For Quick Alerts
ALLOW NOTIFICATIONS  
For Daily Alerts

ಖಾತಾಬುಕ್‌ನಿಂದ ಆಟೋಮೇಟೆಡ್ ಬಾಟ್, ಕಾಲ್ ರಿಮೈಂಡರ್ ಸೇವೆ

|

ಬೆಂಗಳೂರು, ಅಕ್ಟೋಬರ್ 2: ಭಾರತದಲ್ಲಿ ಮುಂಚೂಣಿಯಲ್ಲಿರುವ ಫಿನ್ ಟೆಕ್ ಸ್ಟಾರ್ಟಪ್ ಆಗಿರುವ ಖಾತಾಬುಕ್ ಆಟೋಮೇಟೆಡ್ ಬಾಟ್ ಕಾಲ್ ರಿಮೈಂಡರ್ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ವ್ಯಾಪಾರಿಗಳ ಕ್ರೆಡಿಟ್/ಉದ್ಧರಿ(ಸಾಲ) ಸಂಗ್ರಹ ಪ್ರಕ್ರಿಯೆಯನ್ನು ಸುಧಾರಣೆ ಮಾಡುತ್ತದೆ. ಈ ಆಟೋಮೇಟೆಡ್ ಬಾಟ್ ಕಾಲ್ ರಿಮೈಂಡರ್ ಎಂಎಸ್ಎಂಇಗಳಿಗೆ ಮೊದಲ ಇಂಟರ್ಯಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಆಧಾರಿತ ವೈಶಿಷ್ಟ್ಯತೆಯಾಗಿದೆ. ಇದು 9 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

 

ಸಾಲ/ಉದ್ಧರಿ ಮೇಲೆ ಮಾಡಲಾದ ಹಣದ ಮರುಪಡೆಯುವಿಕೆ ಅಥವಾ ವಾಪಸ್ ಪ್ರಕ್ರಿಯೆ ಭಾರತದಲ್ಲಿನ ಎಂಎಸ್ಎಂಇಗಳಿಗೆ ಪ್ರಮುಖ ವ್ಯಾಪಾರದ ಕೇಂದ್ರ ಬಿಂದುವಾಗಿದೆ. ಖಾತಾಬುಕ್ ಅಪ್ಲಿಕೇಶನ್‌ನಲ್ಲಿನ ಪಠ್ಯ ಆಧಾರಿತ ಮರುಪಡೆಯುವಿಕೆ ಜ್ಞಾಪನೆಯ ವೈಶಿಷ್ಟ್ಯವು ಬಳಕೆದಾರರಿಗೆ ನಗದು ಹರಿವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ಸ್ಕೇಲಿಂಗ್ ಮಾಡಲು ಮಹತ್ತರ ಕೊಡುಗೆ ನೀಡಿದೆ. ಈ ಹೊಸ ಸಾಮರ್ಥ್ಯವು ಪ್ರೀಮಿಯಂ ವಾಯ್ಸ್ ಸಕ್ರಿಯಗೊಳಿಸಿರುವುದು ವೈಶಿಷ್ಟ್ಯವಾಗಿದೆ.

ಮೂರನೇ ವ್ಯಕ್ತಿಯ ಸೇವೆಯನ್ನು ಬಳಸಿಕೊಳ್ಳುವ ಸ್ವಯಂಚಾಲಿತ ಐವಿಆರ್ ಕರೆಗಳ ಮೂಲಕ ತಮ್ಮ ಗ್ರಾಹಕರಿಂದ ವ್ಯಾಪಾರಿಗಳ ಕ್ರೆಡಿಟ್ ಸಂಗ್ರಹಣೆಯನ್ನು ಮತ್ತಷ್ಟು ಸರಳೀಕರಿಸಲು ಮತ್ತು ಸುಧಾರಣೆ ಮಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವೈಶಿಷ್ಟ್ಯತೆಯನ್ನು ನಾಲ್ಕು ಉಪ-ವೈಶಿಷ್ಟ್ಯತೆಗಳನ್ನು ಸ್ವಯಂ ಚಾಲಿತ ಕರೆ, ಬೃಹತ್ ಕರೆ, ಸಂಗ್ರಹಣೆ ಡ್ಯಾಶ್ ಬೋರ್ಡ್ ಮತ್ತು ಕರೆ ಇತಿಹಾಸ ಎಂದು ವರ್ಗೀಕರಿಸಲಾಗಿದೆ. ಖಾತಾಬುಕ್ ಕಾಲ್ ರಿಮೈಂಡರ್ ವೈಶಿಷ್ಟ್ಯತೆಯ ಮೂಲಕ ಮಾಡಲಾಗಿರುವ ಸ್ವಯಂಚಾಲಿತ ಕರೆಗಳನ್ನು ಕ್ಷಿಪ್ರಗತಿಯಲ್ಲಿ ಪಾವತಿ ಸಂಗ್ರಹಣೆಯ ಲಿಂಕ್‌ಗಳೊಂದಿಗೆ ಟೆಕ್ಸ್ಟ್ ನೊಂದಿಗೆ ಅನುಸರಿಸಲಾಗುತ್ತದೆ. ಇದಲ್ಲದೇ, ಬಳಕೆದಾರರು ಸಗಟು ಕರೆ ರಿಮೈಂಡರ್‌ಗಳನ್ನು ಸೆಟ್ ಬಹು ಗ್ರಾಹಕರಿಂದ ಬರಬೇಕಾಗಿರುವ ಹಣವನ್ನು ಸಂಗ್ರಹಿಸಬಹುದಾಗಿದೆ.

ಖಾತಾಬುಕ್‌ನಿಂದ ಆಟೋಮೇಟೆಡ್ ಬಾಟ್, ಕಾಲ್ ರಿಮೈಂಡರ್ ಸೇವೆ

ಖಾತಾಬುಕ್ ನ ಸಿಇಒ ಮತ್ತು ಸಹ-ಸಂಸ್ಥಾಪಕ ರವೀಶ್ ನರೇಶ್ ಅವರು ಮಾತನಾಡಿ, ''ಎಂಎಸ್ಎಂಇ ಟೆಕ್ ಕ್ಷೇತ್ರದಲ್ಲಿ ಒಂದು ಬೆಂಚ್ ಮಾರ್ಕ್ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಈ ಹಿಂದೆ ದೊಡ್ಡ ಸಂಸ್ಥೆಗಳು ಮಾತ್ರ ಬಳಸುತ್ತಿದ್ದ ಡಿಜಿಟಲ್ ಉಪಕರಣಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಸಣ್ಣ ವ್ಯವಹಾರಗಳಿಗೆ ಪ್ರಕ್ರಿಯೆಗಳನ್ನು ಸಾಕಾರಗೊಳಿಸುತ್ತಿದ್ದೇವೆ. ಖಾತಾಬುಕ್ ಬಳಕೆದಾರರ ಒಳನೋಟಗಳ ಪ್ರಕಾರ, ಸುಮಾರು 30 ಪ್ರತಿಶತ ಗ್ರಾಹಕರು ಯಾವುದೇ ವ್ಯಾಪಾರಿಗೆ ಪಾವತಿ ಸಂಗ್ರಹಣೆಗಾಗಿ ಹೆಚ್ಚಿನ ಅವಕಾಶದ ಅಗತ್ಯವಿರುತ್ತದೆ. ನಮ್ಮ ಬಳಕೆದಾರರಿಗೆ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಅಗತ್ಯತೆಗಳನ್ನು ಸೃಷ್ಟಿಸುವ ಮೂಲಕ ಫಾಲೋಅಪ್‌ಗಳಲ್ಲಿ ವ್ಯಾಪಾರಿಗಳ ಸಮಯವನ್ನು ಉಳಿಸುವ ಮತ್ತು ಯಾಂತ್ರೀಕೃತಗೊಳಿಸಲಾಗುತ್ತದೆ. ಇದರ ಮೂಲಕ ಅವರ ಕ್ರೆಡಿಟ್ ಮರುಪಡೆಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ನಾವು ಆಟೋಮೇಟೆಡ್ ಬಾಟ್ ಕಾಲ್ ರಿಮೈಂಡರ್ ವೈಶಿಷ್ಟ್ಯತೆಯನ್ನು ಪರಿಚಯಿಸಿದ್ದೇವೆ. ಇದಕ್ಕಾಗಿ ನಾವು ತಂತ್ರಜ್ಞಾನವನ್ನು ಅವಕಾಶಗಳ ಸಮೀಕರಣವಾಗಿ ಬಳಸುತ್ತಿದ್ದೇವೆ,'' ಎಂದು ತಿಳಿಸಿದರು.

 

ತಂತ್ರಜ್ಞಾನ ಪರಿಹಾರಗಳಿಗೆ ಸಾಕಷ್ಟು ಬೇಡಿಕೆ
ಭಾರತದ ಎಂಎಸ್ಎಂಇಗಳಿಂದ ತಂತ್ರಜ್ಞಾನ ಪರಿಹಾರಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗತೊಡಗಿದೆ. ಅಂದರೆ, 2020-21 ನೇ ಹಣಕಾಸು ಸಾಲಿನಲ್ಲಿ ವರ್ಷದಿಂದ ವರ್ಷಕ್ಕೆ 150% ರಷ್ಟು ಹೆಚ್ಚಳವಾಗಿರುವುದನ್ನು ಖಾತಾಬುಕ್ ಗಮನಿಸಿದೆ. ಸ್ಟಾರ್ಟಪ್ ಇತ್ತೀಚೆಗೆ 100 ಮಿಲಿಯನ್ ಯುಎಸ್ ಡಾಲರ್ ಸರಣಿಯ ಸಿ ಫಂಡಿಂಗ್ ತಲುಪಿದೆ. ಇದರ ಮೌಲ್ಯವು 600 ಮಿಲಿಯನ್ ಯುಎಸ್ ಡಾಲರ್ ಸನಿಹದಲ್ಲಿದೆ. ಪ್ರಸ್ತುತ ದೇಶದಲ್ಲಿ ಮಾಸಿಕ 10 ಮಿಲಿಯನ್‌ಗೂ ಅಧಿಕ ಸಕ್ರಿಯ ಬಳಕೆದಾರರಿಗೆ ಟೆಕ್ ಪ್ಲಾಟ್‌ಫಾರ್ಮ್ ಗಳನ್ನು ಒದಗಿಸುವ ಮೂಲಕ ಸೇವಾ ವಿತರಣೆಗೆ ಆದ್ಯತೆ ನೀಡುವತ್ತ ಖಾತಾಬುಕ್ ಚಿತ್ತ ಹರಿಸಿದೆ.

ವಿತರಕರು, ಸಗಟುದಾರರು, ವಾಣಿಜ್ಯೋದ್ಯಮಿಗಳು ಮತ್ತು ಪೂರೈಕೆದಾರರು ಸೇರಿದಂತೆ ಖಾತಾಬುಕ್ ಬಳಕೆದಾರರು ಇನ್ನು ಮುಂದೆ ಸುಲಭವಾಗಿ ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಬಳಸಿಕೊಂಡು ಬ್ಯುಸಿನೆಸ್ ಅನಾಲಿಟಿಕ್ಸ್, ಮಾರಾಟ ಶಕ್ತಿಯ ಆಟೋಮೇಷನ್ ಮತ್ತು ಡಿಜಿಟಲ್ ಇನ್ವಾಯ್ಸಿಂಗ್ ಮೂಲಕ ತಮ್ಮ ಸಮರ್ಥತೆಯನ್ನು ಸುಧಾರಣೆ ಮಾಡಿಕೊಳ್ಳಬಹುದಾಗಿದೆ.

English summary

Khatabook launches automated bot call reminder feature to improve credit collection

Khatabook has released the automated bot call reminder feature to improve the credit or udhari collection for its merchant userbase. The reminder is the first Interactive Voice Response (IVR) based feature deployment for MSMEs, which is made available in nine Indian languages.
Story first published: Wednesday, October 27, 2021, 17:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X