For Quick Alerts
ALLOW NOTIFICATIONS  
For Daily Alerts

Goldman Sachs Layoffs : ಈ ತಿಂಗಳೇ ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಉದ್ಯೋಗ ಕಡಿತ, ಸಿಇಒ ಸ್ಪಷ್ಟಣೆ!

|

ಕಳೆದ ವರ್ಷದಿಂದ ಆರಂಭವಾಗಿ ಉದ್ಯೋಗ ಕಡಿತವೂ ಈ ಹೊಸ ವರ್ಷದಲ್ಲಿಯೂ ಮುಂದುವರಿದಿದೆ. ಸ್ವಿಗ್ಗಿ, ಟೆಕ್ ಸಂಸ್ಥೆಗಳು ವೆಚ್ಚ ಇಳಿಕೆ ಮಾಡುವ ನೆಪದಲ್ಲಿ ಮತ್ತಷ್ಟು ಉದ್ಯೋಗ ಕಡಿತ ಮಾಡಬೇಕಾದ ಸ್ಥಿತಿಗೆ ಬಂದು ತಲುಪಿದೆ. ಈ ನಡುವೆ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚ್ಸ್ ಕೂಡಾ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲು ಮುಂದಾಗಿದೆ.

 

ಹೌದು, ಡಿಸೆಂಬರ್‌ನಲ್ಲಿ ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ. ಗೋಲ್ಡ್‌ಮ್ಯಾನ್ ಸಾಚ್ಸ್ ಸಿಇಒ ಡೇವಿಡ್ ಸೋಲೋಮನ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಜನವರಿ 2023ರಿಂದ ಸಂಸ್ಥೆಯಲ್ಲಿನ ತಲೆಯ ಲೆಕ್ಕಾಚಾರವು ಕಡಿಮೆಯಾಗಲಿದೆ ಎಂದು ಸಿಇಒ ಡೇವಿಡ್ ಸೋಲೋಮನ್ ತಿಳಿಸಿದ್ದಾರೆ.

ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಗೋಲ್ಡ್‌ಮ್ಯಾನ್ ಸಾಚ್ಸ್ ಅಂದಾಜು ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಗೋಲ್ಡ್‌ಮ್ಯಾನ್ ಸಾಚ್ಸ್ ಅಂದಾಜು

ವರ್ಷಾಂತ್ಯದಲ್ಲಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಪತ್ರದಲ್ಲಿ ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯ ಸಿಇಒ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜನವರಿ ತಿಂಗಳಿನಲ್ಲಿ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಸ್ವಿಗ್ಗಿಯು ನಷ್ಟದ ಕಾರಣ ಉದ್ಯೋಗ ಕಡಿತ ಮುಂದುವರಿಸುವ ಬಗ್ಗೆ ಸುದ್ದಿಗಳಾಗಿದೆ. ಈ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆಯಲ್ಲಿಯೂ ಉದ್ಯೋಗ ಕಡಿತ ಮಾಡಲಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಪತ್ರದಲ್ಲಿ ಬೇರೆ ಏನಿದೆ?

ಪತ್ರದಲ್ಲಿ ಬೇರೆ ಏನಿದೆ?

"ನಾವು ಅತೀ ಜಾಗರೂಕರಾಗಿ ಪರಿಶೀಲನೆಯನ್ನು ಮಾಡುತ್ತೇವೆ. ಈಗಲೂ ಚರ್ಚೆಗಳು ಮುಂದುವರಿದಿದೆ. ಜನವರಿಯ ಮೊದಲಾರ್ಧದಲ್ಲಿಯೇ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಆರಂಭವಾಗಬಹುದು," ಎಂದು ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯ ಸಿಇಒ ಉದ್ಯೋಗಿಗಳಿಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. "ಹಣಕಾಸು ಸ್ಥಿತಿಯನ್ನು ಬಿಗಿಯಾಗಿರುವುದು ಮತ್ತು ಆರ್ಥಿಕ ಚಟುವಟಿಕೆಯು ಮಂದಗತಿಯಲ್ಲಿ ಸಾಗುತ್ತಿರುವುದು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. ವ್ಯಾಪಾರಕ್ಕೆ ಇಲ್ಲಿ ಹಲವಾರು ಅಂಶಗಳು ಪ್ರಭಾವ ಬೀರುತ್ತಿದೆ. ಹಣಕಾಸು ಸ್ಥಿತಿ ಬಿಕ್ಕಟ್ಟು, ಆರ್ಥಿಕ ಚಟುವಟಿಕೆ ಕುಸಿತವು ಕೂಡಾ ವ್ಯಾಪಾರ ವಲಯದ ಮೇಲೆ ಪ್ರಭಾವ ಬೀರುತ್ತದೆ," ಎಂದು ಕೂಡಾ ಪತ್ರದಲ್ಲಿ ಬರೆಯಲಾಗಿದೆ.

ಬೇರೆ ಸಂಸ್ಥೆಗಳಲ್ಲಿಯೂ ಉದ್ಯೋಗ ಕಡಿತ

ಬೇರೆ ಸಂಸ್ಥೆಗಳಲ್ಲಿಯೂ ಉದ್ಯೋಗ ಕಡಿತ

ಟೆಕ್ ಇಂಡಸ್ಟ್ರೀಗೆ ಕೆಲವು ತಿಂಗಳುಗಳ ಹಿಂದೆ ಈ ಉದ್ಯೋಗ ಕಡಿತ ಅಲೆಯು ಅಪ್ಪಳಿಸಿದ ಬಳಿಕ ಪ್ರಸ್ತುತ ದೇಶದ ಬಹುತೇಕ ಎಲ್ಲ ವಲಯಕ್ಕೂ ಪಸರಿಸಿದೆ. ಪ್ರಮುಖವಾಗಿ ಹೆಚ್ಚಾಗಿರುವ ಹಣದುಬ್ಬರ ಹಾಗೂ ಭವಿಷ್ಯದಲ್ಲಿನ ಹಿಂಜರಿತದ ಆತಂಕದಿಂದಾಗಿ ಹಲವಾರು ಸಂಸ್ಥೆಗಳು ಈಗಾಗಲೇ ವೆಚ್ಚ ಕಡಿತ ಮಾಡುವೆಡೆ ಗಮನಹರಿಸುತ್ತಿದೆ. ವೆಚ್ಚ ಕಡಿತದ ನೆಪದಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ಹಿಂದೆ ಗೋಲ್ಡ್‌ಮ್ಯಾನ್ ಸಾಚ್ಸ್ ಪ್ರತಿಯಾದ, ಸ್ಪರ್ಧಾತ್ಪಕ ಸಂಸ್ಥೆಯಾದ ಮೋರ್ಗನ್ ಸ್ಟಾನ್ಲೀ ಸುಮಾರು 1,600 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಡಿಸೆಂಬರ್‌ನಲ್ಲಿ ಈ ಕಾರ್ಯವನ್ನು ಮಾಡಲಾಗಿದೆ. ಗೋಲ್ಡ್‌ಮ್ಯಾನ್ ಸಾಚ್ಸ್ ಸುಮಾರು 500ರಷ್ಟಾದರೂ ಜನರನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರ ಮಾಡಿತ್ತು. ಆದರೆ ಬ್ಲ್ಯೂಬರ್ಗ್ ವರದಿ ಪ್ರಕಾರ 400ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.

ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತ
 

ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತ

ನವೆಂಬರ್‌ನಲ್ಲಿ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ಸಂಸ್ಥೆಯು ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ಹೇಳಿತ್ತು. ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚ್ಸ್ ಅಭಿಪ್ರಾಯಪಟ್ಟಿದೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ಶೇ. 6.9ರಷ್ಟು ಜಿಡಿಪಿ ವೃದ್ಧಿಸಬಹುದು ಎಂದು ಈ ಹಿಂದಿನ ವರದಿಯಲ್ಲಿ ಅಂದಾಜಿಸಿದ್ದ ಗೋಲ್ಡ್‌ಮ್ಯಾನ್ ಸಾಚ್ಸ್ ಈಗ ತನ್ನ ನಿರೀಕ್ಷೆಯನ್ನು ತಗ್ಗಿಸಿದೆ. ಮುಂದಿನ ವರ್ಷ ಭಾರತದ ಜಿಡಿಪಿ ಶೇ. 5.9ರಷ್ಟು ಇರಬಹುದು ಎಂದು ಹೇಳಿದೆ.

English summary

Layoffs Wagon in 2023: Goldman Sachs to begin Layoffs in January, CEO confirms

layoffs Wagon in 2023: Goldman Sachs had announced in December that it would begin with layoffs soon. Goldman Sachs to begin Layoffs in January, CEO confirms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X