For Quick Alerts
ALLOW NOTIFICATIONS  
For Daily Alerts

$6 ಲಕ್ಷ ಕೋಟಿ ಬಜೆಟ್‌ಗೆ ಜೋ ಬೈಡೆನ್ ಪ್ರಸ್ತಾಪ: ಬಡ, ಮಧ್ಯಮ ವರ್ಗಕ್ಕೆ ಹೆಚ್ಚಿನ ಆದ್ಯತೆ!

|

ಅಮೆರಿಕಾದ 46ನೇ ಅಧ್ಯಕ್ಷ ಜೋ ಬೈಡೆನ್ ಬೃಹತ್ ಬಜೆಟ್‌ಗೆ ಸಿದ್ಧತೆ ನಡೆಸಿದ್ದು, 6 ಲಕ್ಷ ಕೋಟಿ ಅಮೆರಿಕನ್ ಡಾಲರ್ ಬಜೆಟ್ ಅನ್ನು ಶುಕ್ರವಾರ ಪ್ರಸ್ತಾಪಿಸಿದ್ದಾರೆ. ಇದು ಎರಡನೇ ಮಹಾಯುದ್ಧದ ನಂತರದ ಗರಿಷ್ಠ ಮಟ್ಟದ ಬಜೆಟ್ ಆಗಿರಲಿದೆ.

ಏಕೆಂದರೆ ಈ ಬಜೆಟ್‌ನಲ್ಲಿ ಶಿಕ್ಷಣ, ಸಾರಿಗೆ ಮತ್ತು ಜಾಗತಿಕ ಹವಾಮಾನ ಬದಲಾವಣೆ ಪರಿಹಾರ ಒಳಗೊಂಡಿರುವ ವ್ಯಾಪಕವಾದ ಆರ್ಥಿಕ ಕಾರ್ಯಸೂಚಿಗೆ ಹಣ ತಲುಪುವಂತೆ ಯೋಜಿಸಲಾಗಿದೆ.

ಇಷ್ಟಲ್ಲದೆ ಈ ಬಜೆಟ್ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ಸುರಕ್ಷತಾ ಕಾರ್ಯಕ್ರಮಗಳು ಹೆಚ್ಚಿಸಲಿದೆ. ಮತ್ತೊಂದೆಡೆ ಶ್ರೀಮಂತರು, ವ್ಯಾಪಾರ-ವ್ಯವಹಾರ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹ ಹೆಚ್ಚಳಕ್ಕೂ ಸಿದ್ಧತೆ ಮಾಡಲಾಗಿದೆ.

2031ಕ್ಕೆ 8.2 ಟ್ರಿಲಿಯನ್ ಡಾಲರ್ ಬಜೆಟ್‌!

2031ಕ್ಕೆ 8.2 ಟ್ರಿಲಿಯನ್ ಡಾಲರ್ ಬಜೆಟ್‌!


ಜೋ ಬೈಡೆನ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಬಜೆಟ್‌ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿರುವಾಗಲೇ, ಮುಂದಿನ ಒಂದು ದಶಕದಲ್ಲಿ ಬಜೆಟ್‌ನ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. 2031ರ ವೇಳೆಗೆ ಬಜೆಟ್‌ನ ಒಟ್ಟು ಖರ್ಚು ಬರೋಬ್ಬರಿ 8.2 ಟ್ರಿಲಿಯನ್ ಡಾಲರ್‌ನಷ್ಟಿರಲಿದೆ.

2030 ರ ದಶಕದಲ್ಲಿ ಬಜೆಟ್ ಕೊರತೆಗಳನ್ನು ನೀಗಿಸಲು ತೆರಿಗೆ ಹೆಚ್ಚಳ, ಉದ್ಯೋಗ ಸೃಷ್ಟಿ ಮತ್ತು ಕುಟುಂಬಗಳ ಯೋಜನೆಗಳನ್ನು ಸಂಪೂರ್ಣವಾಗಿ ಸರಿದೂಗಿಸಲಾಗುವುದು ಎಂದು ಹೇಳಿದ್ದಾರೆ.

 

ಬಜೆಟ್ ಕೊರತೆ 3.7 ಟ್ರಿಲಿಯನ್ ಡಾಲರ್

ಬಜೆಟ್ ಕೊರತೆ 3.7 ಟ್ರಿಲಿಯನ್ ಡಾಲರ್

ಈ ವರ್ಷದ ಬಜೆಟ್‌ನ ಕೊರತೆಯು $3.7 ಟ್ರಿಲಿಯನ್ ಡಾಲರ್‌ನಷ್ಟು ಇರಲಿದ್ದು, ಅದು ಮುಂದಿನ ವರ್ಷ 1.8 ಟ್ರಿಲಿಯನ್ ಡಾಲರ್‌ಗೆ ಇಳಿಯಲಿದೆ. ಈ ಮೂಲಕ ಪೂರ್ವ ಸಾಂಕ್ರಾಮಿಕ ಮಟ್ಟಕ್ಕಿಂತ ಹೆಚ್ಚಾಗಿದೆ.

ಈಗಾಗಲೇ ಕೋವಿಡ್-19 ಪರಿಹಾರ ಪ್ಯಾಕೇಜ್‌ಗಳ ಸಲುವಾಗಿ 5 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗಿದ್ದು, ರಾಷ್ಟ್ರೀಯ ಸಾಲವು ಶೀಘ್ರದಲ್ಲೇ 30 ಟ್ರಿಲಿಯನ್ ಡಾಲರ್‌ಗಳನ್ನು ದಾಟುತ್ತದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಖರ್ಚು ಮಾಡುವ ಪ್ರತಿ ಡಾಲರ್‌ಗೆ ಸುಮಾರು 50 ಸೆಂಟ್‌ಗಳನ್ನು ಸರ್ಕಾರ ಸಾಲ ಪಡೆಯಬೇಕು.

 

ಬಡ ಮತ್ತು ಮಧ್ಯಮ ವರ್ಗಕ್ಕೆ ವಿಶೇಷ ಆದ್ಯತೆ

ಬಡ ಮತ್ತು ಮಧ್ಯಮ ವರ್ಗಕ್ಕೆ ವಿಶೇಷ ಆದ್ಯತೆ

2022 ರ ಆರ್ಥಿಕ ವರ್ಷ ಮತ್ತು ನಂತರದ ಒಂದು ದಶಕದ ಪ್ರಸ್ತಾವನೆಯಲ್ಲಿ ಹೆಚ್ಚಿನ ಮಧ್ಯಮ ವರ್ಗದ ಅಮೆರಿಕನ್ನರ ಸಾಮಾಜಿಕ ಜೀವನದ ಸೌಕರ್ಯಗಳನ್ನು ಸುಧಾರಿಸಲು ಸಹಾಯ ಮಾಡಲು ಮತ್ತು ಜಾಗತಿಕವಾಗಿ ಉತ್ತಮವಾಗಿ ಸ್ಪರ್ಧಿಸಲು ಜೋ ಬೈಡೆನ್‌ ಮಹತ್ವಾಕಾಂಕ್ಷೆ ಯೋಜನೆಗಳನ್ನು ಹೊಂದಿದ್ದಾರೆ.

ಬಜೆಟ್‌ ಕೊರತೆಯನ್ನು ಸರಿದೂಗಿಸಲು ಹೆಚ್ಚು ಆದಾಯ ಗಳಿಸುವ ಜನರ ಮೇಲೆ ತೆರಿಗೆ ಹೆಚ್ಚಳ, ವ್ಯಾಪಾರ-ವ್ಯವಹಾರ ಮೂಲಕ ಆದಾಯ ಸಂಗ್ರಹ ಏರಿಕೆಯನ್ನು ಗುರಿಯಾಗಿರಿಸಿ ಮಕ್ಕಳ ಆರೈಕೆಗಾಗಿ ದೊಡ್ಡ ಸಬ್ಸಿಡಿಗಳು ಮತ್ತು ರಾಷ್ಟ್ರೀಯ ವೇತನ ರಜೆ ಮುಂತಾದ ಬೃಹತ್ ಹೊಸ ಸಾಮಾಜಿಕ ಕಾರ್ಯಕ್ರಮಗಳಿಗೆ ಶಕ್ತಿ ತುಂಬಲು ಆದಾಯವನ್ನು ಬಳಸಲಾಗುತ್ತದೆ.

 

ಎರಡನೇ ಮಹಾಯುದ್ಧದ ಬಳಿಕ ಬೃಹತ್ ಯೋಜನೆ ವಿಸ್ತರಣೆ

ಎರಡನೇ ಮಹಾಯುದ್ಧದ ಬಳಿಕ ಬೃಹತ್ ಯೋಜನೆ ವಿಸ್ತರಣೆ

ಎರಡನೇ ಮಹಾಯುದ್ಧದ ನಂತರದ ಅಮೆರಿಕಾ ಬಜೆಟ್‌ಗಳಲ್ಲಿ ಅತ್ಯಂತ ವಿರಳ ಯೋಜನೆಗಳನ್ನು ಈ ಬಾರಿ ವಿಸ್ತರಿಸಲಾಗುತ್ತಿದೆ. ರಸ್ತೆಗಳು, ನೀರಿನ ಕೊಳವೆಗಳು, ಬ್ರಾಡ್‌ಬ್ಯಾಂಡ್ ಇಂಟರ್ನೆಟ್, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳು ಮತ್ತು ಸುಧಾರಿತ ಉತ್ಪಾದನಾ ಸಂಶೋಧನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಅಮೆರಿಕಾದ ಬಹುತೇಕ ಬಜೆಟ್‌ನಲ್ಲಿ ಮಿಲಿಟರಿ ಖರ್ಚು ಬೆಳೆಯುತ್ತಲೇ ಸಾಗಿದೆ. ಈ ಬಾರಿಯು ಮಿಲಿಟರಿ ಮೇಲಿನ ವೆಚ್ಚ ಹೆಚ್ಚಾಗಲಿದೆ.

$4 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ಹೆಚ್ಚಳವಿಲ್ಲ!

$4 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ಹೆಚ್ಚಳವಿಲ್ಲ!

ವರ್ಷಕ್ಕೆ, $4,00,000 ಕ್ಕಿಂತ ಕಡಿಮೆ ಆದಾಯ ಗಳಿಸುವ ಜನರ ಮೇಲೆ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಜೋ ಬೈಡೆನ್ ಹೇಳಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಈ ಮಟ್ಟಿನ ಆದಾಯ ಗಳಿಸುವವರಿಗೆ ಟ್ರಂಪ್ ತೆರಿಗೆ ಕಡಿತವನ್ನು ವಿಸ್ತರಿಸಲು ಬೈಡೆನ್ ಪ್ರಸ್ತಾಪಿಸುವ ಸಾಧ್ಯತೆಯಿದೆ. ಜೊತೆಗೆ ಹೆಚ್ಚಿನ ಆದಾಯ ಗಳಿಸುವವರು ಅಥವಾ ವ್ಯವಹಾರಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಬಹುದು.

English summary

Joe Biden's $6 Trillion Budget: Social Spending, Taxes On Business

President Joe Biden on Saturday unveiled a USD 6 trillion budget for next year that's piled high with new safety net programs for the poor and middle class
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X