For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒ: ಪ್ರತಿ ಷೇರಿಗೆ 400 ರಿಂದ 600 ರೂಪಾಯಿ ನಿಗದಿ ಸಾಧ್ಯತೆ

|

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿಯ ಐಪಿಒ ತರುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಎಲ್‌ಐಸಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರತಿ ಷೇರಿಗೆ 400 ರಿಂದ 600 ರೂ.ಗಳಷ್ಟಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡುವ ಮೂಲಕ 2.10 ಲಕ್ಷ ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ. ಈ ಪೈಕಿ 90,000 ಕೋಟಿ ರುಪಾಯಿಗಳನ್ನು ಎಲ್ಐಸಿ ಪಟ್ಟಿ ಮತ್ತು ಐಡಿಬಿಐ ಬ್ಯಾಂಕ್ ಹೂಡಿಕೆ ಮೂಲಕ ಪೂರೈಸುವ ನಿರೀಕ್ಷೆಯಿದೆ.

ಎಲ್‌ಐಸಿ ಐಪಿಒ: ಪ್ರತಿ ಷೇರಿಗೆ 400 ರಿಂದ 600 ರೂಪಾಯಿ ನಿಗದಿ ಸಾಧ್ಯತೆ

ಎಲ್ಐಸಿ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿದ್ದು, ಇದು 77.61 ಪರ್ಸೆಂಟ್‌ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇದು ಒಟ್ಟು ಪ್ರೀಮಿಯಂ ಆದಾಯದ 70 ಪರ್ಸೆಂಟ್‌ಕ್ಕಿಂತ ಹೆಚ್ಚು. ಬಂಡವಾಳದ ಮೂಲವನ್ನು ಈಗಿರುವ 100 ಕೋಟಿ ರೂ.ಗಳಿಂದ 25 ಸಾವಿರ ಕೋಟಿಗೆ ಹೆಚ್ಚಿಸಲು ಸರ್ಕಾರ ಈಗಾಗಲೇ ಪ್ರಸ್ತಾಪಿಸಿದೆ. 25,000 ಕೋಟಿ ರೂ. ಪ್ರಸ್ತುತ ಕಡಿಮೆ ಬಂಡವಾಳದ ಆಧಾರದಲ್ಲಿ ಪಟ್ಟಿ ಮಾಡಲು ಅನುಕೂಲವಾಗುವಂತೆ ಐಪಿಒ ಬೆಲೆ ನಿಗದಿಪಡಿಸಲಿದ್ದು, ಪ್ರತಿ ಷೇರಿನ ಆಧಾರದ ಮೇಲೆ ಬಂಡವಾಳ ನಿಗದಿಯಾಗುತ್ತದೆ.

ಎಲ್ಐಸಿ ಐಪಿಒ ವಿತರಣೆಯ ಗಾತ್ರದ ಶೇಕಡಾ 10 ರಷ್ಟು ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಡುವ ಸಾಧ್ಯತೆ ಇದೆ.

ಹೊಸ ಅಧಿಕೃತ ಷೇರು ಬಂಡವಾಳವನ್ನು 25,000 ಕೋಟಿ ರೂಪಾಯಿಗಳಾಗಿ ಯೋಜಿಸಲಾಗಿದೆ. ಇದನ್ನು 1956 ರ ಎಲ್ಐಸಿ ಕಾಯ್ದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳ ಪ್ರಕಾರ, ತಲಾ 10 ರೂ.ಗಳ 2,500 ಕೋಟಿ ಷೇರುಗಳಾಗಿ ವಿಂಗಡಿಸಲಾಗುವುದು.

English summary

LIC IPO Estimated At Rs 400 To 600 Per Share: Know More

The initial public offer (IPO) of the giant Life Insurance Corporation (LIC) is likely to be at Rs 400-600 per share assuming
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X