For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್‌ಗೆ 5195 ಕೋಟಿ ರೂ. ಲಾಭ, 27,896 ಕೋಟಿ ರೂ. ಆದಾಯ

|

ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ಗೆ ಜೂನ್ 2021ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 5,195 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ.

ಇನ್ಫೋಸಿಸ್‌ನ ನಿವ್ವಳ ಲಾಭವು ಅಂದಾಜಿಗಿಂತ ಏರಿಕೆಗೊಂಡಿದ್ದು, ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡಾ 2.3ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಕಂಪನಿಯು ತನ್ನ ಪೂರ್ಣ ವರ್ಷದ ಆದಾಯದ ಬೆಳವಣಿಗೆಯ ಮುನ್ಸೂಚನೆಯನ್ನು ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ ಶೇ. 14 ರಿಂದ 16ಕ್ಕೆ ಹೆಚ್ಚಿಸಿದೆ.

ಇನ್ಫೋಸಿಸ್‌ಗೆ 5195 ಕೋಟಿ ರೂ. ಲಾಭ, 27,896 ಕೋಟಿ ರೂ. ಆದಾಯ

ಇನ್ನು ಏಕೀಕೃತ ಆದಾಯವು ತ್ರೈಮಾಸಿಕದಲ್ಲಿ ಶೇಕಡಾ 6ರಷ್ಟು ಏರಿಕೆಗೊಂಡು 27,896 ಕೋಟಿ ರೂ.ಗೆ ತಲುಪಿದೆ. ಡಾಲರ್ ಪರಿಭಾಷೆಯಲ್ಲಿ ಟಾಪ್ಲೈನ್ ಶೇಕಡಾ 4.7ರಷ್ಟು ಏರಿಕೆಯಾಗಿ ಅನುಕ್ರಮವಾಗಿ 3,782 ದಶಲಕ್ಷ ಡಾಲರ್‌ಗೆ ತಲುಪಿದೆ.

ಸಿಎನ್‌ಬಿಸಿ-ಟಿವಿ 18 ಸಮೀಕ್ಷೆಯ ಅಂದಾಜುಗಳ ಪ್ರಕಾರ 27,718 ಕೋಟಿ ಏಕೀಕೃತ ಆದಾಯ ಮತ್ತು 3,758 ಮಿಲಿಯನ್ ಡಾಲರ್ ಸ್ಥಿರ ಕರೆನ್ಸಿಯಲ್ಲಿನ ಆದಾಯದ ಬೆಳವಣಿಗೆಯನ್ನು ಗುರುತಿಸಲಾಗಿತ್ತು. ಆದರೆ ಆದಾಯವು ಅಂದಾಜಿಗಿಂತ ಶೇ. 4.8 ಏರಿಕೆಯಾಗಿದೆ.

ಡಾಲರ್ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 21.2ರಷ್ಟು ಮತ್ತು ಸ್ಥಿರ ಕರೆನ್ಸಿ ಆದಾಯವು 2021-22ರ ಮೊದಲ ತ್ರೈಮಾಸಿಕದಲ್ಲಿ ಶೇ 16.9 ರಷ್ಟಿದೆ.

English summary

Infosys Q1 Report: Profit Rises 2.3 Percent To Rs 5195 Crore

Country's second-largest software services provider Infosys reported a consolidated net profit of Rs 5,195 crore for the quarter ended June 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X