For Quick Alerts
ALLOW NOTIFICATIONS  
For Daily Alerts

Nishad Singh : ಕ್ರಿಪ್ಟೋ ರಾದ್ಧಾಂತ; ಎಫ್‌ಟಿಎಕ್ಸ್ ಕುಸಿತದಲ್ಲಿ ನಿಶಾದ್ ಸಿಂಗ್ ಹೆಸರು; ಯಾರೀತ?

|

ನವದೆಹಲಿ, ನ. 13: ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಯಮ ಸಂಸ್ಥೆಗಳಲ್ಲಿ ಒಂದೆನಿಸಿದ್ದ ಎಫ್‌ಟಿಎಕ್ಸ್ ಸಂಪೂರ್ಣ ಕುಸಿದುಹೋಗಿದೆ. ಕಂಪನಿಯ ಸ್ಥಾಪಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಸಿಇಒ ಸ್ಥಾನದಿಂದ ಕೆಳಗಿಳಿದಿರುವುದಲ್ಲದೇ ಅಮೆರಿಕದ ಕೋರ್ಟ್‌ನಲ್ಲಿ ದಿವಾಳಿ ರಕ್ಷಣೆಗೆ ಅರ್ಜಿ ಹಾಕಿದ್ದಾರೆ.

ಎಫ್‌ಟಿಎಕ್ಸ್ ಸಂಸ್ಥೆಯ ಸಿಇಒ ಆಗಿದ್ದ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಗ್ರಾಹಕರ ಕ್ರಿಪ್ಟೋ ಹಣವನ್ನು ರಹಸ್ಯವಾಗಿ ಸಾಗಿಸಿ ದುರ್ಬಳಕೆ ಮಾಡಿಕೊಂಡಿರುವುದು ತಿಳಿದುಬಂದಿದೆ. ವಿಶ್ವದ ನಂಬರ್ ಒನ್ ಕ್ರಿಪ್ಟೋ ಎಕ್ಸ್‌ಚೇಂಜ್ ಎನಿಸಿದ ಬೈನಾನ್ಸ್ ಸಂಸ್ಥೆ ಎಫ್‌ಟಿಎಕ್ಸ್ ಅನ್ನು ಖರೀದಿಸಲು ಹೋದಾಗ ಗೊತ್ತಾದ ಸಂಗತಿ. ಸುದ್ದಿಗಳ ಪ್ರಕಾರ ಸ್ಯಾಮ್ ಎಫ್‌ಟಿಎಕ್ಸ್‌ನ ಗ್ರಾಹಕರಿಗೆ ಸೇರಿದ 10 ಬಿಲಿಯನ್ ಡಾಲರ್ (80 ಸಾವಿರ ಕೋಟಿ ರೂಪಾಯಿ) ಮೌಲ್ಯದ ಕ್ರಿಪ್ಟೋ ಹಣವನ್ನು ತನ್ನ ಟ್ರೇಡಿಂಗ್ ಅಂಗಸಂಸ್ಥೆಯಾದ ಅಲಾಮೆಡಾ ರೀಸರ್ಚ್‌ಗೆ ರಹಸ್ಯವಾಗಿ ವರ್ಗಾವಣೆ ಮಾಡಿದ್ದರೆನ್ನಲಾಗಿದೆ.

ರಾತ್ರೋರಾತ್ರಿ ಶೇ. 94ರಷ್ಟು ಆಸ್ತಿ ಕಳೆದುಕೊಂಡ 30 ವರ್ಷದ ಬಿಲಿಯನೇರ್ರಾತ್ರೋರಾತ್ರಿ ಶೇ. 94ರಷ್ಟು ಆಸ್ತಿ ಕಳೆದುಕೊಂಡ 30 ವರ್ಷದ ಬಿಲಿಯನೇರ್

ನಿಶಾದ್ ಸಿಂಗ್ ಹೆಸರು

ನಿಶಾದ್ ಸಿಂಗ್ ಹೆಸರು

ಈ ಅಕ್ರಮ ಹಣ ವರ್ಗಾವಣೆಯ ವಿಚಾರವಾಗಿ ಎಫ್‌ಟಿಎಕ್ಸ್‌ನಲ್ಲಿ 30 ವರ್ಷದ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್‌ನ ನಿಕಟ ವಲಯದಲ್ಲಿರುವ ಇತರ ಕೆಲ ಉದ್ಯೋಗಿಗಳ ಮೇಲೆ ತನಿಖಾ ಸಂಸ್ಥೆಗಳ ಕಣ್ಣು ಬಿದ್ದಿದೆ. ಇಂಥ ಕೆಲವೇ ಮಂದಿಯಲ್ಲಿ ನಿಶಾದ್ ಸಿಂಗ್ ಕೂಡ ಒಬ್ಬರು.

ಭಾರತ ಮೂಲದ ನಿಶಾದ್ ಸಿಂಗ್ ಎಫ್‌ಟಿಎಕ್ಸ್‌ನಲ್ಲಿ 2019 ಏಪ್ರಿಲ್‌ನಿಂದಲೂ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿದ್ದಾರೆ. ಅದಕ್ಕೆ ಮುನ್ನ ಅವರು ಎಫ್‌ಟಿಎಕ್ಸ್‌ನ ಟ್ರೇಡಿಂಗ್ ಕಂಪನಿ ಅಲಾಮೆಡಾ ರೀಸರ್ಚ್‌ನಲ್ಲೂ ಇದೇ ಹುದ್ದೆಯಲ್ಲಿದ್ದರು. ಒಂದು ವರದಿ ಪ್ರಕಾರ ಎಸ್‌ಬಿಎಫ್ ಎಂದು ಹೆಸರುವಾಸಿಯಾಗಿರುವ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಮತ್ತು ನಿಶಾದ್ ಸಿಂಗ್ ಇಬ್ಬರೂ ಒಂದೇ ಮನೆಯಲ್ಲಿದ್ದರು.

 

ಹುಟ್ಟಿದ್ದು ಅಮೆರಿಕದಲ್ಲೇ

ಹುಟ್ಟಿದ್ದು ಅಮೆರಿಕದಲ್ಲೇ

ಭಾರತ ಮೂಲದವರಾದರೂ ನಿಶಾದ್ ಸಿಂಗ್ ಹುಟ್ಟಿದ್ದು ಓದಿದ್ದು ಎಲ್ಲವೂ ಅಮೆರಿಕದಲ್ಲೇ. ಕ್ಯಾಲಿಫೋರ್ನಿಯಾದ ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಎಂಜಿನಿಯರಿಂಗ್ ಮಾಡುವಾಗಲೇ ಫೇಸ್‌ಬುಕ್‌ನಲ್ಲಿ ಅವರು ಇಂಟರ್ನ್‌ಶಿಪ್ ಮಾಡಿದರು. ಪದವಿ ಪೂರ್ಣಗೊಳಿಸಿದ ಬಳಿಕ ಫೇಸ್‌ಬುಕ್‌ನಲ್ಲೇ ಸಾಫ್ಟ್‌ವೇರ್ ಎಂಜಿನಿಯರ್ ಆಗಿ 5 ತಿಂಗಳು ಕೆಲಸ ಮಾಡಿದರು.

ಬಳಿಕ ಅಲಾಮೆಡಾ ರೀಸರ್ಚ್ ಸೇರಿದರು. ಅಲ್ಲಿ 17 ತಿಂಗಳು ಎಂಜಿನಿಯರಿಂಗ್ ನಿರ್ದೇಶಕರಾಗಿ ಕೆಲಸ ಮಾಡಿದ ಬಳಿಕ 2019ರಲ್ಲಿ ಎಫ್‌ಟಿಎಕ್ಸ್‌ಗೆ ಸೇರಿದರು.

 

ಆಪ್ತ ವಲಯದಲ್ಲಿ ನಿಶಾದ್

ಆಪ್ತ ವಲಯದಲ್ಲಿ ನಿಶಾದ್

ಎಸ್‌ಬಿಎಫ್‌ನ ಸ್ನೇಹಿತರೂ ಆಗಿರುವ ನಿಶಾದ್ ಸಿಂಗ್ ಎಫ್‌ಟಿಎಕ್ಸ್‌ನ ತಾಂತ್ರಿಕ ಸಂಗತಿಯನ್ನು ಬಲ್ಲವರಾಗಿದ್ದರು. ಸಿಇಒ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್, ಸಿಟಿಒ ಗ್ಯಾರಿ ವಾಂಗ್ ಮತ್ತು ನಿಶಾದ್ ಸಿಂಗ್ ಈ ಮೂವರು ಕೂಡ ಎಫ್‌ಟಿಎಕ್ಸ್‌ನ ಕೋಡ್ ನಿಯಂತ್ರಣ ಹೊಂದಿದ್ದರೆನ್ನಲಾಗಿದೆ.

14 ವರ್ಷದ ನಸ್ರಿ ಕೋಟ್ಯಧಿಪತಿ; ಸಣ್ಣ ವಯಸ್ಸಿಗೆ ಶ್ರೀಮಂತನಾಗಿದ್ದೇಗೆ?14 ವರ್ಷದ ನಸ್ರಿ ಕೋಟ್ಯಧಿಪತಿ; ಸಣ್ಣ ವಯಸ್ಸಿಗೆ ಶ್ರೀಮಂತನಾಗಿದ್ದೇಗೆ?

ಅಲಾಮೆಡಾ ರೀಸರ್ಚ್ ಕಂಪನಿಯ ಸಿಇಒ ಕೆರೋಲಿನ್ ಎಲಿಸನ್ ತಮ್ಮ ಉದ್ಯೋಗಿಗಳೊಂದಿಗಿನ ಟೀಮ್ ಮೀಟಿಂಗ್ ವೇಳೆ ಎಫ್‌ಟಿಎಕ್ಸ್ ಹಣಕಾಸು ಅಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವುದು ಗೊತ್ತಾಗಿದೆ. ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್, ನಿಶಾದ್ ಸಿಂಗ್, ಗ್ಯಾರಿ ವ್ಯಾಂಗ್ ಮತ್ತು ತನಗೆ ಎಫ್‌ಟಿಎಕ್ಸ್‌ನಿಂದ ಗ್ರಾಹಕರ ಫಂಡ್ ಅಲಾಮೆಡಾಗೆ ವರ್ಗಾಯಿಸುವ ನಿರ್ಧಾರದ ಬಗ್ಗೆ ಗೊತ್ತಿತ್ತು ಎಂದು ಟೀಮ್ ಮೀಟಿಂಗ್ ವೇಳೆ ಎಲಿಸನ್ ಒಪ್ಪಿಕೊಂಡಿದ್ದಾರೆನ್ನಲಾಗಿದೆ.

ಎಫ್‌ಟಿಎಕ್ಸ್‌ನ ಈ ಭಾರೀ ಹಗರಣವು ಕ್ರಿಪ್ಟೋ ಜಗತ್ತನ್ನು ಅಲುಗಾಡಿಸಿದೆ. ಕ್ರಿಪ್ಟೋ ಬಗ್ಗೆ ಮೊದಲೇ ಅನುಮಾನ ಹೊಂದಿದ್ದ ಜನರಿಗೆ ಈಗ ವಿಶ್ವಾಸ ಸಂಪೂರ್ಣ ಹೋದಂತಾಗಿದೆ. ಇದೇ ವೇಳೆ, ಅಮೆರಿಕದ ಕೋರ್ಟ್‌ನಲ್ಲಿ ಬ್ಯಾಂಕ್ರಪ್ಟ್ಸಿ ಪ್ರೊಟೆಕ್ಷನ್‌ಗೆ ಅರ್ಜಿ ಹಾಕಿರುವ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್, ತಾನು ಹಾಗೂ ತನ್ನ ಸಂಸ್ಥೆ ಈ ಕೆಟ್ಟ ಸ್ಥಿತಿಯಿಂದ ಪಾರಾಗಿ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

English summary

Know Who Is Nishad Singh, Whose Name Propped Up As FTX Crashed In Cryptocurrency World

Indian-origin Nishad Singh is under scrutiny for financial practices that caused the stunning collapse of FTX, one of the world's largest cryptocurrency exchanges.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X