯಾದ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್, ಸತತ ಐದು ತ್ರೈಮಾಸಿಕ ನಷ್ಟವನ್ನು ವರದಿ ಮಾಡಿದೆ. ಕೋವಿಡ್-19 ಎರಡನೇ ಅಲೆಯಿಂದಾಗಿ ವಿಮಾನ ಹಾರಾಟ ಬಹುತೇಕ ಇಳಿಕೆಗೊಂಡಿರುವುದು ನಷ್ಟಕ್ಕೆ ಕಾರಣವಾಗಿದೆ.

2020-21ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ವಿಮಾನಯಾನ ಸಂಸ್ಥೆಯ ಒಟ್ಟು ನಿವ್ವಳ ನಷ್ಟವು 1,147.16 ಕೋಟಿಗೆ ಏರಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 620.14 ಕೋಟಿ ರೂ. ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,194.83 ಕೋಟಿ ನಷ್ಟವಾಗಿದೆ. ಆದರೆ ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇಂಡಿಗೊ 871 ಕೋಟಿ ರೂ. ಲಾಭ ಗಳಿಸಿದೆ.

ಮಾರ್ಚ್ ತ್ರೈಮಾಸಿಕದಲ್ಲಿ, ಇಂಡಿಗೊ ಆದಾಯವು ಶೇಕಡಾ 26.3ರಷ್ಟು ಇಳಿದು 6361.803 ಕೋಟಿ ರೂಪಾಯಿಗೆ ತಲುಪಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚಗಳು ಶೇ. 24.2ರಷ್ಟು ಇಳಿದು, 7,519.31 ಕೋಟಿಗೆ ತಲುಪಿದೆ. ಆದಾಗ್ಯೂ ವೆಚ್ಚಗಳು ಈ ಅವಧಿಯಲ್ಲಿ ಆದಾಯವನ್ನು ಮೀರಿವೆ.

2020-21ರ ಹಣಕಾಸು ವರ್ಷದಲ್ಲಿ ಇಂಡಿಗೊ ಒಟ್ಟು 5,806.43 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷದಲ್ಲಿ 233.68 ಕೋಟಿ ನಷ್ಟವಾಗಿದೆ. 2021 ರ ಹಣಕಾಸು ವರ್ಷದಲ್ಲಿ ಆದಾಯವು ಶೇ.58ರಷ್ಟು ಕುಸಿದು 15,677.6 ಕೋಟಿಗೆ ತಲುಪಿದೆ.

English summary

IndiGo announces special fares on its 15 year anniversary, starting from Rs 915: Know Details in kannada

IndiGo on Wednesday (August 4) celebrate its 15th anniversary with a three-day sale begging August 4. During the three days, IndiGO will be offer flight tickets at discounted prices as compared to usual flight fares
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X