For Quick Alerts
ALLOW NOTIFICATIONS  
For Daily Alerts

1 ಗಂಟೆ ಷೇರು ವಹಿವಾಟಿನಲ್ಲಿ ಈ ಹೂಡಿಕೆದಾರರ ಸಂಪತ್ತಿಗೆ 180 ಕೋಟಿ ಸೇರ್ಪಡೆ

|

ಟೈಟಾನ್ ಕಂಪೆನಿಯಿಂದ ಸೋಮವಾರ ಬೆಳಗ್ಗೆ ಪ್ರತಿ ಷೇರಿಗೆ 4 ರುಪಾಯಿ ಡಿವಿಡೆಂಡ್ ಘೋಷಣೆ ಮಾಡಿದ ಮೇಲೆ ಷೇರಿನ ಬೆಲೆ 4.15% ಹೆಚ್ಚಳವಾಯಿತು. ವಾಚ್ ಹಾಗೂ ಆಭರಣ ತಯಾರಿಕಾ ಕಂಪೆನಿ ಟೈಟಾನ್ ಮಾರ್ಚ್ ನಲ್ಲಿ ತಲುಪಿದ ಕನಿಷ್ಠ ಮಟ್ಟದಿಂದ 33% ಏರಿಕೆ ಕಂಡಿದೆ.

 

ಸೋಮವಾರ ಬೆಳಗ್ಗೆ ಪ್ರತಿ ಷೇರಿನ ಬೆಲೆ 1089 ರುಪಾಯಿಗೆ ಏರಿಕೆ ಆದಾಗ ಆ ಕಂಪೆನಿಯ 3.93 ಕೋಟಿ ಷೇರು ಹೊಂದಿರುವ ರಾಕೇಶ್ ಜುಂಜುನ್ ವಾಲಾ ಅವರಿಗೆ ಒಂದು ಗಂಟೆ ಅವಧಿಯಲ್ಲಿ 180.8 ಕೋಟಿ ರುಪಾಯಿ ಲಾಭ ಆಗಿದೆ. ದಶಕದಿಂದ ರಾಕೇಶ್ ಜುಂಜುನ್ ವಾಲಾ ಟೈಟಾನ್ ಕಂಪೆನಿ ಹೂಡಿಕೆದಾರರಾಗಿದ್ದಾರೆ. ಈಗಲೂ ಜುಂಜುನ್ ವಾಲ್ ಅವರ ಅಚ್ಚುಮೆಚ್ಚಿನ ಷೇರು ಇದು.

 

ಟೈಟಾನ್ ಕಂಪೆನಿಯ 1.03 ಕೋಟಿ ಷೇರು ಮಾರಿದ ಪ್ರಮುಖ ಹೂಡಿಕೆದಾರರುಟೈಟಾನ್ ಕಂಪೆನಿಯ 1.03 ಕೋಟಿ ಷೇರು ಮಾರಿದ ಪ್ರಮುಖ ಹೂಡಿಕೆದಾರರು

ಟೈಟಾನ್ ಕಂಪೆನಿ ಷೇರಿನ ಬೆಲೆ ಶುಕ್ರವಾರ ದಿನಾಂತ್ಯಕ್ಕೆ 1043 ರುಪಾಯಿ ಇತ್ತು. ಏಪ್ರಿಲ್ ನಿಂದ ಜೂನ್ ಕೊನೆಯ ತ್ರೈಮಾಸಿಕಕ್ಕೆ ರಾಕೇಶ್ ಜುಂಜುನ್ ವಾಲಾ ಬಳಿ ಟೈಟಾನ್ ಕಂಪೆನಿಯ 3,93,10,395 ಷೇರುಗಳು ಇದ್ದವು. ಕಂಪೆನಿಯಲ್ಲಿ ಅವರು ಮಾಡಿರುವ ಒಟ್ಟು ಹೂಡಿಕೆಯ ಮೌಲ್ಯ ಶುಕ್ರವಾರದ ಲೆಕ್ಕಕ್ಕೆ 4100 ಕೋಟಿ ರುಪಾಯಿ ಇತ್ತು.

1 ಗಂಟೆ ವಹಿವಾಟಿನಲ್ಲಿ ಈ ಹೂಡಿಕೆದಾರರ ಸಂಪತ್ತಿಗೆ 180 ಕೋಟಿ ಸೇರ್ಪಡೆ

ಸೋಮವಾರದಂದು ವಹಿವಾಟಿನ ಸೆಷನ್ ಆರಂಭವಾಗುತ್ತಿದ್ದಂತೆ ಟೈಟಾನ್ ಷೇರಿನ ಬೆಲೆ ಎತ್ತರಕ್ಕೆ ಏರಿತು. ರಾಕೇಶ್ ಜುಂಜುನ್ ವಾಲಾ ಹೂಡಿಕೆ ಮಾಡಿರುವ ಮೌಲ್ಯ 4,280 ಕೋಟಿ ರುಪಾಯಿಗೆ ತಲುಪಿತು. 180.8 ಕೋಟಿ ರುಪಾಯಿ ಹೆಚ್ಚಳ ಮಾಡಿತು. ಜುಂಜುನ್ ವಾಲಾ ಅವರ ಜತೆ ಪತ್ನಿ ರೇಖಾ ಬಳಿ ಟೈಟಾನ್ ಕಂಪೆನಿಯ 97,40,575 ಷೇರುಗಳಿವೆ. ಅವರ ಸಂಪತ್ತು 44.8 ಕೋಟಿ ರುಪಾಯಿ ಹೆಚ್ಚಳ ಆಗಿದೆ.

ಒಟ್ಟಾರೆಯಾಗಿ ಜುಂಜುನ್ ವಾಲಾ ಬಳಿ ಟೈಟಾನ್ ಕಂಪೆನಿಯ 4.90 ಕೋಟಿ ಷೇರುಗಳು ಅಥವಾ ಷೇರು ಬಂಡವಾಳದ 5.53% ಪಾಲನ್ನು ಹೊಂದಿದ್ದಾರೆ. ಕಂಪೆನಿಯಲ್ಲಿ 5,300 ಕೋಟಿಗೂ ಹೆಚ್ಚು ಹೂಡಿಕೆ ಜುಂಜುನ್ ವಾಲಾ ಮತ್ತು ಅವರ ಪತ್ನಿಯದು ಇದೆ.

English summary

Investor Rakesh Jhunjunwala Wealth Increased By 180 Crore Within One Hour

Investor Rakesh Jhunjunwala who has more than 3 percent stake in Titan Company, his wealth increased by 180.8 crore in one hour of Monday morning trading.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X