For Quick Alerts
ALLOW NOTIFICATIONS  
For Daily Alerts

Goldman Sachs Layoffs: ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಈ ವಾರದಲ್ಲೇ 3,200 ಉದ್ಯೋಗ ಕಡಿತ

|

ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷ ಆರಂಭವಾದ ಉದ್ಯೋಗ ಕಡಿತವೂ ಈ ವರ್ಷವೂ ಕೂಡಾ ಮುಂದುವರಿದಿದೆ. ಈ ನಡುವೆ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚ್ಸ್ ಕೂಡಾ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲಿದೆ. ಈ ಹಿಂದೆಯೇ ಈ ಬಗ್ಗೆ ಸಂಸ್ಥೆಯು ಮಾಹಿತಿ ನೀಡಿದೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ವಾರದಲ್ಲೇ ಸುಮಾರು 3200 ಉದ್ಯೋಗ ಕಡಿತ ಮಾಡುವ ನಿರೀಕ್ಷೆಯಿದೆ.

ಈ ವಾರದ ಮಧ್ಯದಲ್ಲಿ ಸಂಸ್ಥೆಯು ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭ ಮಾಡುವ ಸಾಧ್ಯತೆಯಿದೆ. ಆದರೆ 3200ಕ್ಕಿಂತ ಅಧಿಕ ಮಂದಿಯನ್ನು ಸಂಸ್ಥೆಯಿಂದ ತೆಗೆದುಹಾಕುವುದಿಲ್ಲ ಎಂದು ಈ ಬಗ್ಗೆ ಮಾಹಿತಿ ತಿಳಿದಿರುವವರು ಹೇಳಿದ್ದಾರೆ. ಪ್ರಮುಖವಾಗಿ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತ ಮಾಡಲೆಂದು ಉದ್ಯೋಗ ಕಡಿತವನ್ನು ಮಾಡುತ್ತಿದೆ.

Goldman Sachs Layoffs : ಈ ತಿಂಗಳೇ ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಉದ್ಯೋಗ ಕಡಿತ, ಸಿಇಒ ಸ್ಪಷ್ಟಣೆ!Goldman Sachs Layoffs : ಈ ತಿಂಗಳೇ ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಉದ್ಯೋಗ ಕಡಿತ, ಸಿಇಒ ಸ್ಪಷ್ಟಣೆ!

ಆದರೆ ಈ ಯುಎಸ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆಯಲ್ಲಿನ ಉದ್ಯೋಗ ಕಡಿತದ ಬಗ್ಗೆ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಈ ತಿಂಗಳಲ್ಲೇ ಸಂಸ್ಥೆಯು ಉದ್ಯೋಗ ಕಡಿತವನ್ನು ಮಾಡಿದರೂ, ಈ ವರ್ಷದಲ್ಲಿ ಸಂಸ್ಥೆಗೆ ಹೊಸ ಉದ್ಯೋಗಿಗಳ ಸೇರ್ಪಡೆ ಯೋಜನೆಯು ಹಾಗೆಯೇ ಇದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.

 ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ

ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ

ಸಂಸ್ಥೆಯ ಸಿಇಒ ಡೇವಿಡ್ ಸೋಲೋಮನ್ ಅಡಿಯಲ್ಲಿ ಉದ್ಯೋಗಿಗಳ ಸಂಖ್ಯೆಯು ಸುಮಾರು ಶೇಕಡ 34ರಷ್ಟು ಹೆಚ್ಚಳವಾಗಿದೆ. ಇದು 2018ರಿಂದ ಈವರಗಿನ ಲೆಕ್ಕಾಚಾರವಾಗಿದೆ. ಸೆಪ್ಟೆಂಬರ್ 30ರ ಡೇಟಾ ಪ್ರಕಾರ 2018ರ ಬಳಿಕ ಈವರೆಗೆ ಸುಮಾರು 49000 ಉದ್ಯೋಗಿಗಳನ್ನು ಸಂಸ್ಥೆಗೆ ಸೇರ್ಪಡೆ ಮಾಡಲಾಗಿದೆ. ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಗುಣಮಟ್ಟದ ಆಧಾರದಲ್ಲಿ ವಾರ್ಷಿಕವಾಗಿ ಮಾಡಲಾಗುವ ಉದ್ಯೋಗ ಕಡಿತವನ್ನು ಮಾಡದ ಕಾರಣದಿಂದಾಗಿ ಈಗ ಉದ್ಯೋಗ ಕಡಿತ ಸಂಖ್ಯೆ ಮತ್ತಷ್ಟು ಅಧಿಕವಾಗಬಹುದು ಎಂದು ಕೂಡಾ ವರದಿ ಹೇಳಿದೆ.

 ಈ ಸಂಸ್ಥೆಯ ಉದ್ಯೋಗ ಕಡಿತ ಯಾಕಿಷ್ಟು ಚರ್ಚೆ?

ಈ ಸಂಸ್ಥೆಯ ಉದ್ಯೋಗ ಕಡಿತ ಯಾಕಿಷ್ಟು ಚರ್ಚೆ?

ಗೋಲ್ಡ್‌ಮ್ಯಾನ್ ಸಾಚ್ಸ್ ಯುಎಸ್‌ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆಯಾಗಿದೆ. ಜಾಗತಿಕವಾಗಿ ಯಾವುದೇ ಆರ್ಥಿಕ ಬದಲಾವಣೆಗಳು ಉಂಟಾದರೆ ಈ ಸಂಸ್ಥೆಯು ಆ ಬಗ್ಗೆ ಅಭಿಪ್ರಾಯ, ಸಲಹೆಯನ್ನು ನೀಡುತ್ತದೆ. ಈ ಸಂಸ್ಥೆಯಲ್ಲಿಯೇ ಉದ್ಯೋಗ ಕಡಿತ ನಡೆಯುತ್ತಿರುವುದು ಪ್ರಮುಖವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಗೋಲ್ಡ್‌ಮ್ಯಾನ್ ಸಾಚ್ಸ್ ನವೆಂಬರ್‌ನಲ್ಲಿ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡಿತ್ತು. ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ಹೇಳಿತ್ತು. 2023ರ ಕ್ಯಾಲೆಂಡರ್ ವರ್ಷದಲ್ಲಿ ಶೇ. 6.9ರಷ್ಟು ಜಿಡಿಪಿ ವೃದ್ಧಿಸಬಹುದು ಎಂದು ಈ ಹಿಂದಿನ ವರದಿಯಲ್ಲಿ ಅಂದಾಜಿಸಿದ್ದ ಗೋಲ್ಡ್‌ಮ್ಯಾನ್ ಸಾಚ್ಸ್ ಈಗ ತನ್ನ ನಿರೀಕ್ಷೆಯನ್ನು ತಗ್ಗಿಸಿದೆ. ಮುಂದಿನ ವರ್ಷ ಭಾರತದ ಜಿಡಿಪಿ ಶೇ. 5.9ರಷ್ಟು ಇರಬಹುದು ಎಂದು ಹೇಳಿದೆ.

 ಪತ್ರದ ಮೂಲಕ ಮಾಹಿತಿ

ಪತ್ರದ ಮೂಲಕ ಮಾಹಿತಿ

ಜನವರಿ ತಿಂಗಳಿನಲ್ಲಿ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಈ ಹಿಂದೆ ಸಂಸ್ಥೆಯ ಸಿಇಒ ಡೇವಿಡ್ ಸೋಲೋಮನ್ ತಿಳಿಸಿದ್ದಾರೆ. ತಮ್ಮ ಉದ್ಯೋಗಿಗಳಿಗೆ ಈ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. "ನಾವು ಅತೀ ಜಾಗರೂಕರಾಗಿ ಪರಿಶೀಲನೆಯನ್ನು ಮಾಡುತ್ತೇವೆ. ಈಗಲೂ ಚರ್ಚೆಗಳು ಮುಂದುವರಿದಿದೆ. ಜನವರಿಯ ಮೊದಲಾರ್ಧದಲ್ಲಿಯೇ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಆರಂಭವಾಗಬಹುದು," ಎಂದು ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯ ಸಿಇಒ ಉದ್ಯೋಗಿಗಳಿಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. "ಹಣಕಾಸು ಸ್ಥಿತಿಯನ್ನು ಬಿಗಿಯಾಗಿರುವುದು ಮತ್ತು ಆರ್ಥಿಕ ಚಟುವಟಿಕೆಯು ಮಂದಗತಿಯಲ್ಲಿ ಸಾಗುತ್ತಿರುವುದು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. ವ್ಯಾಪಾರಕ್ಕೆ ಇಲ್ಲಿ ಹಲವಾರು ಅಂಶಗಳು ಪ್ರಭಾವ ಬೀರುತ್ತಿದೆ. ಹಣಕಾಸು ಸ್ಥಿತಿ ಬಿಕ್ಕಟ್ಟು, ಆರ್ಥಿಕ ಚಟುವಟಿಕೆ ಕುಸಿತವು ಕೂಡಾ ವ್ಯಾಪಾರ ವಲಯದ ಮೇಲೆ ಪ್ರಭಾವ ಬೀರುತ್ತದೆ," ಎಂದು ಕೂಡಾ ಪತ್ರದಲ್ಲಿ ಬರೆಯಲಾಗಿದೆ.

English summary

Layoffs in Goldman Sachs: Goldman Sachs To Cut About 3,200 Jobs This Week

layoffs Wagon in 2023: Goldman Sachs had announced in December that it would begin with layoffs soon. Goldman To Cut About 3,200 Jobs This Week After Cost Review.
Story first published: Monday, January 9, 2023, 10:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X