For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಷೇರುದಾರರಿಗೆ ಬಂಪರ್ ಅವಕಾಶ: ಕೆಲವೇ ದಿನಗಳಲ್ಲಿ ಉತ್ತಮ ಲಾಭ!

|

ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ ಷೇರು ಹೂಡಿಕೆದಾರರಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಕೆಲವೇ ದಿನಗಳಲ್ಲಿ ನೀವು ಶೇಕಡಾ 25ರಷ್ಟು ಬಲವಾದ ಲಾಭವನ್ನು ಪಡೆಯುವ ಸುವರ್ಣಾವಕಾಶ ಒದಗಿಸಿದೆ.

ಇನ್ಫೋಸಿಸ್ ಆಡಳಿತ ಮಂಡಳಿಯು ಇತ್ತೀಚೆಗೆ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಮೊದಲು, ಒಂದು ಪ್ರಮುಖ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ, ಪ್ರತಿ ಷೇರಿಗೆ 1,750 ರೂ.ಗಳಂತೆ ಮರುಖರೀದಿ ಮಾಡಲು ಮಂಡಳಿ ಅನುಮೋದನೆ ನೀಡಿದೆ.

ಷೇರು ಮರುಖರೀದಿ ಹೇಗೆ?

ಷೇರು ಮರುಖರೀದಿ ಹೇಗೆ?

ಯಾವುದೇ ಕಂಪನಿಯು ತನ್ನ ಸ್ವಂತ ಷೇರುಗಳನ್ನು, ಷೇರುದಾರರಿಂದ ಖರೀದಿಸಿದಾಗ, ಅದನ್ನು ಬೈಬ್ಯಾಕ್ ಎಂದು ಕರೆಯಲಾಗುತ್ತದೆ. ಕಂಪನಿಯು ಐಪಿಒನಲ್ಲಿ ಷೇರುಗಳನ್ನು ಮಾರುತ್ತಿರುವುದರಿಂದ ಇದನ್ನು ಐಪಿಒನ ಹಿಮ್ಮುಖವೆಂದು ಪರಿಗಣಿಸಲಾಗುತ್ತದೆ. ಮರು ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಷೇರುಗಳು ಅಸ್ತಿತ್ವದಲ್ಲಿರುವುದಿಲ್ಲ.

ಕಂಪನಿಗಳು ಟೆಂಡರ್ ಕೊಡುಗೆಗಳನ್ನು ಅಥವಾ ಬೈಬ್ಯಾಕ್‌ಗಾಗಿ ಮುಕ್ತ ಮಾರುಕಟ್ಟೆಗಳನ್ನು ಆರಿಸಿಕೊಳ್ಳುತ್ತವೆ. ಯಾವುದೇ ಕಂಪನಿಯು ಹಲವಾರು ಕಾರಣಗಳಿಗಾಗಿ ಷೇರು ಮರುಖರೀದಿಗೆ ಮುಂದಾಗುತ್ತವೆ.

 

ಷೇರು ಮರುಖರೀದಿ ಏಕೆ?

ಷೇರು ಮರುಖರೀದಿ ಏಕೆ?

ಷೇರು ಮರುಖರೀದಿಗೆ ಪ್ರಮುಖ ಕಾರಣ ಕಂಪನಿಯ ಬ್ಯಾಲೆನ್ಸ್ ಶೀಟ್‌ನಲ್ಲಿರುವ ಹೆಚ್ಚುವರಿ ಹಣ. ಕಂಪನಿಯೊಂದಿಗೆ ಹೆಚ್ಚು ಹಣವನ್ನು ಹೊಂದಿರುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಕಂಪನಿಯು ತನ್ನ ಹೆಚ್ಚುವರಿ ಹಣವನ್ನು ಷೇರು ಮರುಖರೀದಿಗಳ ಮೂಲಕ ಬಳಸುತ್ತದೆ. ಅಲ್ಲದೆ, ಕಂಪನಿಯು ತನ್ನ ಷೇರಿನ ಬೆಲೆ ಕಡಿಮೆ ಎಂದು ಭಾವಿಸುತ್ತದೆ, ಅಂದರೆ ಕಡಿಮೆ ಮೌಲ್ಯಯುತವಾಗಿದೆ, ನಂತರ ಅದನ್ನು ಮರುಖರೀದಿಯ ಮೂಲಕ ಹೆಚ್ಚಿಸಲು ಪ್ರಯತ್ನಿಸುತ್ತದೆ.

ಇನ್ಫೋಸಿಸ್ ಷೇರುಗಳ ಮೌಲ್ಯ ದ್ವಿಗುಣಗೊಂಡಿದೆ
 

ಇನ್ಫೋಸಿಸ್ ಷೇರುಗಳ ಮೌಲ್ಯ ದ್ವಿಗುಣಗೊಂಡಿದೆ

ಹೌದು, ಇನ್ಪೋಸಿಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಟ್ಟಿವೆ. 13 ಏಪ್ರಿಲ್ 2020 ರಂದು ಅದು 637.1 ರೂ.ಗಳಾಗಿದ್ದರೆ, ನಿನ್ನೆ ಅಂದರೆ 20 ಏಪ್ರಿಲ್ 2021 ರಂದು ಇನ್ಫೋಸಿಸ್ ಷೇರುಗಳು 1398.6 ರೂ.ಗಳಷ್ಟಿತ್ತು. ಆದರೆ ಈಗ ಅದೇ ಹೂಡಿಕೆದಾರರು ಒಂದು ವರ್ಷದಲ್ಲಿ ಶೇಕಡಾ 105.5 ರಷ್ಟು ಲಾಭವನ್ನು ಪಡೆದರು. ಇನ್ಫೋಸಿಸ್ ಒಂದು ವರ್ಷದಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ.

ಕಳೆದ 6 ತಿಂಗಳಿನಲ್ಲಿ ಉತ್ತಮ ಲಾಭ

ಕಳೆದ 6 ತಿಂಗಳಿನಲ್ಲಿ ಉತ್ತಮ ಲಾಭ

ಇನ್ಫೋಸಿಸ್ ಷೇರು ಕಳೆದ 6 ತಿಂಗಳಲ್ಲಿ ಉತ್ತಮ ಲಾಭವನ್ನು ನೀಡಿದೆ. ಇದು ಪ್ರಸ್ತುತ ಎನ್‌ಎಸ್‌ಇನಲ್ಲಿ 1402 ರೂ. ನಷ್ಟಿದ್ದು, ಇನ್ಫೋಸಿಸ್ ಹೂಡಿಕೆದಾರರು ಕಳೆದ 6 ತಿಂಗಳಲ್ಲಿ 20.77% ಆದಾಯವನ್ನು ಪಡೆದಿದ್ದಾರೆ. ಕಂಪನಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳ 5,95,896.03 ಕೋಟಿ ರೂ. ನಷ್ಟಿದೆ

ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಕುಸಿತ

ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಕುಸಿತ

2020-21ರ ಹಣಕಾಸು ವರ್ಷದಲ್ಲಿ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು 5076 ಕೋಟಿ ರೂ. ಲಾಭಗಳಿಸಿದೆ. ಆದರೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಇದರ ಲಾಭವು ಶೇಕಡಾ 2.3 ರಷ್ಟು ಕುಸಿಯಿತು. ಆದರೆ, ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ಉತ್ತಮ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,321 ಕೋಟಿ ರು ಗಳಿಸಿತ್ತು. ಮಾರ್ಚ್ 31, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಯ ನಿವ್ವಳ ಆದಾಯ ಶೇ 13.1ರಷ್ಟು ಏರಿಕೆ ಕಂಡಿದ್ದು, 19,351 ಕೋಟಿ ರು ಗಳಿಸಿದೆ.

English summary

Infosys Approves Share Buyback Rs 1750 Per Share: 25% Earning Opportunity

Infosys on April 14 approved share buyback at Rs 1,750 per share. Great opportunity for Investors to get 25% income in few days
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X