For Quick Alerts
ALLOW NOTIFICATIONS  
For Daily Alerts

ಭಾರತದ ಅತಿ ಉದ್ದದ ನದಿ ಸೇತುವೆ ನಿರ್ಮಾಣದ ಹರಾಜು ಗೆದ್ದ ಎಲ್ & ಟಿ

|

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗುವ ಭಾರತದ ಅತಿ ಉದ್ದದ ಬ್ರಿಡ್ಜ್‌ ಅನ್ನು ನಿರ್ಮಿಸಲು ಕರೆ ನೀಡಿದ್ದ ಹರಾಜನ್ನು ಎಲ್ & ಟಿ ಗೆದ್ದುಕೊಂಡಿದೆ. ಮೇಘಾಲಯದ ಫುಲ್ಬರಿಯೊಂದಿಗೆ ಸಂಪರ್ಕಿಸುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗುವ ರಸ್ತೆ ಸೇತುವೆಯನ್ನು ಎಲ್ & ಟಿ ನಿರ್ಮಾಣ ಮಾಡಲಿದೆ

19 ಕಿ.ಮೀ ಉದ್ದದ ಸೇತುವೆಯನ್ನು ನಿರ್ಮಿಸಲು ಎಲ್ & ಟಿ ಪಡೆದುಕೊಂಡಿರುವ ಈ ಯೋಜನೆಯ ಒಪ್ಪಂದದ ಮೌಲ್ಯಮಾಪನವು 2,500 ರಿಂದ 5,000 ಕೋಟಿ ರೂಪಾಯಿ ತಗುಲುತ್ತದೆ. ರಾಷ್ಟ್ರೀಯ ಹೆದ್ದಾರಿ 127-ಬಿ ಉದ್ದಕ್ಕೂ ನಿರ್ಮಿಸಲಾಗುವುದು ಮತ್ತು ಇದು 12.625 ಕಿ.ಮೀ ನ್ಯಾವಿಗೇಷನ್ ಸೇತುವೆಯಾಗಿದೆ. ಧುಬ್ರಿ ಬದಿಯಲ್ಲಿ 3.5 ಕಿ.ಮೀ ದೂರದಲ್ಲಿರುವ ಅಪ್ಯಾಕ್ಟ್ ವಯಾಡಕ್ಟ್ ಮತ್ತು ಫುಲ್ಬರಿ ಬದಿಯಲ್ಲಿ 2.2 ಕಿ.ಮೀ., ಎರಡೂ ಕಡೆಗಳಲ್ಲಿ ರಸ್ತೆಗಳು ಸಂಪರ್ಕ ಹೊಂದಿದೆ .

ಕಾರ್ಮಿಕರ ಧರಣಿ ಮುಂದುವರಿಕೆ; ಟೊಯೊಟಾದಲ್ಲಿ ಉತ್ಪಾದನಾ ಚಟುವಟಿಕೆ ಬಂದ್ಕಾರ್ಮಿಕರ ಧರಣಿ ಮುಂದುವರಿಕೆ; ಟೊಯೊಟಾದಲ್ಲಿ ಉತ್ಪಾದನಾ ಚಟುವಟಿಕೆ ಬಂದ್

ಈ ಸೇತುವೆಯು ಈಶಾನ್ಯ ರಾಜ್ಯಗಳ ಸಂಪರ್ಕವನ್ನು ದೇಶದ ಇತರ ಭಾಗಗಳೊಂದಿಗೆ ಸುಧಾರಿಸುವ ಪ್ರಯತ್ನವನ್ನು ಹೊಂದಿದೆ ಮತ್ತು ಎರಡು ರಾಜ್ಯಗಳ ನಡುವಿನ ಅಂತರವನ್ನು 250 ಕಿ.ಮೀ ಕಡಿಮೆ ಮಾಡುವ ಮೂಲಕ ಅಸ್ಸಾಂ ಮತ್ತು ಮೇಘಾಲಯದ ನಡುವೆ ಮಹತ್ವದ ಸಂಪರ್ಕವನ್ನು ಸ್ಥಾಪಿಸುತ್ತದೆ. ಪ್ರಸ್ತುತ ಧುಬ್ರಿ ಮತ್ತು ಫುಲ್ಬಾರಿ ನಡುವಿನ ಪ್ರಯಾಣವು ದೋಣಿ ಮೂಲಕ 2.5 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ.

ಭಾರತದ ಅತಿ ಉದ್ದದ ನದಿ ಸೇತುವೆ ನಿರ್ಮಾಣದ ಹರಾಜು ಗೆದ್ದ ಎಲ್ & ಟಿ

ಎಲ್ & ಟಿ ಜಾಗತಿಕವಾಗಿ ಅನೇಕ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಭಾರತೀಯ ತಂತ್ರಜ್ಞಾನ, ಎಂಜಿನಿಯರಿಂಗ್, ನಿರ್ಮಾಣ, ಉತ್ಪಾದನೆ ಮತ್ತು ಹಣಕಾಸು ಸೇವೆಗಳ ಸಂಘಟನೆಯಾಗಿದೆ.

English summary

L&T Bags Contract To Build India's Longest River Bridge

Larsen & Toubro said its construction arm has secured a 'large' contract to construct India's longest road bridge across river Brahmaputra connecting Dhubri in Assam to Phulbari in Meghalaya.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X