For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳ ಏಣಿ ಶ್ರೇಣಿ: ಮಹತ್ವದ ಬದಲಾವಣೆಗೆ ಮುಂದಾದ ಇನ್ಪೋಸಿಸ್

|

ಬೆಂಗಳೂರು, ಜೂನ್ 31: ಸಾಪ್ಟವೇರ್ ದೈತ್ಯ ಇನ್ಪೋಸಿಸ್ ಸಂಸ್ಥೆ ತನ್ನ ಕೆಲಸದ ಸ್ಥಳಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಇನ್ಪೋಸಿಸ್ ನಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೇಡರ್‌ಗಳನ್ನು ಪುನರ್‌ರಚಿಸಲಾಗುತ್ತಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ತ್ವರಿತ ನಿರ್ಣಯ ತೆಗೆದುಕೊಳ್ಳುವಿಕೆ ಹಾಗೂ ಕೇಡರ್‌ಗಳಲ್ಲಿನ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶ ಇದು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತ

ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತ

ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತದ ಸಿಬ್ಬಂದಿಗಳನ್ನು ಪುನರ್‌ರಚಿಸಲಾಗುತ್ತಿದೆ. ಡೆಲಿವರಿ ಮ್ಯಾನೇಜರ್‌ಗಳು, ಇಂಡಸ್ಟ್ರೀ ಪ್ರಿನ್ಸಿಪಲ್, ಎವಿಪಿ, ವಿಪಿ ಮತ್ತು ಎಸ್‌ವಿಪಿಗಳು ಇದರಲ್ಲಿ ಸೇರಿದ್ದಾರೆ.

1300 ಸಿಬ್ಬಂದಿಯ ಮೇಲೆ ಪರಿಣಾಮ

1300 ಸಿಬ್ಬಂದಿಯ ಮೇಲೆ ಪರಿಣಾಮ

ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತದ ಸಿಬ್ಬಂದಿ ಇನ್ಪೋಸಿಸ್‌ನಲ್ಲಿ ಸುಮಾರು ೩೦ ಸಾವಿರ ಜನ ಇದ್ದಾರೆ. (ಜೆಲೆ್ 6, 7, 8) ಇದರಲ್ಲಿ 10 ರಿಂದ 15 ರಷ್ಟು ಸಿಬ್ಬಂದಿಯನ್ನು ವಿವಿಧ ಶ್ರೇಣಿಗಳಲ್ಲಿ ಪುನರ್‌ ವಿಂಗಡಿಸಲಾಗುತ್ತದೆ. ಇದರಿಂದ 1300 ಸಿಬ್ಬಂದಿಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಈಗಿರುವ ಶ್ರೇಣಿಗಳಲ್ಲಿ ಅದಲು ಬದಲಾಗಲಿವೆ.

ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿಲ್ಲ

ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿಲ್ಲ

ಇನ್ಪೋಸಿಸ್ ತನ್ನ ಕೆಲಸದ ಸ್ಥಳದಲ್ಲಿ ತ್ವರಿತ ನಿರ್ಣಯ ತೆಗೆದುಕೊಳ್ಳುವಿಕೆಯ ಸಲುವಾಗಿ ಈ ಬದಲಾವಣೆಗೆ ಮುಂದಾಗಿದೆ. ಕೋವಿಡ್‌ನಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ಇನ್ಪೋಸಿಸ್ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿಲ್ಲ ಎಂದು ವರದಿ ಹೇಳಿದೆ.

ಇನ್ಪೋಸಿಸ್ ಗೆ ಹೊಸ ಹುರುಪು

ಇನ್ಪೋಸಿಸ್ ಗೆ ಹೊಸ ಹುರುಪು

ಕೆಲಸದ ಶ್ರೇಣಿಯಲ್ಲಿ ಕೆಲವು ಹೆಚ್ಚು ಎನ್ನುವಂತಹ ಅಡೆತಡೆಗಳು ಕಂಡು ಬಂದಿರುವುದರಿಂದ ಈ ಬದಲಾವಣೆಗೆ ಇನ್ಪೋಸಿಸ್ ಮುಂದಾಗಿದೆ. ಒಟ್ಟಿನಲ್ಲಿ ಸಿಬ್ಬಂದಿಯ ಕೆಲಸದ ಶ್ರೇಣಿಯಲ್ಲಿನ ಪುನರ್‌ರಚನೆ ಇನ್ಪೋಸಿಸ್ ಗೆ ಹೊಸ ಹುರುಪು ನೀಡುವಂತಿದೆ.

English summary

Infosys Triming Its Workforce At High Level

Infosys Triming Its Workforce At High Level. This Changes Impact On Around 1300 Employee.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X