For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ 4ನೇ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭ ಕುಸಿತ

|

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ಇಂದು (ಏ. 14) ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಅದರಂತೆ ನಿವ್ವಳ ಲಾಭ(ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ)ದಲ್ಲಿ ಶೇ 2.3ರಷ್ಟು ಕುಸಿತಗೊಂಡು 5,076 ಕೋಟಿ ರು ಮುಟ್ಟಿದೆ. ಮಾರುಕಟ್ಟೆ ತಜ್ಞರು 5,170.2 ಕೋಟಿ ರು ನಿರೀಕ್ಷೆ ಹೊಂದಿದ್ದರು.

 

ಆದರೆ, ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ಉತ್ತಮ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,321 ಕೋಟಿ ರು ಗಳಿಸಿತ್ತು.

 

ಮಾರ್ಚ್ 31, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಯ ನಿವ್ವಳ ಆದಾಯ ಶೇ 13.1ರಷ್ಟು ಏರಿಕೆ ಕಂಡಿದ್ದು, 19,351 ಕೋಟಿ ರು ಗಳಿಸಿದೆ.

ಇನ್ಫೋಸಿಸ್ 4ನೇ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭ ಕುಸಿತ

2021ರ ಆರ್ಥಿಕ ವರ್ಷದಲ್ಲಿ 1,00,000 ಕೋಟಿ ರು ಆದಾಯ ದಾಖಲಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.

ಪ್ರತಿ ಷೇರಿಗೆ ಗರಿಷ್ಠ 1,750 ರು ನಂತೆ 9,200 ಕೋಟಿ ಮೌಲ್ಯದ ಷೇರು ಮರು ಖರೀದಿಯನ್ನು ಇನ್ಫೋಸಿಸ್ ಘೋಷಿಸಿದೆ. ಜೊತೆಗೆ ಪ್ರತಿ ಷೇರಿಗೆ 15ರುನಂತೆ 6,400 ಕೋಟಿ ರು ಡಿವಿಡೆಂಡ್ ಘೋಷಿಸಿದೆ.

English summary

Infosys Q4 profit falls to Rs 5,076 crore

Infosys, the country's second largest IT services company, has reported a 2.3 percent sequential decline in consolidated profit at Rs 5,076 crore for the quarter ended March 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X