ಭಾರತದಲ್ಲಿ ಈಗ ಆರ್ಥಿಕ ಕುಸಿತದಂಥ ಸ್ಥಿತಿಯೇ: ಸುಭಾಷ್ ಗರ್ಗ್

1991ರ ಆರ್ಥಿಕ ಸುಧಾರಣೆ ನಂತರ ತ್ರೈಮಾಸಿಕ ಬೆಳವಣಿಗೆ ದರವು ಭಾರತದಲ್ಲಿ ಅಪರೂಪಕ್ಕೆ 5 ಪರ್ಸೆಂಟ್ ಗಿಂತ ಕಡಿಮೆಯಾಗಿದೆ. ಭಾರತದಂಥ ಆರ್ಥಿಕತೆಗೆ ಪರ್ಸೆಂಟ್ ಗಿಂತ ಕಡಿಮೆ ಬೆಳವಣಿಗೆ ದರ ಅಂದರೆ, ಇದು ಹಿಂಜರಿತ ಅನ್ನೋದಕ್ಕಿಂತ ಆರ್ಥಿಕ ಕುಸಿತ ಇದ್ದಂತೆ ಎಂದು ಮಾಜಿ ಆರ್ಥಿಕ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಜಿಡಿಪಿ ಬೆಳವಣಿಗೆ ದರ ನಿಧಾನವಾಗಿರಬಹುದು. ಆದರೆ ದೇಶವು ಆರ್ಥಿಕ ಕುಸಿತದ ಹಂತವನ್ನು ಪ್ರವೇಶಿಸಿಲ್ಲ ಎಂದು ಹೇಳಿದ್ದರು.

ಆರ್ಥಶಾಸ್ತ್ರದ ವ್ಯಾಖ್ಯಾನದಲ್ಲಿ ಹೇಳಿದಂತೆ ಭಾರತವು ಆರ್ಥಿಕ ಕುಸಿತದ ಸನ್ನಿವೇಶದಲ್ಲಿ ಇಲ್ಲದಿರಬಹುದು. ಅಂಥ ಸ್ಥಿತಿ ಏರ್ಪಟ್ಟಿದ್ದರೆ ಜಿಡಿಪಿ 0-3 ಪರ್ಸೆಂಟ್ ಬೆಳವಣಿಗೆ ಇರುತ್ತದೆ. ಆದರೆ ಭಾರತದಂಥ ಆರ್ಥಿಕತೆಯು ವಾರ್ಷಿಕ 7.5 ಪರ್ಸೆಂಟ್ ಗೂ ಹೆಚ್ಚು 20 ವರ್ಷಗಳ ಕಾಲ ಪ್ರಗತಿ ದಾಖಲಿಸಿ, ಒಂದಿಡೀ ವರ್ಷದ ಬೆಳವಣಿಗೆ 5 ಪರ್ಸೆಂಟ್ ಗಿಂತ ಕಡಿಮೆ ಇರುವುದು ಆರ್ಥಿಕ ಕುಸಿತದಂತೆಯೇ ಎಂದು ಗರ್ಗ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಈಗ ಆರ್ಥಿಕ ಕುಸಿತದಂಥ ಸ್ಥಿತಿಯೇ: ಸುಭಾಷ್ ಗರ್ಗ್

ಆದರೆ, ಭಾರತದ ಜಿಡಿಪಿ ಬೆಳವಣಿಗೆ ದರ ಇನ್ನೂ ನೆಲ ಕಚ್ಚಿಲ್ಲ. ಆದರೆ ಮೂರನೇ ತ್ರೈಮಾಸಿಕಕ್ಕೂ ಜಿಡಿಪಿ ದರ ಕುಸಿತ ಕಾಣುವ ಸಾಧ್ಯತೆಗಳು ನಿಚ್ಚಳ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+