For Quick Alerts
ALLOW NOTIFICATIONS  
For Daily Alerts

ಹೂಡಿಕೆ ಸೇವೆ: ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಆ್ಯಕ್ಸಿಸ್ ಸೆಕ್ಯುರಿಟೀಸ್ ಒಪ್ಪಂದ

|

ಇತ್ತೀಚೆಗೆ ಮೂರನೇ ವರ್ಷಾಚರಣೆಯ ಸಂಭ್ರಮ ಕಂಡ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಹೂಡಿಕೆಯ ಪರಿಪೂರ್ಣ ಸಂಯೋಜನೆಯನ್ನು 3ಇನ್1 ಖಾತೆ ಮೂಲಕ ಒದಗಿಸುವ ಸಲುವಾಗಿ ಆ್ಯಕ್ಸಿಸ್ ಬ್ಯಾಂಕ್‌ನ ಸಹಸಂಸ್ಥೆಯಾದ ಆ್ಯಕ್ಸಿಸ್ ಸೆಕ್ಯುರಿಟೀಸ್ ಒಪ್ಪಂದ ಮಾಡಿಕೊಂಡಿರುವುದನ್ನು ಇಂದು ಪ್ರಕಟಿಸಿದೆ.

 

3ಇನ್1 ಖಾತೆಯು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಹೊಂದಿರುವ ಉಳಿತಾಯ ಬ್ಯಾಂಕ್ ಖಾತೆ ಮತ್ತು ಆ್ಯಕ್ಸಿಸ್ ಸೆಕ್ಯುರಿಟೀಸ್‍ನಲ್ಲಿ ಹೊಂದಿರುವ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆಗಳನ್ನು ಸುಲಲಿತವಾಗಿ ಸಮನ್ವಯಗೊಳಿಸಲಿದೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ & ಆ್ಯಕ್ಸಿಸ್ ಸೆಕ್ಯುರಿಟೀಸ್ ಒಪ್ಪಂದ

3ಇನ್1 ಖಾತೆಯು ಗ್ರಾಹಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ನಿಧಿ ವರ್ಗಾಯಿಸಲು, ಕಾಗದ ಕೆಲಸವನ್ನು ಕಡಿಮೆ ಮಾಡಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆ್ಯಕ್ಸಿಸ್ ಸೆಕ್ಯುರಿಟೀಸ್ ಒದಗಿಸುವ ಮ್ಯೂಚುವಲ್ ಫಂಡ್, ಎಸ್‍ಐಪಿ, ಈಕ್ವಿಟಿಗಳು ಹಾಗೂ ಇತರ ಹೂಡಿಕೆ ಮಾರ್ಗಗಳು ಸೇರಿದಂತೆ ವಿವಿಧ ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಲು ಏಕೈಕ ಸುಲಲಿತ ಪ್ಲಾಟ್‌ಫಾರ್ಮ್‌ ಅನ್ನು ಒದಗಿಸಲಿದೆ.

ಗ್ರಾಹಕರು ಆ್ಯಕ್ಸಿಸ್ ಸೆಕ್ಯುರಿಟೀಸ್ ನೀಡುವ ಮ್ಯೂಚುವಲ್ ಫಂಡ್ ಹೂಡಿಕೆ, ಸ್ಟಾಕ್ ಬ್ರೋಕಿಂಗ್, ಹೂಡಿಕೆ ಸಲಹೆ ಮತ್ತು ಪೋರ್ಟ್‍ಫೋಲಿಯೊ ನಿರ್ವಹಣೆ ಸೇವೆಗಳು, ಟ್ರೇಡಿಂಗ್/ ಡಿಮ್ಯಾಟ್ ಖಾತೆ ತೆರೆಯುವುದೂ ಸೇರಿದಂತೆ ವಿವಿಧ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

English summary

Jana Small Finance Bank and Axis Securities enters into a tie-up to offer investment services

Jana Small Finance Bank, which recently celebrated its 3rd anniversary, today announced its tie-up with Axis Securities, a wholly-owned subsidiary of Axis Bank, to offer its customers the perfect blend of banking and investing through 3-in-1 account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X