For Quick Alerts
ALLOW NOTIFICATIONS  
For Daily Alerts

ಒಂದು ಗಂಟೆ ಅವಧಿಯಲ್ಲಿ ಕರಗಿತು ಹೂಡಿಕೆದಾರರ 3.58 ಲಕ್ಷ ಕೋಟಿ ಸಂಪತ್ತು

|

ಸೆನ್ಸೆಕ್ಸ್, ನಿಫ್ಟಿ 50 ಮಂಗಳವಾರ (ಸೆಪ್ಟೆಂಬರ್ 9, 2020) ಬೆಳಗ್ಗೆ ಸೆಷನ್ ನಲ್ಲಿ 'ಕರಡಿ' ಹಿಡಿತಕ್ಕೆ ಸಿಲುಕಿಕೊಂಡಿತು. ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ರುಪಾಯಿ ಕರಗಿತು. ಸೆನ್ಸೆಕ್ಸ್ ಸೂಚ್ಯಂಕ ಆರಂಭದಲ್ಲಿ 166ಕ್ಕೂ ಹೆಚ್ಚು ಪಾಯಿಂಟ್ ಗಳ ಏರಿಕೆ ಕಂಡಿತ್ತು. ಆ ನಂತರ 38,000 ಪಾಯಿಂಟ್ ನಿಂದ ಕೆಳಗೆ ಇಳಿಯಿತು.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಈಕ್ವಿಟಿ ಮಾರ್ಕೆಟ್ ನಲ್ಲಿ ಭಾರೀ ಮಾರಾಟ ಒತ್ತಡ ಕಂಡುಬಂತು. ಬಿಎಸ್ ಇ ಸೂಚ್ಯಂಕದಲ್ಲಿ ಲಿಸ್ಟ್ ಆಗಿರುವ ಮಾರುಕಟ್ಟೆ ಬಂಡವಾಳವು ಸೋಮವಾರದ ಕೊನೆಗೆ 154.76 ಲಕ್ಷ ಕೋಟಿ ರುಪಾಯಿ ಇತ್ತು. ಮಂಗಳವಾರದ ಬೆಳಗ್ಗೆ ಮಾರುಕಟ್ಟೆ ಬಂಡವಾಳ 151.18 ಲಕ್ಷ ಕೋಟಿಗೆ ಇಳಿದು, ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ಕರಗಿತು.

ಒಂದು ಗಂಟೆ ಅವಧಿಯಲ್ಲಿ ಕರಗಿತು ಹೂಡಿಕೆದಾರರ 3.58 ಲಕ್ಷ ಕೋಟಿ ಸಂಪತ್ತು

ಬಿಎಸ್ ಇ ಸೂಚ್ಯಂಕದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್ ಹಾಗೂ ಐಸಿಐಸಿಐ ಬ್ಯಾಂಕ್ ಷೇರು ಮಾತ್ರ ಏರಿಕೆ ಕಂಡಿದೆ. ಜಾಗತಿಕ ಮಟ್ಟದ ಸುದ್ದಿಯಿಂದ ದೇಶೀ ಷೇರು ಮಾರ್ಕೆಟ್ ಮೇಲೆ ಪರಿಣಾಮ ಆಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಮಾರುಕಟ್ಟೆಯಲ್ಲಿ ಏರಿಳಿತ ಪ್ರಮಾಣ ವಿಪರೀತ ಹೆಚ್ಚಾಗಿರುವುದರಿಂದ ಹೂಡಿಕೆದಾರರಲ್ಲಿ ಭಾರೀ ಆತಂಕ ವ್ಯಕ್ತವಾಗಿದೆ.

English summary

Investors Wealth More Than 3.58 Lakh Crore Eroded In Share Market In Less Than An Hour

Stock market news: Investors wealth of 3.58 lakh crore rupees eroded in share market on September 22, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X