For Quick Alerts
ALLOW NOTIFICATIONS  
For Daily Alerts

ಎರಡೆರಡು ಕಡೆ ಕೆಲಸ ಮಾಡುತ್ತಿದ್ದ ಐಟಿ ಉದ್ಯೋಗಿಗಳು ಸಿಕ್ಕಿಬಿದ್ದದ್ದು ಹೇಗೆ?

|

ಇತ್ತಿಚಿನ ದಿನಗಳಲ್ಲಿ ಮೂನ್‌ಲೈಟಿಂಗ್ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ಮೂನ್‌ಲೈಟಿಂಗ್ ಎಂದರೆ ಒಬ್ಬ ಉದ್ಯೋಗಿ ಎರಡೆರಡು ಕಡೆ ಕೆಲಸ ಮಾಡುವುದು. ಎರಡು ಪಾರ್ಟ್‌ಟೈಮ್ ಕೆಲಸವಾದರೆ ಪರವಾಗಿಲ್ಲ, ಒಂದು ಕಡೆ ಫುಲ್‌ಟೈಮ್ ಉದ್ಯೋಗಿಯಾಗಿದ್ದುಕೊಂಡು ಬೇರಿನ್ನೊಂದು ಕಡೆಯೂ ಕೆಲಸ ಮಾಡುವುದಕ್ಕೆ ಮೂನ್‌ಲೈಟಿಂಗ್ ಎನ್ನುತ್ತಾರೆ. ಇದೊಂದು ರೀತಿಯಲ್ಲಿ ರಾಜಕೀಯದಲ್ಲಿ ಇರುವ ಆಫೀಸ್ ಆಫ್ ಪ್ರಾಫಿಟ್ ಇದ್ದಂತೆ. ಅಂದರೆ ಒಂದು ಎರಡೆರಡು ಸರಕಾರಿ ಹುದ್ದೆಗಳನ್ನು ಹೊಂದಿರುವುದು.

 

ಬಹುತೇಕ ಹಲವು ವೃತ್ತಿಪರ ಕ್ಷೇತ್ರಗಳಲ್ಲಿ ಈ ರೀತಿಯ ಮೂನ್‌ಲೈಟಿಂಗ್ ಆಗುತ್ತಿರುವುದುಂಟು. ಐಟಿ ಕಂಪನಿಗಳಲ್ಲಿ ಹೆಚ್ಚಾಗಿದೆ. ಅದರಲ್ಲೂ ವರ್ಕ್ ಫ್ರಂ ಹೋಮ್ ಬಂದ ಬಳಿಕ ಇದು ತೀವ್ರ ಮಟ್ಟದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಇನ್ಫೋಸಿಸ್, ಎಚ್‌ಸಿಎಲ್, ಟಿಸಿಎಸ್, ವಿಪ್ರೋ ಮೊದಲಾದ ಐಟಿ ಕಂಪನಿಗಳು ಈ ಮೂನ್‌ಲೈಟಿಂಗ್ ಅನ್ನು ಅನೈತಿಕ ಎಂದು ಟೀಕಿಸಿವೆ.

ಮೂನ್‌ಲೈಟಿಂಗ್ ಬಗ್ಗೆ ಮೊದಲು ಶಬ್ದ ಮಾಡಿದ್ದು ವಿಪ್ರೋ. ಇತ್ತೀಚೆಗೆ ಅದು ಮೂನ್‌ಲೈಟಿಂಗ್ ಮಾಡುತ್ತಿದ್ದ ಆರೋಪದ ಮೇಲೆ ೩೦೦ ಉದ್ಯೋಗಿಗಳನ್ನು ವಜಾಗೊಳಿಸಿದ್ದಾಗಿ ವಿಪ್ರೋ ಹೇಳಿತ್ತು. ಅದಾದ ಬಳಿಕ ಬಹುತೇಕ ಎಲ್ಲಾ ಐಟಿ ಕಂಪನಿಗಳು ಮೂನ್‌ಲೈಟಿಂಗ್ ವಿರುದ್ಧ ಧ್ವನಿ ಎತ್ತುತ್ತಾ ಬಂದಿವೆ.

ಮೂನ್‌ಲೈಟರ್ಸ್ ಸಿಕ್ಕಿಬಿದ್ದದ್ದು ಹೇಗೆ?

ಮೂನ್‌ಲೈಟರ್ಸ್ ಸಿಕ್ಕಿಬಿದ್ದದ್ದು ಹೇಗೆ?

300 ಉದ್ಯೋಗಿಗಳನ್ನು ವಿಪ್ರೋ ಸಂಸ್ಥೆ ಮೂನ್‌ಲೈಟಿಂಗ್ ವಿಚಾರಕ್ಕೆ ವಜಾಗೊಳಿಸಿತ್ತು. ಆದರೆ, ಈ ಉದ್ಯೋಗಿಗಳು ವಂಚಿಸುತ್ತಿರುವ ವಿಚಾರ ವಿಪ್ರೋಗೆ ಹೇಗೆ ಗೊತ್ತಾಯಿತು? ಹಿಂದೆಲ್ಲಾ ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗಗಳ ಮಧ್ಯೆ ಸಂವಹನದ ವ್ಯವಸ್ಥೆ ಇತ್ತು. ಒಬ್ಬ ಭ್ರಷ್ಟ ಉದ್ಯೋಗಿ ಬಗ್ಗೆ ಎಲ್ಲಾ ಕಂಪನಿಗಳ ಎಚ್‌ಆರ್‌ಗಳಿಗೆ ಮಾಹಿತಿ ರವಾನೆಯಾಗುತ್ತಿತ್ತು. ಈಗ ಹೆಚ್‌ಆರ್‌ಗಳ ಮಧ್ಯೆ ಅಂಥದ್ದೊಂದು ಹೊಂದಾಣಿಕೆ ವ್ಯವಸ್ಥೆ ಇಲ್ಲ. ಈಗ ವಿಪ್ರೋ ಸಂಸ್ಥೆ ತನ್ನ ಉದ್ಯೋಗಿಗಳು ಇನ್ನೊಂದು ಉದ್ಯೋಗವನ್ನು ಪರ್ಯಾಯವಾಗಿ ಮಾಡುತ್ತಾ ಬಂದಿದ್ದನ್ನು ಹೇಗೆ ಪತ್ತೆ ಹಚ್ಚಿತು?

ಇಪಿಎಫ್‌ನಲ್ಲಿರುವ ಉದ್ಯೋಗಿಗಳ ಯುಎಎನ್ ನಂಬರ್ ಮೂಲಕ ಮೂನ್‌ಲೈಟರ್‌ಗಳ ಜಾಡು ಹಿಡಿಯುವಲ್ಲಿ ವಿಪ್ರೋ ಸಫಲವಾಯಿತು ಎನ್ನುಲಾಗುತ್ತಿದೆ. ಯೂನಿವರ್ಸಲ್ ಅಕೌಂಟ್ ನಂಬರ್ ಎಂಬುದು ಒಬ್ಬ ವ್ಯಕ್ತಿಯ ವಿವಿಧ ಪಿಎಫ್ ಖಾತೆಗಳನ್ನು ಒಂದು ಕಡೆ ನೆಲೆ ನಿಲ್ಲಿಸಲು ಮಾಡಲಾಗಿರುವ ವ್ಯವಸ್ಥೆ. ನೀವು ಕಂಪನಿಗಳನ್ನು ಬದಲಿಸಿದಾಗೆಲ್ಲಾ ಹೊಸ ಪಿಎಫ್ ಖಾತೆಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ, ಎಲ್ಲಾ ಪಿಎಫ್ ಖಾತೆಗಳನ್ನು ಒಂದೇ ಸೂರಿನಲ್ಲಿ ತರುವುದೇ ಯುಎಎನ್ ನಂಬರ್.

 

ಡಿಜಿಟಿಲ್ ಇಂಡಿಯಾ ವ್ಯವಸ್ಥೆಯ ಫಲ

ಷೇರು ಮಾರುಕಟ್ಟೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸಲಹೆ, ಮಾರ್ಗದರ್ಶನ ನೀಡುವ ರಾಜೀವ್ ಮೆಹ್ತಾ ಎಂಬುವವರು ಮೂನ್‌ಲೈಟರ್‌ಗಳು ಸಿಕ್ಕಿಬೀಳಲು ಭಾರತದ ಡಿಜಿಟಲ್ ವ್ಯವಸ್ಥೆ ಹೇಗೆ ನೆರವಾಗುತ್ತದೆ ಎಂಬುದನ್ನು ಟ್ವಿಟ್ಟರ್‌ನಲ್ಲಿ ವಿವರಿಸಿದ್ದಾರೆ. ಅದರಲ್ಲೂ ಪಿಎಫ್ ಕ್ಷೇತ್ರದಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಬಹಳ ಪರಿಣಾಮಕಾರಿ ಎನಿಸಿರುವುದನ್ನು ತಿಳಿಸಿರುವ ಅವರು, ಕದ್ದುಮುಚ್ಚಿ ಮೂನ್‌ಲೈಟಿಂಗ್ ಮಾಡಲು ಅಸಾಧ್ಯವಾಗಿದೆ ಎನ್ನುತ್ತಾರೆ. ಇದೊಂದು ರೀತಿ ಕಣ್ಮುಚ್ಚಿ ಹಾಲು ಕುಡಿಯುತ್ತಿದ್ದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಬೆಕ್ಕು ಭಾವಿಸುವಂತಿರುತ್ತದೆ ಮೂನ್‌ಲೈಟರ್ಸ್ ವಿಚಾರ.

ಹೇಗೆ ಸಾಧ್ಯ?

ಹೇಗೆ ಸಾಧ್ಯ?

ಒಂದು ಕಂಪನಿ ಉದ್ಯೋಗಿಯನ್ನು ನೇಮಕ ಮಾಡಿಕೊಂಡರೆ ಪಿಎಫ್ ಖಾತೆ ಸೃಷ್ಟಿಸಬೇಕಾಗುತ್ತದೆ. ಇದೇ ಉದ್ಯೋಗಿ ಏಕಕಾಲದಲ್ಲಿ ಬೇರೊಂದು ಕಂಪನಿಗೆ ನೇಮಕಗೊಂಡು ಕೆಲಸ ಮಾಡಿದಾಗಲೂ ಪಿಎಫ್ ನೀಡಲಾಗುತ್ತದೆ. ನೇಮಕಾತಿ ವೇಳೆ ಆಧಾರ್, ಪಾನ್ ನಂಬರ್ ಇತ್ಯಾದಿಯನ್ನು ಪಡೆಯಲಾಗುತ್ತದೆ. ಈ ದಾಖಲೆಗಳ ಆಧಾರದಲ್ಲಿ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ.

ಈಗ ಆಧಾರ್, ಪಾನ್ ಇತ್ಯಾದಿ ಎಲ್ಲವೂ ಲಿಂಕ್ ಆಗಿರುವುದರಿಂದ ಒಬ್ಬ ವ್ಯಕ್ತಿಯ ಹಲವು ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಏಕಕಾಲದಲ್ಲಿ ಎರಡು ಪಿಎಫ್ ಖಾತೆಗಳು ಇದ್ದರೆ ಗೊತ್ತಾಗಿ ಹೋಗುತ್ತದೆ. ಅಂಥ ಪರಿಸ್ಥಿತಿ ಬಂದರೆ ಇಪಿಎಫ್‌ಒ ಸಂಸ್ಥೆ ಕಂಪನಿಗಳಿಗೆ ಅಲರ್ಟ್ ಮಾಡಬಹುದು. ಇದೇ ರೀತಿಯಲ್ಲೇ ವಿಪ್ರೋಗೆ ಇಂಥದ್ದೊಂದು ಅಲರ್ಟ್ ಹೋಗಿದ್ದಿರಬಹುದು ಎಂಬುದು ರಾಜೀವ್ ಮೆಹ್ತಾ ಅನಿಸಿಕೆ.

ಅಂದಹಾಗೆ, ಒಂದಕ್ಕಿಂತ ಹೆಚ್ಚು ಪೂರ್ಣಾವಧಿ ಉದ್ಯೋಗ ಮಾಡುತ್ತಿದ್ದರೆ ಮಾತ್ರ ಈ ವ್ಯವಸ್ಥೆಯಲ್ಲಿ ಸಿಕ್ಕಿಬೀಳಲು ಸಾಧ್ಯ. ಒಂದು ಕಡೆ ಪೂರ್ಣಾವಧಿ ಉದ್ಯೋಗ ಮಾಡಿಕೊಂಡು ಬೇರೆ ಕಡೆ ಪಾರ್ಟ್ ಟೈಮ್ ಕೆಲಸ ಮಾಡಿದರೆ ಕಂಡುಹಿಡಿಯುವುದು ಕಷ್ಟವಾಗಬಹುದು. ಸಾಮಾನ್ಯವಾಗಿ ಪಾರ್ಟ್ ಟೈಮ್ ಉದ್ಯೋಗಿಗಳಿಗೆ ಪಿಎಫ್ ಅನ್ನು ನೀಡಲಾಗುವುದಿಲ್ಲ.

English summary

Know How IT Companies Caught Employees Moonlighting

The technological innovation in digital India is helping for great solutions for multiple problems. This technology is helping IT companies to find out employees moonlighting.
Story first published: Sunday, October 16, 2022, 13:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X