ಇನ್ಫೋಸಿಸ್ ಲಾಭ 4845 ಕೋಟಿ, 12 ರು. ಡಿವಿಡೆಂಡ್, ಉದ್ಯೋಗಿಗಳಿಗೆ ಬಡ್ತಿ ಘೋಷಣೆ

ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವೆ ಒದಗಿಸುವ, ಬೆಂಗಳೂರು ಮೂಲದ ಇನ್ಫೋಸಿಸ್ ಜುಲೈನಿಂದ ಸೆಪ್ಟೆಂಬರ್ 2020ರ ಎರಡನೇ ತ್ರೈಮಾಸಿಕದಲ್ಲಿ 4845 ಕೋಟಿ ರುಪಾಯಿ ಲಾಭ ಗಳಿಸಿದೆ. ಜೂನ್ ಕೊನೆಗೆ ಮೊದಲ ತ್ರೈಮಾಸಿಕದಲ್ಲಿ 4233 ಕೋಟಿ ರುಪಾಯಿ ಲಾಭ ಪಡೆದಿತ್ತು. ಕಾರ್ಯಚಟುವಟಿಕೆ ಮೂಲಕ ಬಂದ ಒಟ್ಟು ಆದಾಯ 24,570 ಕೋಟಿ ರುಪಾಯಿ ಇದೆ.

ಪ್ರತಿ ಷೇರಿಗೆ 12 ರುಪಾಯಿಯಂತೆ ಮಧ್ಯಂತರ ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಅಕ್ಟೋಬರ್ 26, 2020 ರೆಕಾರ್ಡ್ ದಿನಾಂಕ ನಿಗದಿ ಮಾಡಲಾಗಿದೆ. ಇನ್ನು ನವೆಂಬರ್ 11, 2020ಕ್ಕೆ ಡಿವಿಡೆಂಡ್ ಪಾವತಿ ದಿನಾಂಕ ಎಂದು ಘೋಷಿಸಲಾಗಿದೆ. ಇನ್ನು ವೇತನ ಹೆಚ್ಚಳ ಮತ್ತು ಬಡ್ತಿಯನ್ನು ಎಲ್ಲ ಹಂತದಲ್ಲೂ ಜನವರಿ 1ರಿಂದ ಅನುಷ್ಠಾನಕ್ಕೆ ತರುವುದಾಗಿ ತಿಳಿಸಲಾಗಿದೆ.

Infosys ಲಾಭ 4845 ಕೋಟಿ, 12 ರು. ಡಿವಿಡೆಂಡ್, ಉದ್ಯೋಗಿಗಳಿಗೆ ಬಡ್ತಿ

ಶೇಕಡಾ ನೂರರಷ್ಟು ವೇರಿಯಬಲ್ ಪೇ ಮತ್ತು ಎರಡನೇ ತ್ರೈಮಾಸಿಕಕ್ಕೆ ವಿಶೇಷ ಪ್ರೋತ್ಸಾಧನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 2020ರ ಸೆಪ್ಟೆಂಬರ್ ಕೊನೆ ಹೊತ್ತಿಗೆ ಇನ್ಫೋಸಿಸ್ ನಲ್ಲಿ 2.40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಎರಡನೇ ತ್ರೈಮಾಸಿಕ ಫಲಿತಾಂಶ ಘೋಷಣೆ ಮಾಡುವ ವೇಳೆ ಈ ವಿಷಯ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+