For Quick Alerts
ALLOW NOTIFICATIONS  
For Daily Alerts

30 ದಿನಗಳು ನೀರಿನೊಳಗಿದ್ದರೂ ಏನು ಆಗ್ಲಿಲ್ಲ ಐಫೋನ್ 11 ಪ್ರೊ!

|

ಐಫೋನ್ 11 ಸರಣಿಯು ನೀರಿನೊಳಗೆ ಬಿದ್ದರೂ ಏನಾಗುವುದಿಲ್ಲ, ನೀರು ನಿರೋಧಕವಾಗಿದೆ ಎಂದು ಆ್ಯಪಲ್ ಕಂಪನಿ ಹೇಳಿದಾಗ ಅನೇಕರು ನಂಬಿದ್ದರು. ಆದರೆ 30 ದಿನಗಳವರೆಗೆ ನೀರಿನ ಒಳಗಿದ್ದರೂ ಅದು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಅಂದರೆ ನಂಬಲು ಕಷ್ಟಸಾಧ್ಯ.

50 ವರ್ಷದ ಕೆನಡಾದ ಮಹಿಳೆ ಎಂಜಿ ಕ್ಯಾರಿಯರ್ ತನ್ನ ಜನ್ಮದಿನವನ್ನು ಆಚರಿಸಲು ಮೀನುಗಾರಿಕೆಗೆ ತೆರಳಿದ್ದಳು. ಕೆನಡಾದ ಸಾಸ್ಕಾಚೆವನ್‌ನ ವಾಸ್ಕ್ವೆಜ್ ಸರೋವರದಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ತನ್ನ ಐಫೋನ್ 11 ಅನ್ನು ಸರೋವರದಲ್ಲಿ ಬೀಳಿಸಿಕೊಂಡಳು. ಬಲವಾದ ಗಾಳಿಯಿಂದಾಗಿ ತನ್ನ ಫೋನ್ ಅನ್ನು ಕೈ ಜಾರಿ ನೀರಿಗೆ ಬೀಳಿಸಿಕೊಂಡು ನಿರಾಸೆಯಿಂದ ಮನೆಗೆ ಹಿಂದಿರುಗಿದ್ದಳು.

30 ದಿನಗಳು ನೀರಿನೊಳಗಿದ್ದರೂ ಏನು ಆಗ್ಲಿಲ್ಲ ಐಫೋನ್ 11 ಪ್ರೊ!

ತನ್ನ ಫೋನ್ ಮತ್ತೆ ಸಿಗುತ್ತೆ ಅನ್ನುವ ಯಾವುದೇ ಭರವಸೆಯಿಲ್ಲದೆ ಆಕೆ ಮನೆಗೆ ಮರಳಿದ್ದಳು. ಆದರೆ ಆ ಫೋನ್‌ನಲ್ಲಿ ತನ್ನೆಲ್ಲಾ ಪ್ರಮುಖ ಫೋಟೊಗಳು ಇದ್ದ ಕಾರಣ ಹೇಗಾದರೂ ಮಾಡಿ ಹುಡುಕಲೇ ಬೇಕೆಂದು ನಿಶ್ಚಯಿಸಿದರು. ಸರೋವರದಲ್ಲಿ ಐಫೋನ್‌ಗಾಗಿ ಹುಡುಕಾಟ ಶುರು ಮಾಡಿದಳು. ಇದಕ್ಕಾಗಿ ಮೀನು ಶೋಧಕರನ್ನು ಬಳಸಿಕೊಂಡು ಎರಡು ಗಂಟೆಗಳ ಕಾಲ ಹುಡುಕಿದರು ಮತ್ತು ಮ್ಯಾಗ್ನೆಟ್ ಸಹಾಯದಿಂದ ತನ್ನ ಫೋನ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಆದ್ರೆ ಆಕೆಯ ಐಫೋನ್ ಮತ್ತೆ ಕಾರ್ಯ ನಿರ್ವಹಿಸುತ್ತದೆ ಎಂಬ ಯಾವುದೇ ನಂಬಿಕೆ ಇರಲಿಲ್ಲ. ಆದ್ರೂ ಸಹ 30 ದಿನಗಳ ಕಾಲ ಫೋನ್ ಸರೋವರದಲ್ಲಿ ಮುಳುಗಿದ್ದರೂ ಅದು ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾಳೆ.

ಆದಾಗ್ಯೂ, ಐಫೋನ್ ಈ ರೀತಿ ಆಗಿರುವುದು ಇದೇ ಮೊದಲಲ್ಲ, ಈ ತಿಂಗಳ ಆರಂಭದಲ್ಲಿ ಆರು ತಿಂಗಳ ಕಾಲ ಐಫೋನ್ 11 ನೀರೊಳಗಿದ್ದರೂ ಪುನಃ ಕಾರ್ಯ ನಿರ್ವಹಿಸಿದ್ದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.

ಐಫೋನ್ 11 ಪ್ರೊ ಮತ್ತು 11 ಪ್ರೊ ಮ್ಯಾಕ್ಸ್ 13 ಅಡಿಯೊಳಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೀರು-ನಿರೋಧಕವಾಗಿದೆ ಎಂದು ಕೇಳಿದ್ದೇವೆ. ಆದರೆ ಇದು 30 ದಿನಗಳವರೆಗೆ ನೀರೊಳಗಿದ್ದರೂ ಏನು ಆಗಿಲ್ಲ ಎಂಬುದು ಆಶ್ಚರ್ಯ ಮೂಡಿಸಿದೆ.

English summary

IPhone 11 Pro Found In Working Condition After Being Underwater For 30 Days: Know More

A 50-year-old Canadian woman was out fishing she dropped her iPhone into the lake. But after 30 days The iPhone was booted and started working soon after it was pulled back.
Story first published: Saturday, March 27, 2021, 19:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X