ಒಂದು ದಿನದಲ್ಲಿ ಬೆಳಗ್ಗೆಯಿಂದ ಸಂಜೆ ಆಗುವುದರೊಳಗೆ ಒಬ್ಬ ವ್ಯಕ್ತಿ ಕೋಟ್ಯಧಿಪತಿ ಆಗಲು ಸಾಧ್ಯವಾ? ಹಾಗೆ ಆಗಬೇಕು ಅಂದರೆ ಲಾಟರಿ ಹೊಡೀಬೇಕು ಅಷ್ಟೇ ಅನ್ನೋದು ನಿಮ್ಮ ಉತ್ತರವಾದರೆ, ಊಹೆ ಸತ್ಯ. ಏಕೆಂದರೆ ಕಳೆದ ಶನಿವಾರ ಬೆಳಗ್ಗೆ 9.30ಕ್ಕೆ 50 ರುಪಾಯಿ ಕೊಟ್ಟು, ಲಾಟರಿ ಖರೀದಿಸಿದ ವ್ಯಕ್ತಿಗೆ ಸಂಜೆ 4 ಗಂಟೆಗೆ 1 ಕೋಟಿ ರುಪಾಯಿ ಜಾಕ್ ಪಾಟ್ ಹೊಡೆದಿದೆ.
ಕೇರಳದ ಚೌವಾರದಲ್ಲಿನ 33 ವರ್ಷದ ಟ್ಯಾಕ್ಸಿ ಚಾಲಕ ಶಾಜಿಗೆ ಅದೃಷ್ಟ ಹೀಗೆ ಒಲಿದಿದ್ದು, 1 ಕೋಟಿ ಮೊತ್ತದ ಬಹುಮಾನ ಟಿಕೆಟ್ ಸಂಖ್ಯೆ KD 841039ಗೆ ಬಂದಿದೆ. ಅಂದ ಹಾಗೆ ಶಾಜಿಗೆ ಯಾವಾಗಲೂ ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ. ಒಂದು ವೇಳೆ ಲಾಟರಿ ಟಿಕೆಟ್ ನ ಕೊನೆ ಸಂಖ್ಯೆ 9 ಅಥವಾ 12 ಆಗಿದ್ದರೆ ಸಾಲ ಮಾಡಿಯಾದರೂ ಖರೀದಿಸುತ್ತಿದ್ದರು.
ಒಂದು ಸಲ ಸ್ನೇಹಿತರ ಜತೆಗೂಡಿ 3000 ರುಪಾಯಿಗೆ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಆ ನಂತರ ಹೀಗೆ ಅದೃಷ್ಟ ಪರೀಕ್ಷೆ ಮಾಡುವುದು ಅಭ್ಯಾಸವಾಗಿದೆ. ಚೆರುವೆಟ್ಟುಕಾಡ್ ಚರ್ಚ್ ನಲ್ಲಿ ಹಾಡುವ ಗುಂಪಿನಲ್ಲಿ ಶಾಜಿ ಕೂಡ ಒಬ್ಬರು. "ಒಂದು ವೇಳೆ ನನಗೆ ಲಾಟರಿ ಬಂದರೆ ಚರ್ಚ್ ಗೆ ಮ್ಯೂಸಿಕ್ ಸಿಸ್ಟಮ್ ನೀಡುತ್ತೇನೆ" ಎಂದು ತಮ್ಮ ಸ್ನೇಹಿತ ಸಂತೋಷ್ ಗೆ ಶಾಜಿ ಹೇಳಿದ್ದರಂತೆ.

ಶನಿವಾರದಂದು ತನ್ನ ತಾಯಿಗೆ ಹಣ ನೀಡಿದ ನಂತರ ಉಳಿದ ಐವತ್ತು ರುಪಾಯಿಯಲ್ಲಿ ನೆಲ್ಲಿಮೂಡು ಶ್ರೀಧರನ್ ಅವರಿಂದ ಲಾಟರಿ ಟಿಕೆಟ್ ಖರೀದಿಸಿದ್ದರು ಶಾಜಿ. ತನ್ನ ಸಂಬಂಧಿ ಮನು ಎಂಬುವವರಿಂದ ಶಾಜಿ ಅವರಿಗೆ ಟಿಕೆಟ್ ಬಹುಮಾನ ಬಂದಿರುವುದು ಗೊತ್ತಾಗಿದೆ. ಎಸ್ ಬಿಐ ಚೌವಾರ ಶಾಖೆಯ ಮ್ಯಾನೇಜರ್ ಆರ್. ಎಸ್. ದಿವ್ಯಾ ಅವರು ಶಾಜಿ ಮನೆಗೆ ಬಂದು ಸುದ್ದಿ ಮುಟ್ಟಿಸಿದ್ದಾರೆ. ಎಲ್ಲ ನಿಯಮಗಳನ್ನು ಪೂರ್ಣಗೊಳಿಸಿ, ಆಕೆಗೆ ಲಾಟರಿ ಟಿಕೆಟ್ ಹಸ್ತಾಂತರಿಸಲಾಗಿದೆ.
ಶಾಜಿಗೆ ಅವರ ಮಾವ ರಾಜು ಮನೆ ನವೀಕರಣಕ್ಕೆ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಅಳಿಯನಿಗೆ ಟ್ಯಾಕ್ಸಿ ಕೊಡಿಸಿದ್ದಾರೆ. ಈಗ ಬಹುಮಾನ ಬಂದ ಮೇಲೆ, ಅಡಮಾನ ಇಟ್ಟ ಪತ್ನಿ ಅಂಜು ಅವರ ಚಿನ್ನ ಬಿಡಿಸಿಕೊಡಬೇಕು ಅಂತಿದ್ದಾರೆ ಶಾಜಿ. ಸಣ್ಣ ಮೊತ್ತವನ್ನು ಸೋದರಿಗೆ ಕೊಡಬೇಕು. ಸ್ನೇಹಿತ ಸಂತೋಷ್ ಗೆ ಆಟೋ ಕೊಡಿಸಬೇಕು. ಮೂರು ವರ್ಷದ ಮಗನ ಹೆಸರಲ್ಲಿ ಹಣ ಹೂಡಿಕೆ ಮಾಡುವ ಉದ್ದೇಶ ಶಾಜಿಗೆ ಇದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications