ಭಾರತೀಯ ರೈಲ್ವೆಯು ಗುರುವಾರ ಹಲವಾರು ರೈಲುಗಳನ್ನು ರದ್ದು ಮಾಡಿದೆ. ಕೆಲವು ರೈಲುಗಳನ್ನು ಭಾಗಶಃವಾಗಿ ರದ್ದು ಮಾಡಿದರೆ, ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಕೆಲವು ರೈಲುಗಳ ಹಳಿ ಬದಲಾರದೆ ಇನ್ನು ಕೆಲವು ರೈಲುಗಳು ಕೆಲವು ನಿಲ್ದಾಣಗಳಿಗೆ ಬರುವುದೇ ಇಲ್ಲ. ಇನ್ನು ಕೆಲವು ರೈಲುಗಳು ಹಲವಾರು ದಿನಗಳ ಕಾಲ ಇರುವುದಿಲ್ಲ. ಪ್ರಮುಖವಾಗಿ ಭಾರತೀಯ ರೈಲ್ವೆಯು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ.
ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಇಂದು ಕೂಡಾ ಈ ಕಾರಣದಿಂದಾಗಿ ಹಲವಾರು ರೈಲುಗಳನ್ನು ರದ್ದು ಅಥವಾ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮುಖ್ಯವಾಗಿ ಸುರಕ್ಷತಾ ದೃಷ್ಟಿಯಿಂದಾಗಿ ಈ ರೈಲುಗಳನ್ನು ರದ್ದು ಮಾಡಲಾಗುತ್ತದೆ,

ಇನ್ನು ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲಿನ ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗಿ ನಿಮಗೆ ರಿಫಂಡ್ ಆಗುತ್ತದೆ. ಆದರೆ ನೀವು ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ ಮಾಡಿದ್ದರೆ, ನೀವು ಆ ಕೌಂಟರ್‌ಗೆ ಭೇಟಿ ನೀಡಿ ರದ್ದಾದ ರೈಲಿನ ಟಿಕೆಟ್‌ನ ರಿಫಂಡ್ ಪಡೆಯಬೇಕಾಗುತ್ತದೆ. ಹಾಗಾದರೆ ಇಂದು ಯಾವೆಲ್ಲ ರೈಲುಗಳು ರದ್ದಾಗಿದೆ ಎಂದು ತಿಳಿಯೋಣ ಮುಂದೆ ಓದಿ..
ಏಪ್ರಿಲ್ 20ರಂದು ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ
* ರೈಲು ಸಂಖ್ಯೆ 08757 ಮನೇಂದ್ರಗಢ-ಅಂಬಿಕಾಪುರ ಮೆಮೋ ಮನೇಂದ್ರಗಢ್‌ನಿಂದ ಅಂಬಿಕಾಪುರಕ್ಕೆ ಚಲಿಸುವ ರೈಲು ಗುರುವಾರವೂ ರದ್ದುಗೊಳ್ಳುತ್ತದೆ.
* ರೈಲು ಸಂಖ್ಯೆ 08750 ಅಂಬಿಕಾಪುರ-ಶಾಹದೋಲ್ ಮೆಮೋ ಅಂಬಿಕಾಪುರದಿಂದ ಶಾಹದೋಲ್‌ಗೆ ಚಲಿಸುತ್ತದೆ
* ಕಡಿಮೆ ಪ್ರಯಾಣಿಕರು ಇರುವ ಕಾರಣದಿಂದಾಗಿ ರೈಲು ಸಂಖ್ಯೆ 52539/52538 ಹೊಸ ಜಲ್ಪೈಗುರಿ - ಡಾರ್ಜಿಲಿಂಗ್ - ನ್ಯೂ ಜಲ್ಪೈಗುರಿ ಎಸಿ ವಿಶೇಷ ರೈಲು ಇಂದು ರದ್ದಾಗಿರುತ್ತದೆ
* ರೈಲು ಸಂಖ್ಯೆ 04501/04502 ಉನಾ ಹಿಮಾಚಲ ನಡುವೆ ಭಾಗಶಃ ರದ್ದುಗೊಳ್ಳುತ್ತದೆ
* ರೈಲು ಸಂಖ್ಯೆ 04593 ಅಂಬಾಲಾ ಕ್ಯಾಂಟ್ -ಅಂಬ್ ಅಂಡೌರಾ ವಿಶೇಷ ಜೆಸಿಒ ಭಾರತ್‌ಗಢದಲ್ಲಿ ಅಲ್ಪಾವಧಿಗೆ ರದ್ದಾಗುತ್ತದೆ.
* ರೈಲು ಸಂಖ್ಯೆ 04594 ಅಂಬ್ ಅಂಡೌರಾ - ಅಂಬಾಲಾ ಕ್ಯಾಂಟ್ ವಿಶೇಷ ಜೆಸಿಒ ಭಾರತ್‌ಗಢನಿಂದ ಪ್ರಾರಂಭವಾಗುತ್ತದೆ.
* ರೈಲು ಸಂಖ್ಯೆ 04567 ಅಂಬಾಲಾ ಕ್ಯಾಂಟ್- ನಂಗಲ್ ಡ್ಯಾಮ್ ವಿಶೇಷ ಜೆಸಿಒ ಭಾರತ್‌ಗಢದಲ್ಲಿ ಅಲ್ಪಾವಧಿಗೆ ರದ್ದಾಗುತ್ತದೆ.
IRCTC: ಏ.4ರಂದು ಹಲವಾರು ರೈಲುಗಳು ರದ್ದು, ಇಲ್ಲಿದೆ ಪಟ್ಟಿ
* ರೈಲು ಸಂಖ್ಯೆ 04568 ನಂಗಲ್ ಡ್ಯಾಮ್ - ಅಂಬಾಲಾ ಕ್ಯಾಂಟ್ ವಿಶೇಷ ಜೆಸಿಒ ಭಾರತ್‌ಗಢನಿಂದ ಪ್ರಾರಂಭವಾಗುತ್ತದೆ.
* ರೈಲು ಸಂಖ್ಯೆ 04567/04568 ನಂಗಲ್ ಡ್ಯಾಮ್ - ಭಾರತ್‌ಗಢದಲ್ಲಿ ಅಲ್ಪಾವಧಿಗೆ ರದ್ದಾಗುತ್ತದೆ.
* ರೈಲು ಸಂಖ್ಯೆ 04501 ಸಹರಾನ್‌ಪುರ-ಉನಾ ಹಿಮಾಚಲ ವಿಶೇಷ ಜೆಸಿಒ ರೂಪನಗರದಲ್ಲಿ ಅಲ್ಪಾವಧಿಗೆ ರದ್ದಾಗುತ್ತದೆ.
* ರೈಲು ಸಂಖ್ಯೆ 04502 ಉನಾ ಹಿಮಾಚಲ- ಸಹರಾನ್‌ಪುರ ವಿಶೇಷ ಜೆಸಿಒ ರೂಪನಗರದಲ್ಲಿ ಅಲ್ಪಾವಧಿಗೆ ಆರಂಭವಾಗುತ್ತದೆ.
ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ
ಹಂತ 1: indianrail.gov.in/mntes ಗೆ ಭೇಟಿ ನೀಡಿ
ಹಂತ 2: ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ
ಹಂತ 4: ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ
ಹಂತ 6: ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಿ


Click it and Unblock the Notifications