For Quick Alerts
ALLOW NOTIFICATIONS  
For Daily Alerts

3 ವರ್ಷದಲ್ಲಿ 4-6 ಸಾವಿರ ಉದ್ಯೋಗಿಗಳ ವಜಾಗೊಳಿಸಲು ಎಚ್‌ಪಿ ಸಜ್ಜು!

|

ಟ್ವಿಟ್ಟರ್, ಮೆಟಾ, ಜೊಮ್ಯಾಟೊ ಸೇರಿದಂತೆ ಹಲವಾರು ಟೆಕ್ ಸಂಸ್ಥೆಗಳು ಉದ್ಯೋಗ ಕಡಿತಮಾಡಲು ಮುಂದಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಸಂಸ್ಥೆಯಾದ ಎಚ್‌ಪಿ ಮುಂದಿನ ಮೂರು ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋತ ಕಡಿತಮಾಡಲು ಸಜ್ಜಾಗಿದೆ. ಪ್ರಮುಖವಾಗಿ ಸಂಸ್ಥೆಯಲ್ಲಿ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಎಚ್‌ಪಿ ಈ ಕ್ರಮಕ್ಕೆ ಮುಂದಾಗಿದೆ.

ಮುಂದಿನ ಮೂರು ವರ್ಷದಲ್ಲಿ ಸುಮಾರು 4ರಿಂದ 6 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ ಎಂದು ಎಚ್‌ಪಿ ಮಂಗಳವಾರ ಘೋಷಣೆ ಮಾಡಿದೆ. ಹಣಕಾಸು ವರ್ಷ 2023ರಲ್ಲಿ Future Ready Transformation ಯೋಜನೆಗಾಗಿ ಎಚ್‌ಪಿ ಈ ಉದ್ಯೋಗ ಕಡಿತಕ್ಕೆ ಸಿದ್ಧವಾಗಿದೆ.

ಟ್ವಿಟ್ಟರ್, ಮೆಟಾ ಹಾದಿಯಲ್ಲಿ ಗೂಗಲ್: 10,000 ಉದ್ಯೋಗಿಗಳ ವಜಾಗೊಳಿಸಲು ಸಜ್ಜುಟ್ವಿಟ್ಟರ್, ಮೆಟಾ ಹಾದಿಯಲ್ಲಿ ಗೂಗಲ್: 10,000 ಉದ್ಯೋಗಿಗಳ ವಜಾಗೊಳಿಸಲು ಸಜ್ಜು

ಇನ್ನು ಗೂಗಲ್ ಕೂಡಾ ಸಂಸ್ಥೆಯ ಸೇವೆಯಲ್ಲಿನ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಉತ್ತಮ ಕಾರ್ಯನಿರ್ವಹಣೆ ಮಾಡದ 10 ಸಾವಿರ ಉದ್ಯೋಗಿಗಳನ್ನು ವಜಾಮಾಡುವ ಸಿದ್ಧತೆಯಲ್ಲಿದೆ. ಎಚ್‌ಪಿ ಕೂಡಾ ಇದೇ ಹಾದಿಯಲ್ಲಿದೆ. ಹಾಗಾದರೆ ಏತಕ್ಕಾಗಿ ಎಚ್‌ಪಿ ಆದಾಯ ಕುಸಿತವಾಗಿದೆಯೇ, ನಷ್ಟದಲ್ಲಿದೆಯೇ ಎಂಬ ಮೊದಲಾದ ಮಾಹಿತಿಯನ್ನು ತಿಳಿಯೋಣ ಮುಂದೆ ಓದಿ...

 ಖರ್ಚಿನ ಲೆಕ್ಕಾಚಾರ ಹೀಗಿದೆ

ಖರ್ಚಿನ ಲೆಕ್ಕಾಚಾರ ಹೀಗಿದೆ

"ಸಂಸ್ಥೆಯ ಈ ಉದ್ಯೋಗ ಕಡಿತ ಕ್ರಮದಿಂದಾಗಿ ಹಣಕಾಸು ವರ್ಷ 2025ರ ಒಳಗಾಗಿ ಸರಿಸುಮಾರು 1.4 ಬಿಲಿಯನ್ ಡಾಲರ್ ಮೊತ್ತವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. 2023ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳಿಗೆ, ಇತರೆ ಕಾರ್ಯಗಳಿಗೆ 1.0 ಬಿಲಿಯನ್ ಡಾಲರ ಸೇರಿದಂತೆ ಸುಮಾರು 0.6 ಬಿಲಿಯನ್ ಡಾಲರ್ ಖರ್ಚಾಗುತ್ತದೆ. 2024 ಹಾಗೂ 2025ರಲ್ಲಿಯೂ ಸರಿಸುಮಾರು ಇಷ್ಟೇ ಖರ್ಚಾಗುತ್ತದೆ," ಎಂದು ಸಂಸ್ಥೆಯು ಅಕ್ಟೋಬರ್‌ 31ಕ್ಕೆ ಕೊನೆಯಾಗುವ ತ್ರೈಮಾಸಿಕದಲ್ಲಿ ತಿಳಿಸಿದೆ.

 ಎಚ್‌ಪಿಯಲ್ಲಿ ಉದ್ಯೋಗ ಕಡಿತ ಹೇಗೆ ಸಾಗಿದೆ?

ಎಚ್‌ಪಿಯಲ್ಲಿ ಉದ್ಯೋಗ ಕಡಿತ ಹೇಗೆ ಸಾಗಿದೆ?

2021ರ ವೇಳೆಗೆ ಎಚ್‌ಪಿಯಲ್ಲಿ ಸುಮಾರು 51,000 ಉದ್ಯೋಗಿಗಳು ಇದ್ದರು, ಆದರೆ ಅದಕ್ಕೂ ಮುಂದಿನ ವರ್ಷಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ. ಅಂದರೆ 2020ರಲ್ಲಿ ಎಚ್‌ಪಿಯಲ್ಲಿ ಸುಮಾರು 53,000 ಉದ್ಯೋಗಿಗಳು ಇದ್ದರು. ಆದರೆ ಒಂದೇ ವರ್ಷದಲ್ಲಿ 2 ಸಾವಿರ ಉದ್ಯೋಗ ಕಡಿತವಾಗಿದೆ. ಇನ್ನು 2019ರಲ್ಲಿ ಎಚ್‌ಪಿ ಸುಮಾರು 7,000ದಿಂದ 9,000 ಉದ್ಯೋಗ ಕಡಿತ ಮಾಡಲಿದೆ ಎಂದು ಹೇಳಿತ್ತು.

 ಉದ್ಯೋಗ ಕಡಿತ ಏತಕ್ಕಾಗಿ?

ಉದ್ಯೋಗ ಕಡಿತ ಏತಕ್ಕಾಗಿ?

ಸಂಸ್ಥೆಯ ಕಂಪ್ಯೂಟರ್‌ ಮಾರಾಟದಲ್ಲಿ ಇಳಿಕೆಯಾಗುತ್ತಿರುವ ಕಾರಣದಿಂದಾಗಿ ಈಗ ಉದ್ಯೋಗ ಕಡಿತ ಮಾಡಲು ಸಂಸ್ಥೆಯು ಮುಂದಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಎಚ್‌ಪಿ ಕಂಪ್ಯೂಟರ್‌ಗೆ ಅಧಿಕ ಬೇಡಿಕೆ ಉಂಟಾಗಿತ್ತು. ಜನರು ವರ್ಕ್ ಫ್ರಮ್ ಹೋಮ್ ಮಾಡುವ ನಿಟ್ಟಿನಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಿದ್ದರು. ಆದರೆ ಪ್ರಸ್ತುತ ಲ್ಯಾಪ್‌ಟಾಪ್ ಖರೀದಿ ಭಾರೀ ಇಳಿಕೆಯಾಗಿದೆ. ಈ ನಡುವೆ ಸಂಸ್ಥೆಯು ಉದ್ಯೋಗ ಕಡಿತಕ್ಕೆ ಮುಂದಾಗಿದೆ.

 ನಷ್ಟ ಎಷ್ಟಾಗಿದೆ?

ನಷ್ಟ ಎಷ್ಟಾಗಿದೆ?

ಅಕ್ಟೋಬರ್ 2021ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಎಚ್‌ಪಿ ಆದಾಯವು ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 0.8ರಷ್ಟು ಕುಸಿದು 14.80 ಬಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ತಿಳಿಸಿದೆ. ಇನ್ನು ಪಿಸಿಗಳ ಖರೀದಿಯಲ್ಲಿ ಶೇಕಡ 13ರಷ್ಟು ಕುಸಿತ ಉಂಟಾಗಿದ್ದು, 10.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಗ್ರಾಹಕರಿಂದ ಬರುವ ಆದಾಯವುದು ಶೇಕಡ 25ರಷ್ಟು ಇಳಿದಿದೆ.

English summary

Layoff Wagon: HP to Fire 4,000-6,000 Employees Globally Over Next Three Years

Computer maker HP Inc. is the latest to join the bandwagon of tech companies going for mass layoffs to cut costs ahead of an impending recession.
Story first published: Wednesday, November 23, 2022, 13:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X