For Quick Alerts
ALLOW NOTIFICATIONS  
For Daily Alerts

ಇನ್ಫಿ ನಾರಾಯಣಮೂರ್ತಿ ಅಳಿಯ ಯು.ಕೆ. ಹೊಸ ಹಣಕಾಸು ಸಚಿವ

|

ಇನ್ಫೋಸಿಸ್ ನ ಸಹ ಸಂಸ್ಥಾಪಕ ನಾರಾಯಣಮೂರ್ತಿ- ಸುಧಾಮೂರ್ತಿ ದಂಪತಿಯ ಅಳಿಯ- ಭಾರತೀಯ ಮೂಲದ ರಾಜಕಾರಣಿ ರಿಷಿ ಸುನಕ್ ಯುನೈಟೆಡ್ ಕಿಂಗ್ ಡಮ್ ನ ಹೊಸ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ. ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರು ಗುರುವಾರ ಸಂಪುಟ ಪುನಾರಚನೆ ಮಾಡಿದ ಸಂದರ್ಭದಲ್ಲಿ ಈ ನೇಮಕ ಮಾಡಿದ್ದಾರೆ.

 

ಈ ಹಿಂದೆ, ಕಳೆದ ಡಿಸೆಂಬರ್ ನಲ್ಲಿ ಬೋರಿಸ್ ಜಾನ್ಸನ್ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಿಸಿದ ನಂತರ ಪಾಕಿಸ್ತಾನಿ ಮೂಲದ ಸಾಜಿದ್ ಜಾವಿದ್ ಚಾನ್ಸೆಲರ್ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು. ಆ ಸ್ಥಾನಕ್ಕೆ ಸುನಕ್ ನೇಮಕ ಆಗಿದ್ದಾರೆ. ಈ ವರೆಗೆ ಜಾವಿದ್ ಜೂನಿಯರ್ ಆಗಿ, ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು ಸುನಕ್.

 

ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ಇನ್ಫಿ ನಾರಾಯಣಮೂರ್ತಿ; ಫೋಟೋ ವೈರಲ್ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ಇನ್ಫಿ ನಾರಾಯಣಮೂರ್ತಿ; ಫೋಟೋ ವೈರಲ್

39 ವರ್ಷದ ರಿಷಿ ಸುನಕ್ ಅವರು ನಂಬರ್ 11, ಡೌನಿಂಗ್ ಸ್ಟ್ರೀಟ್ ಗೆ ವಾಸ್ತವ್ಯ ಬದಲಿಸಲಿದ್ದಾರೆ. ಪ್ರಧಾನಿ ಕಚೇರಿ ಬಳಿಯೇ ಈ ವಾಸ್ತವ್ಯ ಇದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಪ್ರಧಾನಮಂತ್ರಿ ಹುದ್ದೆಯ ನಂತರ ಸರ್ಕಾರದಲ್ಲಿ ಬಹು ಮುಖ್ಯವಾದದ್ದೆಂದರೆ ವಿತ್ತ ಸಚಿವರ ಹುದ್ದೆ.

ಇನ್ಫಿ ನಾರಾಯಣಮೂರ್ತಿ ಅಳಿಯ ಯು.ಕೆ. ಹೊಸ ಹಣಕಾಸು ಸಚಿವ

ಯಾರ್ಕ್ ಷೈರ್ ನ ರಿಚ್ಮಂಡ್ ಗೆ ರಿಷಿ ಸಂಸದರಾಗಿದ್ದಾರೆ. ನಾರಾಯಣಮೂರ್ತಿ ಅವರು ಮಗಳು ಅಕ್ಷತಾರನ್ನು ರಿಷಿ ಮದುವೆಯಾಗಿದ್ದಾರೆ. ಮೊದಲ ಬಾರಿಗೆ ಅವರು 2015ರಲ್ಲಿ ಯು.ಕೆ. ಸಂಸತ್ ಪ್ರವೇಶಿಸಿದ್ದರು. ರಿಷಿ ಅವರ ತಾಯಿ ಫಾರ್ಮಾಸಿಸ್ಟ್. ತಂದೆ ವೈದ್ಯರು.

English summary

Infosys Narayana Murthy Son In Law Appointed As Finance Minister Of UK

Rishi Sunak, son in law of Infosys co founder Narayana Murthy, appointed as UK's new finance minister.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X